ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡುತ್ತಾನೆ. ಹಸಿವು ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ ಎಂದು ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ: ಉಪವಾಸದ ಒಂದು ತಿಂಗಳಲ್ಲಿ ವ್ಯಕ್ತಿ ಶಿಸ್ತು, ಸಂಯಮ, ಒಳಿತುಗಳನ್ನು ರೂಢಿಸಿಕೊಂಡು ವಿಶಿಷ್ಟ ವ್ಯಕ್ತಿಯಾಗಿ ಮಾರ್ಪಡುತ್ತಾನೆ. ಹಸಿವು ದಾಹವನ್ನು ಸಹಿಸುವ ಸಹನಾಮಯಿಯಾಗುತ್ತಾನೆ ಎಂದು ಮೌಲಾನಾ ಸೈಯ್ಯದ ಪೈಸಲ್ ಸಕಾಫ ಸಾದಾತ ಹೇಳಿದರು.ನಗರದ ಆಸಾರ ಶರೀಫ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಮಾತನಾಡಿದ ಅವರು, ಕೆಡುಕಗಳಿಂದ ದೂರವಿದ್ದು ಕೆಡಕು ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡುತ್ತಾರೆ. ಇಸ್ಲಾಮಿನ ಮಾನವೀಯ ಮೌಲ್ಯಗಳು ವಿಶ್ವಕ್ಕೆಲ್ಲ ಆದರ್ಶವಾಗಿದೆ. ಇಸ್ಲಾಮ ಅರಿಯದವನು ಹಾಗೂ ಸಮಾಜ ಘಾತುಕ ಕಾರ್ಯಗಳಲ್ಲಿ ತೊಡಗಿದರೆ ಅವನು ಇಸ್ಲಾಮಿಯನು ಅಲ್ಲ, ಮಾನವನೂ ಅಲ್ಲ. ಒಂದು ತಿಂಗಳು ಉಪವಾಸ ಮಾಡಿದ ನಂತರ ಇಡೀ ವರ್ಷದ ಉದ್ದಕ್ಕೂ ಮಾನವೀಯ ಮೌಲ್ಯ ಕಾಪಾಡಬೇಕು. ಈದ್ ಅಂದರೆ ಸಂತೋಷವು ಹೌದು, ಜವಾಬ್ದಾರಿಯು ಹೌದು ಎಂದು ಹೇಳಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ನಗರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಆಜಾದ ಪಟೇಲ, ಮುಖಂಡರಾದ ಜಾವೀದ ಕಿಲ್ಲೆದಾರ, ಜಮೀರ ಬಾಗಲಕೋಟ, ಅನೀಷ ಬಂತೋಜಿ, ಮೌಲಾನಾ ಖಾದಿಂ, ಮುಕ್ತಾರ ದಖನಿ, ಸೈಯ್ಯದ ಮುಸ್ತಪಾ ಖಾದರಿ, ಸೈಯ್ಯದ ಶಹಾ ಆಲೇರ ಸಕಾಫ ಸಾದಾತ, ಷೈಯ್ಯದ ಪೆಸಲ್ ಸಕಾಫ ಸಾದಾತ, ಸೈಯ್ಯದ ಅತಿಕುರ್ರ ರಹಮಾನ ಸಕಾಫ ಸಾದಾತ, ಸೈಯ್ಯದ ವಾದಿದ ಸಕಾಫ ಸಾದಾತ, ಸೈಯ್ಯದ ಮುರ್ತುಜಾ ಖಾದ್ರಿ ಸಕಾಫ ಸಾದಾತ ಮುಂತಾದವರು ಉಪಸ್ಥಿತರಿದ್ದರು.