ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್ (ರಿ) ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಅಂತರಶಾಲಾ ವಿಷಯಾಧಾರಿತ ರಸಪ್ರಶ್ನೆ” ವಿದ್ಯಾರ್ಥಿಗಳನ್ನು ಅಪಾರವಾಗಿ ಸೆಳೆಯುವಲ್ಲಿ ಯಶಸ್ವಿಯಾಯ್ತು.ಕಾರ್ಯಕ್ರಮವನ್ನು ಸರ್ವಜ್ಞ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಐಐಟಿಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐ.ಎ.ಎಸ್., ಐ.ಪಿ.ಎಸ್., ನೀಟ್, ಜೆಇಇ, ಸಿಇಟಿ, ಕೆ.ಪಿ.ಎಸ್.ಸಿ. ಗಳಲ್ಲಿ ಕೇವಲ ಬಹುಆಯ್ಕೆ ಪ್ರಶ್ನೆಗಳಿರುವವು ಹಾಗಾಗಿ 10ನೇ ತರಗತಿಯಿಂದಲೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಈ ಹಂತದಲ್ಲಿಯೇ ಬಹು ವಸ್ತುನಿಷ್ಠ ಆಯ್ಕೆ ಪ್ರಶ್ನೆಗಳಿರುವ ರಸಪ್ರಶ್ನೆ ನಡೆಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ವೃದ್ಧಿಸಿಕೊಳ್ಳಲು ಹಾಗೂ ಸ್ಪರ್ಧಾ ಸಾಮರ್ಥ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಹಾಯವಾಗುತ್ತದೆ. ಬೇರೆ-ಬೇರೆ ಶಾಲೆಗಳ ಮಕ್ಕಳ ಜೊತೆಗೆ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುತ್ತದೆ ಎಂದರು.
ಸರ್ವಜ್ಞ ಕಾಲೇಜಿನ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಹೇಗೆ ಎದುರಿಸಬೇಕೆಂದು ತಿಳಿಸುತ್ತಾ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ವಿಷಯಗಳಲ್ಲಿ ವಸ್ತುನಿಷ್ಠ ರಸಪ್ರಶ್ನೆ ಪ್ರಶ್ರೆಗಳು ವಾರ್ಷಿಕ ಪರೀಕ್ಷೆಯ ಮಾದರಿಯಂತಿರುತ್ತವೆ.ಒಟ್ಟಾರೆ 74 ಶಾಲೆಗಳಲ್ಲಿ 38-ಇಂಗ್ಲಿಷ್ ಮಾಧ್ಯಮ, 36-ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಪ್ರವೇಶ ಪರೀಕ್ಷೆ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಿಗೆ ಪರೀಕ್ಷೆ ತೆಗೆದುಕೊಂಡು, ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಬೇರೆ-ಬೇರೆಯಾಗಿ ಕ್ವಿಜ್ ಏರ್ಪಡಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಸನ್ಮಾನಿಸಲಾಯಿತು.
ಬಹುಮಾನ ವಿಜೇತ ಶಾಲೆಗಳು: ಇಂಗ್ಲಿಷ್ ಮಾಧ್ಯಮದಲ್ಲಿ ಎಸ್.ಬಿ.ಆರ್. ಪಬ್ಲಿಕ್ ಸ್ಕೂಲ, ಕಲಬುರಗಿ- ಪ್ರಥಮ ಸ್ಥಾನ ₹25,000, ಡಿ.ಎ.ವಿ ಪಬ್ಲಿಕ್ ಸ್ಕೂಲ, ವಾಡಿ- ದ್ವಿತೀಯ ಸ್ಥಾನ ₹15,000, ಅಪ್ಪ ಪಬ್ಲಿಕ್ ಸ್ಕೂಲ, ಕಲಬುರಗಿ- ತೃತೀಯ ಸ್ಥಾನ ₹10,000.ಕನ್ನಡ ಮಾಧ್ಯಮದಲ್ಲಿ ಭೋಗೇಶ್ವರ ಪ್ರೌಢಶಾಲೆ, ಕಲಬುರಗಿ- ಪ್ರಥಮ ಸ್ಥಾನ ₹25,000, ಚೌಡಾಪುರಿ ಹಿರೇಮಠ ಪ್ರೌಢಶಾಲೆ, ಕಲಬುರಗಿ- ದ್ವಿತೀಯ ಸ್ಥಾನ ₹15,000, ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಕಮಲಾಪುರ- ತೃತೀಯ ಸ್ಥಾನ ₹10,000 ಬಹುಮಾನ ವಿತರಿಸಲಾಯಿತು.