ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನೀರು ಎಂದು ತಿಳಿದು ಟೈಲ್ಸ್ ತೊಳೆಯಲು ಇಟ್ಟಿದ್ದ ಆ್ಯಸಿಡ್ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಉಪ್ಪಲಿ ಬುರುಜ್ ನಿವಾಸಿ ಮೊಹ್ಮದ್‌ಶಫೀಕ್ ಮನಿಯಾರ್(40) ಮೃತ ವ್ಯಕ್ತಿ. ನಗರದ ಎಲ್.ಬಿ.ಎಸ್ ಮಾರುಕಟ್ಟೆಯಲ್ಲಿರುವ ಸಿದ್ದಾರ್ಥ ಬಾರ್‌ನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿದ್ದಾರ್ಥ ಬಾರ್‌ಗೆ ತೆರಳಿದ್ದು, ಅಲ್ಲಿ ಟೇಬಲ್ ಮೇಲೆ ಇರಿಸಲಾದ ಪಾನೀಯವನ್ನು ಸಾರಾಯಿ ಎಂದು ಕುಡಿದಿದ್ದಾನೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನೀರು ಎಂದು ತಿಳಿದು ಟೈಲ್ಸ್ ತೊಳೆಯಲು ಇಟ್ಟಿದ್ದ ಆ್ಯಸಿಡ್ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಉಪ್ಪಲಿ ಬುರುಜ್ ನಿವಾಸಿ ಮೊಹ್ಮದ್‌ಶಫೀಕ್ ಮನಿಯಾರ್(40) ಮೃತ ವ್ಯಕ್ತಿ. ನಗರದ ಎಲ್.ಬಿ.ಎಸ್ ಮಾರುಕಟ್ಟೆಯಲ್ಲಿರುವ ಸಿದ್ದಾರ್ಥ ಬಾರ್‌ನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿದ್ದಾರ್ಥ ಬಾರ್‌ಗೆ ತೆರಳಿದ್ದು, ಅಲ್ಲಿ ಟೇಬಲ್ ಮೇಲೆ ಇರಿಸಲಾದ ಪಾನೀಯವನ್ನು ಸಾರಾಯಿ ಎಂದು ಕುಡಿದಿದ್ದಾನೆ. ಆಗ ಗಂಟಲಲ್ಲಿ ಕೊರೆತ ಶುರುವಾಗಿದೆ. ಅದನ್ನು ಪರಿಶೀಲಿಸಿ ನೋಡಿದಾಗ ಅದು ಟೈಲ್ಸ್ ತೊಳೆಯುವ ಆ್ಯಸಿಡ್ ಎಂದು ಗೊತ್ತಾಗಿದೆ. ಅಷ್ಟರಲ್ಲಿಯೇ ಆತ ಕೆಲಸ ಮಾಡುವ ಅಂಗಡಿಗೆ ತೆರಳಿ ತಲೆ ತಿರುಗಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಘಟನೆಯಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ನಾವು ಕೂಲಿ ಕೆಲಸ ಮಾಡುತ್ತಾ ಉಪಜೀವನ ನಡೆಸುತ್ತಿದ್ದೆವು. ಈಗ ನನಗೆ ಯಾರೂ ದಿಕ್ಕಿಲ್ಲದಂತಾಗಿದೆ, ನನಗೆ ಆಕಾಶವೇ ಕಳಚಿಬಿದ್ದಂತಾಗಿದೆ, ಬಡವರಾದ ನಮಗೆ ನ್ಯಾಯ ಒದಗಿಸಿ ಎಂದು ಕಣ್ಣೀರಿಟ್ಟಿದ್ದು. ನನ್ನ ಪತಿಯ ಸಾವಿಗೆ ಬಾರ್ ಅಂಗಡಿಯವರ ನಿರ್ಲಕ್ಷ್ಯ ಕಾರಣ. ಬಾರ್ ಮಾಲೀಕ, ವ್ಯವಸ್ಥಾಪಕ ಸಿಬ್ಬಂದಿಗಳ ಮೇಲೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಹಿಳೆ ನೀಡಿದ ದೂರಿನ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.;Resize=(128,128))
;Resize=(128,128))
;Resize=(128,128))