ಸಾರಾಂಶ
ಕಾಲುಗಳು ಇರಬೇಕಾದ ಈ ಕರುವಿಗೆ ಎರಡೇ ಕಾಲುಗಳು ಇರುವುದರಿಂದ ತನ್ನ ತಾಯಿಯ ಹಾಲು ಕುಡಿಯಲು ಆಗುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ದಸರಾ ಹಬ್ಬದ ದಿನವಾದ ಮಂಗಳವಾರ ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಹಡಪದ ಬಸಣ್ಣ ಅವರ ಮನೆಯಲ್ಲಿ ಆಕಳೊಂದು ಎರಡೇ ಕಾಲುಗಳಿರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಕರು ನೋಡಲು ತುಂಬಾ ಸುಂದರವಾಗಿರುವುದಲ್ಲದೇ ಆರೋಗ್ಯವಾಗಿಯೂ ಇದೆ. ಆದರೆ ಎರಡು ಕಾಲುಗಳಿಂದ ನಡೆಯಲು ಆಗುವುದಿಲ್ಲ. ಈ ವಿಚಿತ್ರ ಕರು ನೋಡಲು ಹಾರಕಬಾವಿ ಸುತ್ತಮುತ್ತಲ ಗ್ರಾಮಸ್ಥರು ನೋಡಲು ಆಗಮಿಸುತ್ತಿದ್ದಾರೆ.ಮುಂಗಾಲುಗಳು ಹುಟ್ಟುತ್ತಲೇ ಇಲ್ಲದಿದ್ದರಿಂದ ಹಿಂಗಾಲುಗಳು ಮಾತ್ರ ಇವೆ. ನಾಲ್ಕು ಕಾಲುಗಳು ಇರಬೇಕಾದ ಈ ಕರುವಿಗೆ ಎರಡೇ ಕಾಲುಗಳು ಇರುವುದರಿಂದ ತನ್ನ ತಾಯಿಯ ಹಾಲು ಕುಡಿಯಲು ಆಗುತ್ತಿಲ್ಲ. ಇದನ್ನು ಗಮನಿಸಿದ ಹಸು ಮಲಗಿಕೊಂಡೇ ಕರುವಿಗೆ ಹಾಲುಣಿಸುತ್ತದೆ. ಈ ದೖಶ್ಯ ನೋಡಿದ ಜನತೆ ತಾಯಿಯ ಮಮಕಾರ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.