ಕ್ರೀಡಾಂಗಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ

| Published : Jul 02 2024, 01:30 AM IST

ಕ್ರೀಡಾಂಗಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮದುರ್ಗ ತಾಲೂಕಿನ ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಅಗತ್ಯತೆ ಇದೆ. ನೀರಾವರಿ ಇಲಾಖೆಯ ವಸತಿಗಳನ್ನು ನೆಲಸಮಗೊಳಿಸಿ ಕ್ರೀಡಾಂಗಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ತಾಲೂಕಿನ ಕ್ರೀಡಾಪಟುಗಳಿಗೆ ಕ್ರೀಡಾಂಗಣದ ಅಗತ್ಯತೆ ಇದೆ. ನೀರಾವರಿ ಇಲಾಖೆಯ ವಸತಿಗಳನ್ನು ನೆಲಸಮಗೊಳಿಸಿ ಕ್ರೀಡಾಂಗಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.ಇಲ್ಲಿನ ವಿದ್ಯಾಚೇತನ ಶಾಲಾ ಆವರಣದಲ್ಲಿ ತಾಲೂಕಿನ ಎಲ್ಲ ಮಕ್ಕಳಿಗೂ ನೋಟ್‌ಬುಕ್‌ ಮತ್ತು ಸ್ಕೂಲ್‌ಬ್ಯಾಗಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ವಿತರಣೆ ಮಾಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾಂಗಣಕ್ಕೆ ಸ್ಥಾಪನೆಗೆ ಎಲ್ಲ ಪ್ರಯತ್ನಗಳನ್ನು ಮಾಡಿ ಕ್ರೀಡಾ ಆಸಕ್ತಿ ಬೆಳೆಸಲಾಗುವುದು ಎಂದು ತಿಳಿಸಿದರು.ತಾಲೂಕಿನ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜುಗಳಿಗೆ ಉಚಿತ ನೋಟ್‌ಬುಕ್‌ ಮತ್ತು ಸ್ಕೂಲ್‌ಬ್ಯಾಗ್‌ ನೀಡುವುದು ಮೊದಲಿನ ರೂಢಿ ಇದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತಿ ಶಾಲೆಗಳಿಗೂ ಮೊದಲಿನಂತೆಯೇ ಈಗಲೂ ನೀಡುತ್ತಿದ್ದೇವೆ. ಅದರ ಸದುಪಯೋಗ ಪಡಿಸಿಕೊಂಡು ಮಕ್ಕಳು ತಮ್ಮ ಪಾಲಕರು ಮತ್ತು ಶಾಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ನೋಟ್‌ಬುಕ್‌ ಮತ್ತು ಸ್ಕೂಲ್‌ಬ್ಯಾಗ್‌ ನೀಡುತ್ತಿರುವ ಕಾರ್ಯಕ್ರಮದಲ್ಲಿ ದಾನಿಯಾದ ತಮಗೆ ಸನ್ಮಾನಿಸುವುದು ಸೂಕ್ತವಲ್ಲ. ಮಕ್ಕಳ ಅಧ್ಯಯನಕ್ಕೆ ಪ್ರೇರಣೆ ನೀಡುವುದು ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅವರು ಸೂಚಿಸಿದರು.ಡಿವೈಎಸ್ಪಿ ಎಂ.ಪಾಂಡುರಂಗಯ್ಯ, ಬ್ಲಾಕ್‌ ಅಧ್ಯಕ್ಷ ರಾಯಪ್ಪ ಕತ್ತಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೋಮಶೇಖರ ಸಿದ್ಲಿಂಗಪ್ಪನವರ ಸೇರಿದಂತೆ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್.ನಿಜಗುಲಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಟಿ.ಬಳಿಗಾರ ಸ್ವಾಗತಿಸಿದರು. ಎನ್‌.ಎ.ಶೇಖ ಕಾರ್ಯಕ್ರಮ ನಿರೂಪಿಸಿದರು.