ಅಡುಗೆ ಮನೆಗೆ ನುಗ್ಗಿದ ಕಾಳಿಂಗ ಸರ್ಪ

| Published : May 25 2024, 12:47 AM IST

ಅಡುಗೆ ಮನೆಗೆ ನುಗ್ಗಿದ ಕಾಳಿಂಗ ಸರ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಎಂಬುವರ ಮನೆಯ ಅಡುಗೆ ಮನೆಗೆ ನುಗ್ಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು.

ನರಸಿಂಹರಾಜಪುರ: ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಎಂಬುವರ ಮನೆಯ ಅಡುಗೆ ಮನೆಗೆ ನುಗ್ಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು. ಮಂಜುನಾಥ ಗೌಡ ಅವರು ಸಂಜೆ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಹರಡಲು ಹಿಂಬದಿಯ ಬಾಗಿಲು ತೆಗೆಯುತ್ತಿದ್ದಂತೆ ದಿಢೀರನೇ ಮನೆ ಒಳಗೇ ನುಗ್ಗಿದ ಕಾಳಿಂಗ ಸರ್ಪ ಅಡುಗೆ ಮನೆಗೆ ಹೋಗಿ ಮಲಗಿದೆ. ಗಾಬರಿಯಾದ ಮನೆಯವರು ತಕ್ಷಣ ಕುದುರೆ ಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರುಗ ತಜ್ಞ ಪಿ.ಜಿ.ಹರೀಂದ್ರ ಕಾಳಿಂಗ ಸರ್ಪಕ್ಕೆ ಪೆಟ್ಟಾಗದಂತೆ ಹಿಡಿದು ಅರಣ್ಯ ಇಲಾಖೆ ಸಲಹೆಯಂತೆ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.