ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮತಗಟ್ಟೆ

| Published : Apr 26 2024, 12:48 AM IST

ಸಾರಾಂಶ

ದಾಬಸ್‌ಪೇಟೆ: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಮತಗಟ್ಟೆಯನ್ನು ಅಧಿಕಾರಿಗಳು ವಿಭಿನ್ನ ರೀತಿಯಲ್ಲಿ ಶೃಂಗರಿಸಿದ್ದು, ಶಿವಗಂಗೆಯಲ್ಲಿರುವ ಮತಗಟ್ಟೆ ಸಂಖ್ಯೆ 88ರಲ್ಲಿ ಚಪ್ಪರ ಹಾಕಿ ಮತಗಟ್ಟೆಯನ್ನು ಮಧುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರನ್ನು ಆಕರ್ಷಿಸುತ್ತಿದೆ.

ಸಾಂಸ್ಕೃತಿಕ ಥೀಮ್ ಅಡಿಯಲ್ಲಿ ಮಾದರಿ ಮತಗಟ್ಟೆಯಾಗಿ ಸಿದ್ಧಗೊಳಿಸಿದ್ದು, ಮತದಾರರು ಮತಗಟ್ಟೆಯ ಒಳಗೆ ಪ್ರವೇಶ ಮಾಡುವ ಜಾಗದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಜೊತೆಗೆ ಚಪ್ಪರ ಹಾಕಿ ಹೂವಿನಿಂದ ಅಲಂಕೃತಗೊಳಿಸಿದ್ದು, ಮಾದರಿ ಮತಗಟ್ಟೆ ಜನರನ್ನು ಆಕರ್ಷಿಸುತ್ತಿದೆ.

ಇನ್ನೂ ಮತಗಟ್ಟೆಯ ಒಳಗೆ ಕೂಡ ಹೂವಿನಿಂದ ಅಲಂಕಾರ ಮಾಡಲಾಗಿದೆ. ಮತ ಚಲಾಯಿಸುವ ಕೋಣೆಯ ಮಧ್ಯೆ ಮಣ್ಣಿನ ಮಡಕೆಯನ್ನು ಅಲಂಕರಿಸಿ ಅದರ ಮಧ್ಯೆ ಹೂವುಗಳನ್ನು ಇಟ್ಟು ಕಲಶದಂತೆ ಸಿಂಗರಿಸಲಾಗಿದೆ. ಮತ ಚಲಾಯಿಸುವ ಜಾಗದಲ್ಲಿಯೂ ಕೂಡ ಹೂವನ್ನು ಇಟ್ಟು ಅಲಂಕಾರ ಮಾಡಲಾಗಿದೆ.ಪೋಟೋ 5 :

ಶಿವಗಂಗೆಯಲ್ಲಿರುವ ಮತಗಟ್ಟೆ ಸಂಖ್ಯೆ 88ರಲ್ಲಿ ಚಪ್ಪರ ಹಾಕಿ ಮತಗಟ್ಟೆಯನ್ನು ಮಧುವಣಗಿತ್ತಿಯಂತೆ ಶೃಂಗಾರಗೊಂಡು ಜನರನ್ನು ಆಕರ್ಷಣೆ ಮಾಡುತ್ತಿದೆ.