ಸಾರಾಂಶ
ಕಲಾದಗಿ: ಶಿವಾಜಿ ಮಹಾರಾಜರ ಜಯತ್ಯೋತ್ಸವ ಹಾಗು ಶ್ರೀರಾಮ ನವಮಿಯ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆ ಸಂಭ್ರಮೊಲ್ಲಾಸಗಳಿಂದ ನಡೆಯಿತು.
ಕಲಾದಗಿ:ಶಿವಾಜಿ ಮಹಾರಾಜರ ಜಂತ್ಯೋತ್ಸವ ಹಾಗು ಶ್ರೀರಾಮ ನವಮಿಯ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆ ಸಂಭ್ರಮೊಲ್ಲಾಸಗಳಿಂದ ನಡೆಯಿತು.
ಗ್ರಾಮದ ಪಾಂಡುರಂಗ ಗುಡಿಯಿಂದ ಹೊರಟ ಶೋಭಾಯಾತ್ರೆ ಸಾಗುವ ಊರಿನ ಮಾರ್ಗದುದ್ದಕ್ಖೂ ಕೇಸರಿ ಧ್ವಜಗಳು,ಕೇಸರಿ ಪರಪರೆಗಳು ರಾಜಾಜಿಸುತ್ತಿದ್ದವು.ಮಾರ್ಗದ ಬಹುತೇಕ ಮನೆಗಳ ಮುಂದೆ,ಓಣಿಯಲ್ಲಿ ಮಹಿಳೆಯರು ಬಣ್ಣಬಣ್ಣದ ರಂಗೋಲಿಯನ್ನು ಹಾಕಿ,ತೆಂಗಿನಗರಿಗಳನ್ನು ಕಟ್ಟಿ ಶೋಭಾಯಾತ್ರಗೆ ಕಳೆ ತಂದಿದ್ದು ಕಂಡುಬಂತು.ಮೆರವಣಿಗೆಯಲ್ಲಿದ್ದ ಆಳೆತ್ತರ ಶಿವಾಜಿ ಮಹರಾಜರ ಮೂರ್ತಿ ಹಾಗೂ ಶ್ರೀರಾಮದೇವರ ಮೂರ್ತಿಯನ್ನು ಅಲಂಕರಿಸಿದ್ದ ವಾಹನ ಮನೆಯಮುಂದೆ ಬರುತ್ತಿದ್ದಂತೆ ಶಿವಾಜಿ ಮಹರಾಜರ ಮೂರ್ತಿ ಹಾಗು ಶ್ರೀರಾಮದೇವರಿಗೆ ಪುಷ್ಪಾರ್ಚನೆ ಮಾಡುತ್ತಿದ್ದ ಮನೆ ಮನೆಯವರು ಅದರೊಂದಿಗೆ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿ ಮೆರೆದರು.ಮೆರವಣಿಗೆ ಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ರಾಷ್ಟ್ರಪುರುಷರ ವೇಷಧಾರಿ ಮಕ್ಕಳು ಗಮನಸೆಳೆದರು.
ಮಾರ್ಗದುದ್ದಕ್ಕೂ ಸಿಡಿಯುತ್ತಿದ್ದ ಪಟಾಕಿಗಳು,ಯುವಪಡೆಯಿಂದ ಕೇಳಿಬರುತ್ತಿದ್ದ ದೇಶಭಕ್ತಿಯನ್ನು ತೋರುವ ಘೋಷಣೆಗಳು,ಹಾಡುಗಳು ಇಡೀ ಶೋಭಾಯಾತ್ರೆಗೆ ತನ್ನದೇ ಆದ ಜೋಶ್ ತಂದಿದ್ದವು.ಗ್ರಾಮವನ್ನೊಳಗೊಂಡಂತೆ ಆಸುಪಾಸಿನ ಊರುಗಳಿಂದ ಆಗಮಿಸಿದ್ದ ಯುವಪಡೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಗ್ರಾಮದ ಪಾಂಡುರಂಗ ಗುಡಿಯಿಂದ ಹೊರಟ ಶೋಭಾಯಾತ್ರೆ ಹೆಣ್ಣುಮಕ್ಕಳ ಶಾಲೆ,ಗಡ್ಡಿ ಓಣಿ,ಹೊಸೂರ ಕ್ರಾಸ್,ಕೊಬ್ರೀ ಕ್ರಾಸ್,ಪಂಚಾಯತ್,ದೊಡ್ಡ ಮಸೀದಿ,ಬಸವೇಶ್ವರ ವೃತ್ತದ ಮೂಲಕ ಸಾಗಿ ಬಸ್ಸ್‌ನಿಲ್ದಾಣದ ಆವರಣದಲ್ಲಿ ಸಮಾಪನಗೊಂಡಿತು.
ಬಂದಫೋಬಸ್ತ್:ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಡಿವೈಎಸ್‌ಪಿ ಪಂಪನಗೌಡರ,ಸಿಪಿಐ ಎಚ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ಸೂಕ್ತ ಪೋಲಿಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.