ಸಾರಾಂಶ
ಕನ್ನಡಫ್ರಭ ವಾರ್ತೆ ಬೀದರ್ವ್ಯಕ್ತಿಯ ವ್ಯಕ್ತಿತ್ವ ವಿಕಸನವು ಅಕ್ಷರ ಸಂಸ್ಕೃತಿಯಿಂದ ಮಾತ್ರ ಸಾಧ್ಯವಿದೆ, ಕನ್ನಡ ಭಾಷೆಯ ರಾಜಾಶ್ರಯ ದೊರಕದೆ ಇದ್ದಲ್ಲಿ ಅಂದು ಅನೇಕ ಮಠಾಧೀಶರು ಕನ್ನಡ ಭಾಷೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ ನುಡಿದರು.ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ 173ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತೋತ್ಸವ ನಿಮಿತ್ತ ಅನುಭವ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ ನಾಡು-ನುಡಿ ಬೆಳೆಸುವುದರಲ್ಲಿ ಡಾ. ಚನ್ನಬಸವ ಪಟ್ಟದೇವರು ಆಗಿದ್ದಾರೆ. ಅನೇಕ ಭಾಷೆಗಳ ದಬ್ಬಾಳಿಕೆಯಲ್ಲಿ ಕನ್ನಡದ ಗುರುಗಳಾದ ಪಟ್ಟದೇವರು ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸಿದ್ದಾರೆ. ಬಸವಾದಿ ಶರಣರು ರಚಿಸಿದ ವಚನಗಳು ಕನ್ನಡ ಭಾಷೆಯ ಶ್ರೀಮಂತಿಕೆಗೆ ಪ್ರಮುಖ ಪಾತ್ರವಾಗಿದೆ ಎಂದು ನುಡಿದರು. ಭಾಲ್ಕಿಯ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಜಗತ್ತಿನ ಇತಿಹಾಸದಲ್ಲಿ ಅಕ್ಕಮಹಾದೇವಿಯವರು ವೈರಾಗ್ಯದ ಮೇರು ವ್ಯಕ್ತಿತ್ವದ ಮಹಾಚೇತನರವರಾಗಿದ್ದರು ಎಂದರು.ಚಿಕ್ಕಮಂಗಳೂರಿನ ಸಿಂಗಟಗೇರಿಯ ಕಡೂರಿನ ಚಿಂತಕರಾದ ಡಾ. ಜಿ.ವಿ. ಮಂಜುನಾಥ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆ, ಪ್ರೊ. ಉಮಾಕಾಂತ ಮೀಸೆ, ದೀಪಾ ಸೋಮಶೇಖರ ಬಿರಾದಾರ ಚಿದ್ರಿ, ಲಕ್ಷ್ಮೀಬಾಯಿ ಬಿರಾದಾರ, ಸಂಗ್ರಾಮಪ್ಪ ಬಿರಾದಾರ, ಶ್ರೀಕಾಂತ ಬಿರಾದಾರ, ಮಹಾಲಿಂಗಪ್ಪಾ ಬೆಲ್ದಾಳೆ, ಸಂಗ್ರಾಮ ಎಂಗಳೆ, ಪಂಚಾಕ್ಷರಿ ಪುಣ್ಯಶೆಟ್ಟಿ, ಶ್ರೀಕಾಂತ ಸ್ವಾಮಿ, ನಾಗಶೆಟ್ಟಿ ಧರ್ಮಪೂರೆ, ಬಸವರಾಜ ಹಳ್ಳೆ, ಶರಣಪ್ಪಾ ಚಿಮಕೋಡೆ, ಸೂರ್ಯಕಾಂತ ಮಾಳಗೆ, ಶಾಮರಾವ ಮ್ಯಾಕರೆ, ಮಲ್ಲಿಕಾರ್ಜುನ ಹುಡುಗೆ, ವಿಜಯಲಕ್ಷ್ಮೀ ಹುಗ್ಗೆಳ್ಳಿ, ಮೀನಾಕ್ಷಿ ಪಾಟೀಲ, ಕಸ್ತೂರಿಬಾಯಿ ಬಿರಾದಾರ, ಶಕುಂತಲಾ ಮಲ್ಕಪ್ಪನೋರ್ ಭಾಗವಹಿಸಿದ್ದರು.