ಸಾರಾಂಶ
ಕೊಪ್ಪಳ ನಗರಸಭೆ ಆಡಳಿತದಿಂದ ಹೊಸ ಪ್ರಯೋಗ
ನಗರಸಭೆಗೆ ಸುತ್ತಾಡಿ ಸುಸ್ತಾದರೂ ಸಿಗದ ಪ್ರಮಾಣಪತ್ರ ಈಗ ಪಡೆಯುವುದು ಸುಲಭಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳನಗರಸಭೆಗೆ ಸುತ್ತಾಡಿ ಸುತ್ತಾಡಿ ಸಾರ್ವಜನಿಕರಿಗೆ ಸುಸ್ತಾಗಿ ಹೋಗುತ್ತಿತ್ತು. ದಾಖಲೆ ಪಡೆಯಲು, ಟ್ಯಾಕ್ಸ್ ಪಾವತಿಸಲು ಸೇರಿದಂತೆ ಎಲ್ಲದಕ್ಕೂ ಯಾತನೆ ಅನುಭವಿಸುವುದು ಸಾಮಾನ್ಯವಾಗಿತ್ತು. ಆದರೆ, ಈಗ ಆಡಳಿತದಲ್ಲಿ ಕ್ಷೀಪ್ರ ಬದಲಾವಣೆ ಆಗಿದ್ದು, ನಗರಸಭೆಯ ಆಡಳಿತವೇ ನಾಗರೀಕರ ಮನೆ ಬಾಗಿಲಿಗೆ ಹೋಗುತ್ತಿದೆ. ಅಷ್ಟೇ ಅಲ್ಲ, ಅಂದೇ ಫಾರ್ಮ್ ನಂ. 3(ಇ ಸ್ವತ್ತು) ಪ್ರಮಾಣಪತ್ರ ಸಹ ನೀಡಲಾಗುತ್ತದೆ.
ಕೊಪ್ಪಳದ ನಗರಸಭೆಯ ಇತಿಹಾಸದಲ್ಲಿಯೇ ಇದೊಂದು ಹೊಸ ಪ್ರಯೋಗ. ವಾರ್ಡ್‌ವಾರು ಈ ಪ್ರಕ್ರಿಯೆ ನಡೆಯಲಿದ್ದು, ಎರಡು-ಮೂರು ವಾರ್ಡ್‌ಗಳನ್ನು ಸೇರಿ, ಸ್ಥಳ ನಿಗದಿ ಮಾಡಿ, ಅಲ್ಲಿಯೇ ಆಡಳಿತ ಕಾರ್ಯನಿರ್ವಹಿಸುತ್ತಿದೆ.ಮೊದಲ ದಿನ ಯಶಸ್ವಿ:
ನಗರಸಭೆಯ 1ರಿಂದ 3ನೇ ವಾರ್ಡ್‌ಗಳಿಗಾಗಿ ನಗರದ ಶಿರಸಪ್ಪಯ್ಯನ ಮಠದ ಹತ್ತಿರ ತಾತ್ಕಾಲಿಕ ಕಚೇರಿ ತೆರೆಯಲಾಗಿದೆ.ಮೂರು ವಾರ್ಡ್‌ಗಳ ನಾಗರಿಕರು ಅಲ್ಲಿಯೇ ತಮ್ಮ ಶುಲ್ಕ ಪಾವತಿ ಮಾಡಿ, ಫಾರ್ಮ್ ನಂ. 3 ಪಡೆಯುವುದು, ಇತರ ಅನುಮತಿ ಪಡೆದರೂ ಇದು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ನಗರಸಭೆ ವ್ಯಾಪ್ತಿಯಲ್ಲಿ ಇ ಸ್ವತ್ತು ತಂತ್ರಾಂಶವನ್ನು ಸರಳೀಕರಣಗೊಳಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿ ಪಡೆದು, ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ 3 ವಿತರಿಸಲು ಶಿಬಿರ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಶಿಬಿರಗಳಿಗೆ ಭೇಟಿ ನೀಡಿ, ತಮ್ಮ ಇ ಸ್ವತ್ತು ಪ್ರಮಾಣಪತ್ರವನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ.ಯಾವ ವಾರ್ಡಿನಲ್ಲಿ ಎಂದೆಂದು?:1ರಿಂದ 3ನೇ ವಾರ್ಡ್‌ಗಳ ಶಿಬಿರ ಸೋಮವಾರ ಶಿರಸಪ್ಪಯ್ಯನಮಠದ ಹತ್ತಿರ ನಡೆಯಿತು. 4ರಿಂದ 12 ವಾರ್ಡ್‌ಗಳ ಶಿಬಿರ ಸಾಲರಜಂಗ್ ಮಾರುಕಟ್ಟೆಯ ಬಳಿ ನ. 26ರಂದು, 5ರಿಂದ 9 ವಾರ್ಡ್‌ಗಳ ಶಿಬಿರ ಗಡಿಯಾರಕಂಬದ ಹತ್ತಿರ ನ. 27ರಂದು, 10ರಿಂದ 16 ವಾರ್ಡ್‌ಗಳ ಶಿಬಿರ ಪ್ಯಾಟಿ ಈಶ್ವರ ದೇವಸ್ಥಾನದ ಬಳಿ ನ.28ರಂದು, 17ರಿಂದ 20 ವಾರ್ಡ್‌ಗಳ ಶಿಬಿರ ಬಹಾರ್ ಪೇಟೆ ಶಾಲೆಯ ಹತ್ತಿರ ನ. 29ರಂದು, 21 ರಿಂದ 23 ವಾರ್ಡ್‌ಗಳ ಶಿಬಿರ ಮೈನಳ್ಳಿ ಗೌಡರ ಮನೆಯ ಹತ್ತಿರ ನ. 30ರಂದು, 24ರಿಂದ 26 ವಾರ್ಡ್‌ಗಳ ಶಿಬಿರ ಕಿನ್ನಾಳ ರಸ್ತೆಯ ಐಬಿ ಎದುರುಗಡೆ ಡಿ. 2 ರಂದು, 27ರಿಂದ 29 ವಾರ್ಡ್‌ಗಳ ಶಿಬಿರ ಬಸವೇಶ್ವರ ವೃತ್ತದ ಹತ್ತಿರ ಡಿ. 3ರಂದು, 30 ಮತ್ತು 31 ವಾರ್ಡ್‌ಗಳ ಶಿಬಿರ ಈಶ್ವರ ಪಾರ್ಕ್ ಹತ್ತಿರ ಡಿ. 4ರಂದು ಹಮ್ಮಿಕೊಳ್ಳಲಾಗಿದೆ.
ಏನೇನು ತರಬೇಕು:ನೋಂದಾಯಿತಿ ಖರೀದಿ ಪತ್ರ, ಹಕ್ಕು ಪತ್ರ, ಖಾತಾ ನೋಂದಣಿ, ಬದಲಾವಣೆ ಪ್ರತಿ, ತೆರಿಗೆ ಪಾವತಿ ಪ್ರತಿ, ಮತದಾರರ ಗುರುತಿನ ಚೀಟಿ, ಭಾವಚಿತ್ರ, ಎನ್ ಎ ಪ್ರತಿ, ಕಟ್ಟಡ ಪರವಾನಿಗೆ ಸೇರಿದಂತೆ ಮೊದಲಾದ ದಾಖಲೆಗಳನ್ನು ಜೊತೆಯಲ್ಲಿ ತರಬೇಕು.