ತಮಗಾಗಿ ಬದುಕದೆ ಸಮಾಜಕ್ಕಾಗಿ ತಮ್ಮ ಬದುಕನ್ನು ಸವೆಸುವವರ ಜನ್ಮದಿನಗಳನ್ನು ಸಮಾಜ ಆಚರಿಸುತ್ತದೆ. ಬಸವೇಶ್ವರರು, ಗುರುಮಲ್ಲೇಶ್ವರರು, ಶಿವರಾತ್ರೀಶ್ವರರು ಸೇರಿದಂತೆ ಸಮಾಜಕ್ಕೆ ದಾರಿ ತೋರಿದ ಮಹನೀಯರ ಜೀವನವೇ ಇದಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ಮನುಷ್ಯ ಕೇವಲ ಅಂತರಂಗದಲ್ಲಿ ಮಾತ್ರವಲ್ಲ, ಬಹಿರಂಗವಾಗಿಯೂ ಶುದ್ಧನಾಗಿರಬೇಕು ಎಂಬುದನ್ನು ಧರ್ಮ ಸಾರುತ್ತದೆ ಎಂದು ಚಿದರವಳ್ಳಿ ಪಾರಮಾರ್ಥಿಕ ಮಠದ ಪೀಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲೂಕಿನ ಎಂ.ಎಲ್. ಹುಂಡಿ ಗ್ರಾಮದ ಉಕ್ಕಲಗೆರೆ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ವಿವಿಧ ಸರ್ಕಾರಿ ಇಲಾಖೆಗಳ ಪದನಿಮಿತ್ತ ಪದಾಧಿಕಾರಿಗಳಾಗಿ ಆಯ್ಕೆಯಾದ ಗಣ್ಯರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ತಮಗಾಗಿ ಬದುಕದೆ ಸಮಾಜಕ್ಕಾಗಿ ತಮ್ಮ ಬದುಕನ್ನು ಸವೆಸುವವರ ಜನ್ಮದಿನಗಳನ್ನು ಸಮಾಜ ಆಚರಿಸುತ್ತದೆ. ಬಸವೇಶ್ವರರು, ಗುರುಮಲ್ಲೇಶ್ವರರು, ಶಿವರಾತ್ರೀಶ್ವರರು ಸೇರಿದಂತೆ ಸಮಾಜಕ್ಕೆ ದಾರಿ ತೋರಿದ ಮಹನೀಯರ ಜೀವನವೇ ಇದಕ್ಕೆ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿಯಲ್ಲಿ ಅಂತರಂಗ ಮತ್ತು ಬಹಿರಂಗ ಒಂದೇ ಆಗಿದ್ದರೆ ಆತ ನೇರ ನಿಷ್ಠೆಯಿಂದ ಬದುಕುತ್ತಾನೆ. ಅಂತಹವರಲ್ಲಿ ಸಿಟ್ಟು ಸಹಜವಾಗಿ ಕಂಡರೂ ಅದು ಪ್ರಾಮಾಣಿಕತೆಯ ಪ್ರತೀಕವಾಗಿರುತ್ತದೆ. ಇಂದಿನ ಕಾರ್ಯಕ್ರಮದ ರೂವಾರಿಯಾದ ಮಲ್ಲೇಶ್ ಅವರಲ್ಲಿಯೂ ಆ ನೇರತನವಿದೆ ಎಂದು ಹೇಳಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಯಾನಂದ್ ಪಟೇಲ್ ಮಾತನಾಡಿದರು.

ಹಲವಾರ ಮುಡುಕನಪುರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಉತ್ತೀರ್ಣರಾದ ಮಧುಶ್ರೀ, ಭೂಮಿಕಾ, ಪದ್ಮಶ್ರೀ, ನಾಗರಾಜು, ಸಂಜಯ್ ಹಾಗೂ ಶಿವಾನಂದ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕಳ್ಳೀಪುರ ಮಠದ ಗುರುಪಾದಸ್ವಾಮಿ, ಕೃಷಿಕ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ಶಿವಮಲ್ಲಪ್ಪ, ಬನ್ನೂರು ಬಸವ ಬಳಗದ ಅಧ್ಯಕ್ಷ ಗುರುಸ್ವಾಮಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಕೆಡಿಪಿ ಸದಸ್ಯ ಚಂದ್ರಧರ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಬಿನಿ ಮಹಾಮಂಡಲದ ನಿರ್ದೇಶಕ ಕುಮಾರಸ್ವಾಮಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ನವೀನ್, ಉಪನ್ಯಾಸಕ ಕುಮಾರಸ್ವಾಮಿ, ಕಲಾವಿದ ಪ್ರಭುಸ್ವಾಮಿ, ಡೇರಿ ಅಧ್ಯಕ್ಷ ಮಹಾದೇವಸ್ವಾಮಿ, ನಂಜುಂಡಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ಎಸ್‌.ಎಂ‌.ಆರ್. ಪ್ರಕಾಶ್, ಕಾರ್ಯದರ್ಶಿ ಶಿವು, ಪುರಸಭೆ ಮಾಜಿ ಸದಸ್ಯ ಕಿರಣ್, ಮಾಯಪ್ಪ, ನಿವೃತ್ತ ಕೆಇಬಿ ನೌಕರ ಸಿದ್ದಲಿಂಗಸ್ವಾಮಿ ಇದ್ದರು.