ಸಾಹಿತ್ಯದ ಜೀವಂತ ಉತ್ಸವವೇ ಕವಿಗೋಷ್ಠಿ

| Published : Oct 13 2025, 02:00 AM IST

ಸಾಹಿತ್ಯದ ಜೀವಂತ ಉತ್ಸವವೇ ಕವಿಗೋಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಕವಿಗೋಷ್ಠಿ ಎಂದರೆ ಕವಿತೆಯ ಪಠಣದ ವೇದಿಕೆಯಲ್ಲ ಸಾಹಿತ್ಯದ ಜೀವಂತ ಉತ್ಸವ ಭಾವನೆಗಳ ಸಂಭ್ರಮ ಮತ್ತು ಚಿಂತನೆಯ ಮೇಳವೆಂದು ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾದಂತ ವಾತಾವರಣ ನಿರ್ಮಿಸಿ ಕೊಡುವಂತಹ ವೇದಿಕೆಯೇ ಕವಿಗೋಷ್ಠಿ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾದಂತ ವಾತಾವರಣ ನಿರ್ಮಿಸಿ ಕೊಡುವಂತಹ ವೇದಿಕೆಯೇ ಕವಿಗೋಷ್ಠಿ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕನ್ನಡ ಸಾಹಿತ್ಯ ಪರಿಷತ್ ಕಳೆದ ಹಲವು ವರ್ಷಗಳಿಂದ ತಾಲೂಕಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದು ಪ್ರತಿಭಾವಂತರನ್ನು ಒಂದೆಡೆ ಸೇರಿಸಿ ಕವಿತೆಗಳ ವಾಚನಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಅಶೋಕ್ ಕುಮಾರ್ ಶ್ಲಾಘಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ನೌಕರರ ಸಂಘ, ಸರ್ಕಾರಿ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ ಕವಿಗೋಷ್ಠಿ ಎಂದರೆ ಕಾವ್ಯ ಪ್ರೇಮಿಗಳ ಮನಸ್ಸನ್ನು ಒಂದೆಡೆ ಸೇರಿಸುವ ಪರಿಪೂರ್ಣ ವೇದಿಕೆ ಎಂದರು.

ಸಾಹಿತ್ಯದ ಜೀವಂತ ಉತ್ಸವ

ಇದು ಕೇವಲ ಕವಿತೆಯ ಪಠಣದ ವೇದಿಕೆಯಲ್ಲ ಸಾಹಿತ್ಯದ ಜೀವಂತ ಉತ್ಸವ ಭಾವನೆಗಳ ಸಂಭ್ರಮ ಮತ್ತು ಚಿಂತನೆಯ ಮೇಳವೆಂದು ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾದಂತ ವಾತಾವರಣ ನಿರ್ಮಿಸಿ ಕೊಡುವಂತಹ ವೇದಿಕೆಯೇ ಕವಿಗೋಷ್ಠಿಯಾಗಿದೆಯೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸ ಮಾತನಾಡಿ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮದ ಉದ್ದೇಶ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುತ್ತಿರುವ ವಿವಿಧ ಕಾರ್ಯ ಚಟುವಟಿಕೆಗಳು ಕನ್ನಡ ಭಾಷೆಯ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಕವಿಗಳ ಕವನ ವಾಚನ

ಕವಿಗೋಷ್ಠಿಯಲ್ಲಿ ಎಸ್.ಆಂಜಿನಪ್ಪ, ಸಿ.ಎನ್.ವೆಂಕಟಚಲಪತಿ, ಗುರುಪ್ರಸನ್ನ, ಕೆ.ಎಸ್.ನೂರುಲ್ಲಾ, ಕೆ ಎನ್.ವಿ.ಶ್ರೀನಿವಾಸ್ ಸೀ.ಮಾ. ಮಂಜುನಾಥ್, ವಿ.ವೆಂಕಟರೆಡ್ಡಿ, ನಾರಾಯಣರೆಡ್ಡಿ, ಜಿ.ಗೋಪಾಲಪ್ಪ, ಬಿ.ರಮೇಶ್, ವೆಂಕಟೇಶ್, ಕೆ.ಎಂ. ಲಕ್ಷ್ಮೀದೇವ ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಎಚ್.ಮುನಿಯಪ್ಪ ಆರ್.ಮಂಜುನಾಥ್ ಕುಂಟೆ ಗಡ್ಡೆ ಲಕ್ಷö್ಮಣ್, ರಮೇಶ್, ಎಸ್.ಬಿ.ಅಂಜನಪ್ಪ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.