ಸಾರಾಂಶ
ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಹೆಂಡತಿಯನ್ನು ನಿರ್ಲಕ್ಷಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ್ದ ದೂರಿನ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆ ಸಿಬ್ಬಂದಿ ಟಿ.ಪ್ರಸನ್ನ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪತ್ನಿ ಆರ್.ಮಾಲಾ ಅವರು ಪ್ರಸನ್ನ ಅವರಿಂದ ತಮಗೆ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಅವರನ್ನು ಭೇಟಿಯಾಗಿ, ದೂರು ಅರ್ಜಿ ಸಲ್ಲಿಸಿದ್ದರು.
ದಾವಣಗೆರೆ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಹೆಂಡತಿಯನ್ನು ನಿರ್ಲಕ್ಷಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ್ದ ದೂರಿನ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆ ಸಿಬ್ಬಂದಿ ಟಿ.ಪ್ರಸನ್ನ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪತ್ನಿ ಆರ್.ಮಾಲಾ ಅವರು ಪ್ರಸನ್ನ ಅವರಿಂದ ತಮಗೆ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಅವರನ್ನು ಭೇಟಿಯಾಗಿ, ದೂರು ಅರ್ಜಿ ಸಲ್ಲಿಸಿದ್ದರು.ಪ್ರಸನ್ನ ಸರಿಯಾಗಿ ಮನೆಗೆ ಬರುತ್ತಿಲ್ಲ. ಮನೆಗೆ ಯಾವುದೇ ರೀತಿಯ ಹಣದ ಸಹಾಯ ಮಾಡುತ್ತಿಲ್ಲ. ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ಕೇಳಿದರೆ ನನ್ನ ಮೇಲೆ ಹಲ್ಲೆ ನಡೆಸಿ, ಕಬ್ಬಿಣದ ಬೀಗದಿಂದ ತಲೆಗೆ ಹೊಲಿಗೆ ಬೀಳುವ ರೀತಿ ಹೊಡೆದಿದ್ದಾರೆ. ಅಲ್ಲದೇ, ಸಾಯಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ಮಾಲಾ ದೂರು ಅರ್ಜಿಯಲ್ಲಿ ವಿವರಿಸಿದ್ದರು.
ಪತ್ನಿ ಮಾಲಾ ದೂರಿನ ಅನ್ವಯ ಪ್ರಸನ್ನ ಅವರ ಪೂರ್ವಭಾವಿ ವಿಚಾರಣೆ ನಡೆಸಿ, ಸಲ್ಲಿಸಿದ್ದ ಹೊನ್ನಾಳಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ವರದಿ ಹಾಗೂ ದಾಖಲೆಗಳನ್ನು ಆಧರಿಸಿ ಸಿಬ್ಬಂದಿ ಪ್ರಸನ್ನ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.