ಸಾರಾಂಶ
ಬೆಳಗಾವಿ : ಪೊಲೀಸ್ ಪೇದೆಯೊಬ್ಬ ಪತ್ನಿಯ ಶೀಲಶಂಕಿಸಿ ಶೆಡ್‌ನಲ್ಲಿ ಕೂಡಿಹಾಕಿ, ಮಾರಣಾಂತಿಕ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿದ ಘಟನೆ ಅಥಣಿ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪ್ರಿಯಾಂಕಾ ಯಲ್ಲಪ್ಪ ಅಗಸಗೆ ಪತಿಯಿಂದ ಹಲ್ಲೆಗೊಳಗಾದ ಮಹಿಳೆ. ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಅಗಸಗೆ ಹಲ್ಲೆ ನಡೆಸಿದ ಆರೋಪಿ. 10 ವರ್ಷಗಳ ಹಿಂದೆ ಯಲ್ಲಪ್ಪ ಹಾಗೂ ಪ್ರಿಯಾಂಕಾ ಮದುವೆ ಆಗಿದ್ದು, ಮೂವರು ಮಕ್ಕಳಿದ್ದಾರೆ.
ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಈಚೆಗೆ ನನ್ನ ಬಗ್ಗೆ ಸಂಶಯ ತಿಳಿದುಕೊಂಡು 2 ತಿಂಗಳಿಂದ ಶೆಡ್‌ನಲ್ಲಿ ಕೂಡಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮೈಮೇಲೆ ಬರೆಯನ್ನೂ ಎಳೆದಿದ್ದಾರೆ. ಪತಿಯ ಸಹೋದರಿಯರು ಕೂಡ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೇನೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ಎಂದು ನೊಂದ ಮಹಿಳೆ ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದ್ದಾರೆ.