ಸಂವಿಧಾನದ ಆಶಯದಲ್ಲಿ ಯಾರನ್ನೂ ಚಾರಿತ್ರ್ಯ ವಧೆ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸಮೂಹ ಮಾಧ್ಯಮಗಳು ಕೂಡ ಜವಾಬ್ದಾರಿ ಹೊಂದಿರುತ್ತವೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಸಂವಿಧಾನದ ಆಶಯದಲ್ಲಿ ಯಾರನ್ನೂ ಚಾರಿತ್ರ್ಯ ವಧೆ ಮಾಡಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸಮೂಹ ಮಾಧ್ಯಮಗಳು ಕೂಡ ಜವಾಬ್ದಾರಿ ಹೊಂದಿರುತ್ತವೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ನವೋದಯ ಕಾಲೇಜಿನಲ್ಲಿ ಸಮೂಹ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಸಂವಿಧಾನಿಕ ಮೌಲ್ಯಗಳಿಗೆ ಅಪಾಯಕಾರಿಯೇ? ಎಂಬ ವಿಷಯದ ಬಗ್ಗೆ ಅಂತರ್ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮೂಹ ಮಾಧ್ಯಮ ಸಮಾಜದಲ್ಲಿ ಹೆಚ್ಚು ಮಹತ್ವ ಹೊಂದಿದೆ. ಒಬ್ಬ ವ್ಯೆಕ್ತಿ ಮೇಲೆ ಆರೋಪ ಕೇಳಿಬಂದಾಗ ಸತ್ಯಾಸತ್ಯತೆ ತಿಳಿಯದೆ, ಚರ್ಚಿಸದೆ ವಿಶ್ಲೇಷಣೆ ಮತ್ತು ತನಿಖೆ ಮಾಡದೆ ಸುದ್ದಿಗಳು ಪ್ರಚಾರವಾದಾಗ ವ್ಯೆಕ್ತಿ ಚಾರಿತ್ರ್ಯ ವಧೆ ಮಾಡಿದಂತಾಗುತ್ತದೆ. ಪುರುಷ ಅಥವಾ ಮಹಿಳೆಯರಿಗೆ ವ್ಯೆಕ್ತಿಗತವಾದ ಅವಮಾನ ನಾನು ಖಂಡಿಸುತ್ತೆನೆ. ಸಾಮಾಜಿಕವಾಗಿ ಹೋದ ಮಾನ ಮತ್ತೆ ಬರುವುದಿಲ್ಲ. ಹೇಗೆ ವ್ಯೆಕ್ತಿ ಚಾರಿತ್ರ್ಯ ವಧೆ ಆಗುತ್ತಿದೆ ಎಂದು ಹೇಳುವುದಾದರೆ ಸ್ಟಿಂಗ್ ಆಪರೇಷನ್ ಸಿದ್ದರಾಮಯ್ಯರವರ ಮೇಲಾಗಿದೆ. ಈ ವಿಚಾರ ತಿರುಗಿ ತಿರುಗಿಕೊಂಡು ಎಚ್.ಡಿ. ಕುಮಾರಸ್ವಾಮಿ ಮೇಲೆ ಆರೋಪ ಮಾಡಿ ಅವರ ಮನೆಯಲ್ಲೇ ಟಿಲಿಫೋನ್ ಎಕ್ಸೇಂಜ್ ಆಗಿದೆ ಎನ್ನಲಾಗುತ್ತಿದೆ. ಕೇಂದ್ರ ಮಂತ್ರಿಗಳಾಗಿ ತಮ್ಮ ಆಪ್ತ ವಲಯದ ಕಾಣದ ಕೈಗಳು ಟೆಲಿಪೋನ್ ಎಕ್ಸೇಚೇಂಜ್ ಮಾಡಿದರೆ ಕುಮಾರಸ್ವಾಮಿ ಕಾಯ್ದುಕೊಂಡು ಕುಳಿತುಕೊಳ್ಳಲು ಸಾಧ್ಯವೆ ? ಯಾರೋ ಮಾಡಿದ ಕೃತ್ಯಕ್ಕೆ ಎಚ್ಡಿಕೆಯೇ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂದು ಹೇಳುವಂತಹ ಚಿತ್ರಣ ಸೃಷ್ಟಿಯಾಗಿದೆ. ಮುಡಾ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಆರೋಪದ ಅಡಿಯಲ್ಲಿ ಹೋದ ಮಾನ ಮತ್ತೆ ಸಿಗುವುದೇ? ನನ್ನ ಮೇಲೂ ಅಪಪ್ರಚಾರವಾಯಿತು. ವ್ಯೆಕ್ತಿಯೊಬ್ಬ ನಾನು ಹೆದರಿಸಿ ಜಮೀನು ಬರಿಸಿಕೊಂಡೆ ಎಂದು ಕಾಂಗ್ರೆಸ್ ಮೂಲದ ಪ್ರಸನ್ನ ಗೌಡ ಎಂಬಾತ ಗೃಹಸಚಿವರಿಗೆ ದೂರು ನೀಡಿದ. ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಮಾಹಿತಿ ಪಡೆದು ನಾನು ತಪ್ಪು ಮಾಡಿದ್ದರೆ ಪೋಲೀಸ್ ಠಾಣೆಯಲ್ಲಿ ಎಫೈಆರ್ ದಾಖಲಿಸಲಿ. ನ್ಯಾಯಾಲಯಕ್ಕೆ ಹೋಗಲಿ. ತಪ್ಪಾಗಿದ್ದರೆ ನಾನು ಶರಣಾಗುತ್ತೇನೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ ಎಂದು ವಿವರಿಸಿದರು.
ತುಮಕೂರಿನ ವಿ.ವಿ. ಪರೀಕ್ಷಾಂಗದ ಮಾಜಿ ಕುಲಸಚಿವರಾದ ಪ್ರೊ. ಕೆ. ಪ್ರಸನ್ನಕುಮಾರ್ ಮಾತನಾಡಿ, ಜಗತ್ತಿನಲ್ಲಿ 200ಕ್ಕೂ ಹೆಚ್ಚು ಸ್ವತಂತ್ರ ಸಾರ್ವಭೌಮ ರಾಷ್ಟ್ರಗಳಿವೆ. ಅನೇಕ ರಾಷ್ಟ್ರಗಳು ಪ್ರಜಾಪ್ರಭುತ್ವ ಅಳವಡಿಸಿಕೊಂಡಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ವ್ಯೆವಸ್ಥೆಯ ಬಗ್ಗೆ ಗಂಭೀರ ಚರ್ಚೆ ಆಗಬೇಕು. ಪರಿವರ್ತನಾಶೀಲ ಸಮಾಜಕ್ಕೆ ಅಣುಗುಣವಾಗಿ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಾಗಿದೆ. ಸಮೂಹ ಮಾಧ್ಯಮ ನಾಲ್ಕನೆ ಅಂಗವಾಗಿ ಕೆಲಸ ನಿರ್ವಹಿಸುತ್ತಿದೆ. ಸಮಾಜ ತಿದ್ದುವ ಮತ್ತು ಸರ್ಕಾರ ಸರಿದಾರಿಯಲ್ಲಿ ನಡೆಸುವುದು ಪತ್ರಿಕೆಗಳ ಕೆಲಸವಾಗಿದೆ. ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು ಪಾರದರ್ಶಕತೆ, ಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ತುಮಕೂರು ವಿವಿ ರಾಜ್ಯಶಾಸ್ತ್ರ ಡಿಆರ್ ಡಾ. ಹೊನ್ನಾಂಜನಯ್ಯ ದಿಕ್ಸೂಚಿ ನುಡಿಯನ್ನಾಡಿದರು. ತುಮಕೂರು ವಿವಿ, ಕುಣಿಗಲ್, ತಿಪಟೂರು, ಹುಳಿಯಾರು ಸೇರಿದಂತೆ ಜಿಲ್ಲಿಯ ವಿವಿಧ ತಾಲೂಕಿನ 16 ಕಾಲೇಜಿನಿಂದ 32 ವಿದ್ಯಾರ್ಥಿಗಳು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ನವೋದಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಚಂದ್ರಶೇಖರ್, ರಾಜ್ಯಶಾಸ್ತ್ರ ಪರೀಕ್ಷಾ ಮಡಳಿಯ ಅಧ್ಯಕ್ಷ ಶಿವರಾಮಯ್ಯˌ ಕಾಲೇಜೀನ ಪ್ರಾಂಶುಪಾಲರಾದ ಡಾ.ಸಿ.ರವಿಕುಮಾರ್ ಉಪಸ್ಥಿತರಿದ್ದರು. ಡಿ. ಅರುಣ್ ಕುಮಾರ್ ಸ್ವಾಗತಿಸಿ ಶಶಾಂಕ್ ನಿರೂಪಿಸಿ, ಡಾ.ಚಂದ್ರಶೇಖರ್ ವಂದಿಸಿದರು.