ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

| Published : Sep 13 2024, 01:32 AM IST

ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೇಂಗ್ರೆ ಮಾವಿನಕಟ್ಟಾ ನಿವಾಸಿ ಮಾರುತಿ ಚೌಡಯ್ಯ ದೇವಾಡಿಗ(62) ಮೃತಪಟ್ಟ ವ್ಯಕ್ತಿ.

ಭಟ್ಕಳ: ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶ ಮೂರ್ತಿ ವಿರ್ಸಜನೆಗೆ ಮೆರವಣಿಗೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬೇಂಗ್ರೆ ಮಾವಿನಕಟ್ಟಾ ನಿವಾಸಿ ಮಾರುತಿ ಚೌಡಯ್ಯ ದೇವಾಡಿಗ(62) ಮೃತಪಟ್ಟ ವ್ಯಕ್ತಿ.

ಪಟ್ಟಣದಲ್ಲಿ ಬುಧವಾರ ರಾತ್ರಿ 4 ಸಾರ್ವಜನಿಕ ಗಣಪತಿಗಳನ್ನು ವಿರ್ಸಜನೆಗಾಗಿ ಚೌಥನಿ ಹೊಳೆಗೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತಿತ್ತು. ಮೆರವಣಿಗೆ ಹೂವಿನ‌ಮಾರುಕಟ್ಟೆಯ ಗುಡಿಗಾರರ ಮನೆ ಸಮೀಪ ಸಾಗುತ್ತಿದ್ದ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮಾರುತಿ ದೇವಾಡಿಗ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೃತ ಮಾರುತಿ ದೇವಾಡಿಗ ಪಟ್ಟಣ ಜನತಾ ಸೊಸೈಟಿಯ ಉದ್ಯೋಗಿಯಾಗಿ 2 ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.ನಿಯಮ ಉಲ್ಲಂಘನೆ: ಪೊಲೀಸರಿಂದ ಡಿಜೆ ಜಪ್ತಿ

ಕುಮಟಾ: ಸಾರ್ವಜನಿಕ ಗಣೇಶ ವಿಸರ್ಜನೆ ವೇಳೆ ನಿಯಮ ಮೀರುವಂತೆ ಹೆಚ್ಚಿನ ಧ್ವನಿ ಸೂಸುವಂತೆ ಧ್ವನಿವರ್ಧಕ(ಡಿಜೆ) ಬಳಸಿದ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಡಿಜೆ ಸಾಮಗ್ರಿಗಳನ್ನು ಪೊಲಿಸರು ಜಪ್ತಿ ಮಾಡಿದ್ದಾರೆ.ಪಟ್ಟಣದ ಶಶಿಹಿತ್ತಲದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ, ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವಂತೆ, ಆರೋಗ್ಯಕ್ಕೆ ಹಾನಿ ಉಂಟುಮಾಡುವಂತೆ ಹಾಗೂ ಪರಿಸರಮಾಲಿನ್ಯವನ್ನು ಮಾಡುವ ಹೆಚ್ಚಿನ ಶಬ್ದವನ್ನು ಹೊರಸೂಸುತ್ತಾ ಗಣೇಶ ವಿಸರ್ಜನೆಯ ಮೆರವಣಿಗೆಯನ್ನು ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆದ್ದರಿಂದ ಪೊಲೀಸರು ಧ್ವನಿವರ್ಧಕ ಸಂಬಂಧಿ ಸಾಧನ ಸಲಕರಣೆಗಳು, ಧ್ವನಿವರ್ಧಕಗಳು(ಡಿಜೆ), ವಾಹನಗಳು, ಜನರೇಟರ್ ಹಾಗೂ ಡಿಜೆಗೆ ಸಂಬಂಧಿಸಿದ ಸಲಕರಣೆಗಳನ್ನು ಜಪ್ತಿ ಮಾಡಿ, ಡಿಜೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.