ಕೂಲಿಕಾರರ ಮಕ್ಕಳಿಗೆ ಆಸರೆಯಾದ ಕೂಸಿನ ಮನೆ

| Published : Feb 04 2024, 01:35 AM IST

ಸಾರಾಂಶ

ಗೌರ (ಬಿ) ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಆರಂಭವಾಗಿದ್ದರಿಂದ ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಹೋಗಲು ಅನುಕೂಲವಾಗಿದೆ.ಗೌರ (ಬಿ) ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಮೂಲ ಸೌಲಭ್ಯ ಹೊಂದಿರುವ ಸುಂದರವಾದ ಶಿಶು ಪಾಲನಾ ಕೇಂದ್ರ ‘ಕೂಸಿನ ಮನೆ’ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನ ಅಲ್ಲಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು, ಕೆಲಸಕ್ಕೆ ಹೋಗುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗುವಂತೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಆರಂಭಿಸಲಾಗಿದೆ. ಗೌರ (ಬಿ) ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಕೂಸಿನ ಮನೆ ಆರಂಭವಾಗಿದ್ದರಿಂದ ಮಹಿಳೆಯರು ತಮ್ಮ ಮಕ್ಕಳನ್ನು ಬಿಟ್ಟು ಹೋಗಲು ಅನುಕೂಲವಾಗಿದೆ.ಗೌರ (ಬಿ) ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಮೂಲ ಸೌಲಭ್ಯ ಹೊಂದಿರುವ ಸುಂದರವಾದ ಶಿಶು ಪಾಲನಾ ಕೇಂದ್ರ ‘ಕೂಸಿನ ಮನೆ’ ಆರಂಭವಾಗಿದೆ. ಮಕ್ಕಳನ್ನು ಅಲ್ಲಿರುವ ಮಹಿಳಾ ಕಾರ್ಮಿಕರು ನೋಡಿಕೊಳ್ಳುತ್ತಾರೆ.ಮಕ್ಕಳು ಆಟವಾಡುತ್ತಿದ್ದರು.ಅವರಿಗೆ ಉಪಾಹಾರ ನೀಡಲಾಗಿತ್ತು.

ಕೂಸಿನ ಮನೆಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಮಕ್ಕಳಿಗೆ ಶುದ್ಧೀಕರಿಸಿದ ನೀರು ಮತ್ತು ಆಟಿಕೆ ಸಾಮಾನುಗಳನ್ನು ನೀಡಲಾಗಿದೆ. ಮೇಲಿಂದ ಮೇಲೆ ಕೂಸಿನ ಮನೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ’ ಎಂದು ಗ್ರಾಮಸ್ಥರು ಹೇಳಿದರು.

ಗೌರ (ಬಿ) ಗ್ರಾಮ ಪಂಚಾಯತಿ ಅಧ್ಯಕ್ಷೆ ಶಬಾನಾ ಬೇಗಂ ಇಮಾಮ್ ಸಾಬ ಶೇಖ ಮಾತನಾಡಿ, ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಕೂಸಿನ ಮನೆಯನ್ನು ನೋಡಿಕೊಳ್ಳುವವರಿಗೆ ನರೇಗಾ ಅಡಿಯಲ್ಲಿ ದಿನದ ಕೂಲಿ ನೀಡಲಾಗುತ್ತದೆ. ಸರ್ಕಾರ ಕೂಸಿನ ಮನೆಗೆ ₹1 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಮುಂದೆ ಅನುದಾನ ಅವಶ್ಯಕತೆ ಇದ್ದರೆ ಗ್ರಾಮ ಪಂಚಾಯತಿ ತೆರಿಗೆ ಹಣ ಇಲ್ಲವೇ 15ನೇ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡಲಾಗುತ್ತದೆ’ ಎಂದು ಹೇಳಿದರು.

ಕೂಸಿನ ಮನೆ ಆರಂಭೋತ್ಸವ ಕಾರ್ಯಕ್ರಮದಲ್ಲಿ ಲಕ್ಷ್ಮಿ ಲಕ್ಷ್ಮಿಪುತ್ರ ನಿಂಬರಗಿ, ಸರಸ್ವತಿ ನಿಂಬರಗಿ, ಹೇಮಾ ಹೊಸಮನಿ, ಸಿದ್ದರಾಮಪ್ಪ ಪಾಟೀಲ, ಮಾರುತಿ ಮಾಂಗ, ಸಿಬ್ಬಂದಿ ಶರಣು ತಳವಾರ, ಮಡೆಮ್ಮಾ ಕುಂಬಾರ, ಶರಣು ದಿವಾಣಜಿ ಇತರರಿದ್ದರು.