ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದೆ. ಇದರ ಸರ್ವತೋಮುಖ ಅಭಿವೃದ್ಧಿಯಾಗಬೇಕಾಗಿದೆ. ಬರುವ ವರ್ಷಗಳಲ್ಲಿ ಕಾರ್ಖಾನೆ ಅಭಿವೃದ್ಧಿಗಾಗಿ ಪ್ರಣಾಳಿಕೆ ರೂಪಿಸಲಾಗಿದೆ. ಕಾರ್ಖಾನೆಯ ಕಬ್ಬು ಹೆಚ್ಚು ಅರಿಯುವ ಸಾಮರ್ಥ್ಯ ಹೆಚ್ಚಿಸುವುದು, ಆಧುನಿಕರಣ ಗೊಳಿಸುವುದು, ಹಳೆ ಸಾಲ ಹಂತ ಹಂತವಾಗಿ ಕಡಿಮೆ ಮಾಡುವುದು, ಸರಿಯಾಗಿ ಬಿಲ್ ಪಾವತಿಸುವುದು, ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡುವುದು ಸೇರಿದಂತೆ ಕಾರ್ಖಾನೆ ಮಕ್ಕಳಿಗೆ ಅನುಕೂಲವಾಗುವಂತೆ ಮಾಧ್ಯಮಿಕ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಿಸುವುದು, ಕಾರ್ಖಾನೆಯ ಸಂಸ್ಥಾಪಕರ ಮ್ಯೂಸಿಯಂ ನಿರ್ಮಾಣ ಮಾಡುವುದು ಇಂತಹ ವಿವಿಧ ಯೋಜನೆಗಳು ರೂಪಿಸಲಾಗಿದ್ದು, ಕಾರ್ಖಾನೆಯನ್ನು ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತವಾಗಿ ನಡೆಸಿ ರಾಜ್ಯದಲ್ಲಿ ಮಾದರಿ ಸಕ್ಕರೆ ಕಾರ್ಖಾನೆಯನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದರು. ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪೆನಲ್‌ದಿಂದಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮತ ನೀಡಿವಂತೆ ರೈತರಲ್ಲಿ ವಿನಂತಿಸಿದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರ ಅಪಾರ ಕೊಡುಗೆ ಇದೆ. ಇವತ್ತು ಕಾರ್ಖಾನೆ ಕಷ್ಟದಲ್ಲೂ ಇದ್ದರು ಉಳಿದಿದೆ ಎಂದರೇ ಅದಕ್ಕೆ ಕಾರಣ ರೈತರು , ಕಾರ್ಖಾನೆ ಮಾಲೀಕತ್ವದಲ್ಲಿ ಹೋಗದೆ ಸಹಕಾರಿಯಾಗಿ ಉಳಿಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳು ರೂಪಿಸಲಾಗಿದೆ ಪಕ್ಷಾತೀತವಾಗಿ ಕಾರ್ಖಾನೆ ಉಳಿಸುವ ಕೆಲಸ ಮಾಡೋಣ ಹಂತ ಹಂತವಾಗಿ ಅಭಿವೃದ್ಧಿ ಪಡಿಸಿ ಮತ್ತೆ ಮಲಪ್ರಭಾ ಸಕ್ಕರೆ ಕಾರ್ಖಾನೆಯ ಗತ ವೈಭವ ಮರುಕಳಿಸುವಂತೆ ಮಾಡೋಣ ಎಂದರು.ಖಾನಾಪುರ ಶಾಸಕ ವಿಠಲ ಹಲಗೇಕರ ಮಾತನಾಡಿ, ಇವತ್ತು ಈ ಕಾರ್ಖಾನೆ ಉಳಿಯಬೇಕಾದರೇ ಎಲ್ಲರೂ ಒಂದಾಗಿ ಶ್ರಮಿಸಬೇಕಾಗಿದೆ. ಈ ಕಾರ್ಖಾನೆ ರೈತರಿಗೆ ಬಹಳ ಅನುಕೂಲಕರವಾಗಿದ್ದು, ಮತ್ತೆ ಅದಕ್ಕೆ ಜೀವ ತುಂಬುವಂತ ಕೆಲಸ ಮಾಡೋಣ. ರಾಜಕೀಯವಾಗಿ ಏನೇನೋ ಮಾತನಾಡುತ್ತಾರೆ. ಆದರೆ, ರೈತರ ಸಮಸ್ಯೆ ಯಾರು ನೋಡುತ್ತಾರೆ ನಾವೆಲ್ಲ ಪಕ್ಷಾತೀತವಾಗಿ ಕಾರ್ಖಾನೆ ಗಾಗಿ ಶ್ರಮಿಸೋಣ ಇದರ ಅಭಿವೃದ್ಧಿಗಾಗಿ ಪ್ರಣಾಳಿಕೆ ರೂಪಿಸಲಾಗಿದೆ. ಇದನ್ನು ಸರಿಯಾಗಿ ನಿರ್ವಹಿಸಲು ಒಳ್ಳೆಯ ನಾಯಕ ಬೇಕು. ಇದಕ್ಕೆ ಮುಂದಿನ ಕಾರ್ಖಾನೆಯ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಎಂದು ಘೋಷಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಹೊಳಿ, ಸುರೇಶ ಹುಲಿಕಟ್ಟಿ, ಫಕೀರಪ್ಪ ಸಕ್ರೆಣ್ಣವರ, ಶಿವನಗೌಡ ಪಾಟೀಲ, ಮುದುಕಪ್ಪ ಮರಡಿ, ಶಂಕರಗೌಡ ಪಾಟೀಲ, ಕೃಷ್ಣ ಬಾಳೆಕುಂದ್ರಿ, ಪ್ರಕಾಶಗೌಡ ಪಾಟೀಲ, ವಿನಾಯಕ ಮರಡಿ, ಮಹಾಂತೇಶ ಮತ್ತಿಕೊಪ್ಪ ಸೇರಿದಂತೆ ಇತರರು ಇದ್ದರು.