ಸಹಸ್ರಾರು ಗಣವೇಷಧಾರಿಗಳಿಂದ ಪಥಸಂಚಲನ

| Published : Oct 06 2025, 01:01 AM IST

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ವಾರ್ಷಿಕೋತ್ಸವ ಹಾಗೂ ವಿಜಯದಶಮಿ ನಿಮಿತ್ತ ನಗರದಲ್ಲಿ ಶನಿವಾರ ಸಾವಿರಾರು ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ವಾರ್ಷಿಕೋತ್ಸವ ಹಾಗೂ ವಿಜಯದಶಮಿ ನಿಮಿತ್ತ ನಗರದಲ್ಲಿ ಶನಿವಾರ ಸಾವಿರಾರು ಗಣವೇಷಧಾರಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪಥ ಸಂಚಲನ ನಗರದ ಎರಡು ಮಾರ್ಗಗಳ ಮೂಲಕ ಎರಡು ತಂಡಗಳಾಗಿ ಸಂಚರಿಸಿತು. ಮಾರ್ಗ-೧ ಸಂಜೆ ೪ ಗಂಟೆಗೆ ಶ್ರೀ ರಾಮಕೃಷ್ಣ ವನ ಗೌಳೇರ ಗುಡಿಯ ವೀರ ಸಾವರ್ಕರ ವೃತ್ತದಿಂದ ಚಂದ್ರಶೇಖರ ಅಜಾದ್‌ ವೃತ್ತದಿಂದ ಶಿವಾಜಿ ನಗರ, ಬನ್ನಿ ಮಹಾಂಕಾಳಿ ಗುಡಿ, ೧೦ನೇ ನಂ ಶಾಲೆ, ಪಶು ಚಿಕಿತ್ಸಾಲಯ, ರಾಮ ಮಂದಿರ, ಗಾಂಧಿ ಚೌಕ, ಗ್ರಾಮ ಚೌಡಿ, ಎಸ್.ಆರ್. ಕಂಠಿ ವೃತ್ತದಿಂದ ಕಾಲೇಜು ಮಾರ್ಗವಾಗಿ ವೀರಮಣಿ ಕ್ರೀಡಾಂಗಣಕ್ಕೆ ತಲುಪಿತು.

ಮಾರ್ಗ-೨ ಸಂಜೆ ೪-೧೫ ರಿಂದ ಪ್ರಾರಂಭಗೊಂಡ ಪಥಸಂಚಲನ ಮಾರ್ಗ-೨ ಶ್ರೀ ರಾಮಕೃಷ್ಣ ವನ ಗೌಳೇರ ಗುಡಿಯ ವೀರ ಸಾವರ್ಕರ ವೃತ್ತದಿಂದ ಚಂದ್ರಶೇಖರ ಅಜಾದ್‌ ವೃತ್ತದಿಂದ, ಅಂಬಾಭವಾನಿ ದೇವಸ್ಥಾನ, ಅಮರೇಶ್ವರ ಜ್ಯೋರ್ತಿಭವನ, ಎಸಿಓ ಸ್ಕೂಲ್, ಕೊರವರ ಓಣಿ, ನವಲಿ ಕಿರಾಣಿ ಅಂಗಡಿ, ಕೆ.ಬಿ.ಎಂ.ಪಿ ಶಾಲೆ, ಕುಂಬಾರ ಓಣಿ, ವಾಲ್ಮೀಕಿ ಗುಡಿ, ಅಂಬೇಡ್ಕರ್ ವೃತ್ತ, ಕಂಠಿ ವೃತ್ತದಿಂದ ಕಾಲೇಜು ಮಾರ್ಗವಾಗಿ ವೀರಮಣಿ ಕ್ರೀಡಾಂಗಣಕ್ಕೆ ೫-೩೦ಕ್ಕೆ ತೆರಳಿ, ಶ್ರೀ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಆರ್. ವೀರಮಣಿ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ತಲುಪಿತು.

ಗಣವೇಷಧಾರಿಗಳಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಹೂವಿನ ಮಳೆ ಸುರಿಸುತ್ತ ಸ್ವಾಗತಿಸಿದರು. ಅನೇಕ ಕಡೆ ಚಿಕ್ಕ ಮಕ್ಕಳು ದೇಶ ಭಕ್ತರ ವೇಷ ಧರಿಸಿ ನಿಂತಿದ್ದರು. ಅನೇಕ ತಾಯಂದಿರು ಗಣ ವೇಷಧಾರಿಗಳಿಗೆ ಆರತಿ ಬೇಳಗಿ ವಂದನೆ ಸಲ್ಲಿಸಿದರು.