ಸಾರಾಂಶ
ಷೇರುದಾರರ ಸಂಖ್ಯೆಯನ್ನು ೨೫೦೦ಕ್ಕೇರಿಸಲು ಈ ಸಾಲಿನಲ್ಲಿ ಗುರಿ ಹೊಂದಲಾಗಿದೆ, ಷೇರು ಬಂಡವಾಳ ೩೫ ಲಕ್ಷಕ್ಕೇರಬೇಕು, ೩ ಕೋಟಿ ರೂ ಠೇವಣಿ ಸಂಗ್ರಹ ಗುರಿ ಹೊಂದಳಾಗಿದೆ ಎಂದು ತಿಳಿಸಿ, ಮುಂದಿನ ವರ್ಷ ೬೦ ಲಕ್ಷ ಸಾಲ ವಿತರಣೆ ಮಾಡಲು ಸೊಸೈಟಿ ಕ್ರಮ ಕೈಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಕೋಲಾರನಗರದ ಗೋಲ್ಡ್‌ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ೨.೮೧ ಕೋಟಿ ರೂ ಠೇವಣಿ ಸಂಗ್ರಹದ ಜತೆಗೆ ಈ ಸಾಲಿನಲ್ಲಿ ೧೩.೮೬ ಲಕ್ಷ ಲಾಭದೊಂದಿಗೆ ೫೫ ಲಕ್ಷ ರೂ ಸಾಲ ವಿತರಿಸಿ ಬಡ್ಡಿಮಾಫಿಯಾದಿಂದ ರೈತರ ರಕ್ಷಣೆಗೆ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಗೋಲ್ಡ್‌ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ೨೦೨೩-೨೪ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘ ಈ ಸಾಲಿನಲ್ಲಿ ಲಾಭದಲ್ಲಿದ್ದು, ೨ ಸಾವಿರ ಮಂದಿ ಷೇರುದಾರನ್ನು ಹೊಂದಿರುವ ಸಂಘ ಉತ್ತಮ ನಿರ್ವಹಣೆಯ ಮೂಲಕ ಸಾಲದ ಮಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದರು.₹3 ಕೋಟಿ ಠೇವಣಿ ಸಂಗ್ರಹ ಗುರಿ
ಸಂಘದ ನಿರ್ದೇಶಕ ರಂಗಯ್ಯ ಮುಂಗಡ ಪತ್ರ ಮಂಡಿಸಿ, ಷೇರುದಾರರ ಸಂಖ್ಯೆಯನ್ನು ೨೫೦೦ಕ್ಕೇರಿಸಲು ಈ ಸಾಲಿನಲ್ಲಿ ಗುರಿ ಹೊಂದಲಾಗಿದೆ, ಷೇರು ಬಂಡವಾಳ ೩೫ ಲಕ್ಷಕ್ಕೇರಬೇಕು, ೩ ಕೋಟಿ ರೂ ಠೇವಣಿ ಸಂಗ್ರಹ ಗುರಿ ಹೊಂದಳಾಗಿದೆ ಎಂದು ತಿಳಿಸಿ, ಮುಂದಿನ ವರ್ಷ ೬೦ ಲಕ್ಷ ಸಾಲ ವಿತರಣೆಗೆ ಕ್ರಮವಹಿಸುವುದಾಗಿ ತಿಳಿಸಿದರು. ಸಂಘದ ಉಪಾಧ್ಯಕ್ಷ ಶ್ರೀರಾಮ್, ಕಾನೂನು ಸಲಹೆಗಾರ ವಕೀಲ ರಾಮಲಿಂಗೇಗೌಡ, ನಿರ್ದೇಶಕರಾದ ಬಿ.ಜಿ.ಶ್ರೀದೇವಿ, ಎಸ್.ಎಂ.ನಾರಾಯಣಸ್ವಾಮಿ, ಸಿ.ನಾಗರಾಜ, ಬಿ.ಕೆ.ಎ.ಸುಬ್ಬಾರೆಡ್ಡಿ, ವೈ.ಎನ್.ವೆಂಕಟರವಣಪ್ಪ, ಡಿ.ನಾಗರಾಜಪ್ಪ, ಎಸ್.ವಿ.ನಾರಾಯಣರೆಡ್ಡಿ, ರವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೂರಾಂಡಹಳ್ಳಿ ಡಾ.ಗೋಪಾಲಪ್ಪ, ಸಂಘದ ಸಿಇಒ ಎಸ್.ಶಶಿಕಲಾ, ಮೇಲ್ವಿಚಾರಕರಾದ ವಿ.ನಾರಾಯಣಸ್ವಾಮಿ, ವೆಂಕಟರಾಮೇಗೌಡ ಮತ್ತಿತರರಿದ್ದರು.