ಫ್ಲೈಓವರ್‌ ಓನ್‌ವೇನಲ್ಲಿ ನುಗ್ಗಿದ ಆಟೋಬೈಕ್‌ಗೆ ಡಿಕ್ಕಿಯಾಗಿ ಪ್ರಯಾಣಿಕ ಸಾವು

| Published : May 19 2024, 01:45 AM IST

ಫ್ಲೈಓವರ್‌ ಓನ್‌ವೇನಲ್ಲಿ ನುಗ್ಗಿದ ಆಟೋಬೈಕ್‌ಗೆ ಡಿಕ್ಕಿಯಾಗಿ ಪ್ರಯಾಣಿಕ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಶುಕ್ರವಾರ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಆನೇಕಲ್

ಮದ್ಯಪಾನ ಮಾಡಿ ಪ್ಲೈ ಓವರ್ ಮೇಲೆ ವಿರುದ್ಧ ಧಿಕ್ಕಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದಾಗ ಬೈಕ್‌ಗೆ ಡಿಕ್ಕಿಯಾಗಿ ಆಟೋದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ರೂಪೇನ ಅಗ್ರಹಾರ - ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಶುಕ್ರವಾರ ರಾತ್ರಿ ನಡೆದಿದೆ. ಅಪಘಾತ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಆಟೋ ಪ್ರಯಾಣಿಕ ದಸ್ತಗೀರ (70) ಮೃತಪಟ್ಟವರು. ಘಟನೆಯಲ್ಲಿ ಬೈಕ್‌ ಸವಾರರಾದ ಮಂಜು ಮತ್ತು ತ್ಯಾಗರಾಜ್‌ ಅವರು ಗಾಯಗೊಂಡಿದ್ದಾರೆ. ರೂಪೇನಅಗ್ರಹಾರ ಬಳಿ ಟೋಲ್ ಸೇತುವೆ ಏರಿದ ಆಟೋ ಚಾಲಕ ಶಾಹೀದ್‌ ಸುಮಾರು ಒಂದು ಕಿಲೋ ಮೀಟರ್‌ ದೂರ ಬಂದಾಗ ಟೋಲ್ ಶುಲ್ಕ ಪಾವತಿ ಮಾಡಬೇಕೆಂದು ಯೋಚಿಸಿ ಬಂದ ದಾರಿಯಲ್ಲೇ ವಾಪಸ್ ಹೊರಟಿದ್ದಾನೆ. ಕುಡಿದ ಅಮಲಿನಲ್ಲಿದ್ದ ಚಾಲಕ ಅತಿ ವೇಗವಾಗಿ ಚಲಿಸುತ್ತಾ ಬಂದು ಸಂಚಾರ ನಿಯಮ ಪಾಲಿಸದೇ ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಆಟೋ ಹಿಂಬದಿ ಕುಳಿತಿದ್ದ ವ್ಯಕ್ತಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಇತ್ತ ದ್ವಿಚಕ್ರ ವಾಹನ ಸವಾರ ಮಂಜುನಾಥ್ ಮತ್ತು ಇನ್ನೊಬ್ಬರಿಗೂ ಗಂಭೀರ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಪೂರ್ಣ ಪಾನಮತ್ತನಾಗಿ ಬೇಜವಾಬ್ದಾರಿಯಿಂದ ಆಟೋ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಅಪಘಾತದಿಂದ ಫ್ಲೈಓವರ್‌ನಲ್ಲಿ ತಾಸುಗಟ್ಟಲೇ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿಇಟಿಎಲ್ ಅಧಿಕಾರಿಗಳು ಜಾಗೃತೆವಹಿಸಿದ್ದರೆ ಈ ಅವಘಡ ತಪ್ಪಿಸಬಹುದಿತ್ತು ಎಂದು ಘಂಟೆಗಟ್ಟಲೆ ನಿಂತಿದ್ದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಫ್ಲೈ ಓವರ್ ಮೇಲೆ ಆಗಾಗ ಅಪಘಾತಗಳು ನಡೆಯುತ್ತಿದ್ದು, ಆ್ಯಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಗಸ್ತು ಹೆಚ್ಚಿಸಿ ಅಪಘಾತ ತಡೆಯಬೇಕೆಂದು ಜನತೆ ಆಗ್ರಹಿಸಿದ್ದಾರೆ.