ಸಾರಾಂಶ
ಆನಂದಪುರ: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತರಾಗಿರಲು ಕ್ರಮಬದ್ಧವಾದ ಆಹಾರ ಪದ್ಧತಿ ಅನುಸರಿಸಬೇಕು ಎಂದು ಹಿರಿಯ ಪತ್ರಕರ್ತ ಜಗನ್ನಾಥ್ ತಿಳಿಸಿದರು.
ಆನಂದಪುರ: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತರಾಗಿರಲು ಕ್ರಮಬದ್ಧವಾದ ಆಹಾರ ಪದ್ಧತಿ ಅನುಸರಿಸಬೇಕು ಎಂದು ಹಿರಿಯ ಪತ್ರಕರ್ತ ಜಗನ್ನಾಥ್ ತಿಳಿಸಿದರು.
ಸ್ಥಳೀಯ ಗಣಪತಿ ಸಮುದಾಯ ಭವನದಲ್ಲಿ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್, ಪತ್ರಕರ್ತರ ಬಳಗ ಹಾಗೂ ಗ್ರಾಮ ಪಂಚಾಯಿತಿ ಮತ್ತು ಕಂಪನಿ ಶಿವಮೊಗ್ಗ ಸಹಯೋಗದಿಂದ ಆಯೋಜಿಸಿದ್ದ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ನಾವು ಆರೋಗ್ಯವಂತರಾಗಿ ಇರಬೇಕಾದರೆ ನಮ್ಮ ಆಹಾರ ಪದ್ಧತಿ ಬದಲಿಸಿಕೊಳ್ಳಬೇಕು. 15 ದಿನಗಳ ಕಾಲ ಉಚಿತವಾಗಿ ನಡೆಯುವ ಪೂಟ್ ಪಲ್ಸ್ ಥೆರೆಪಿ ಚಿಕಿತ್ಸಾ ಶಿಬಿರದಲ್ಲಿ ಮಂಡಿ ನೋವು, ಸೊಂಟ ನೋವು, ಮಧುಮೇಹ, ಸ್ನಾಯು ಸೆಳೆತದಿಂದ ಬಳಲುತ್ತಿರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ವಹಿಸಬೇಕು. ಸ್ನಾಯುಗಳ ನೋವು, ಮಂಡಿ, ಬೆನ್ನು, ಕುತ್ತಿಗೆಯ ನೋವುಗಳು ಹಾಗೂ ರಕ್ತದೊತ್ತಡ, ಮಧುಮೇಹ ಇದ್ದಂತಹ ರೋಗಿಗಳು ಪಲ್ಸ್ ಥೆರೆಪಿಯಂತಹ ಶಿಬಿರದ ಪ್ರಯೋಜನವನ್ನು ಬಡೆಯಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಜಿಯಾವುಲ್ಲ ಅಧ್ಯಕ್ಷತೆ ವಹಿಸಿದ್ದರು. ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್, ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಮುಲ್ಲಖಾನ್, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ ರಾಜೇಶ್, ಸದಸ್ಯ ಗುರುರಾಜ್, ಉನ್ನತ್ ಹಾಗೂ ಸ್ವಾಮಿ ರಾವ್ ಗುಡವಿ, ಗೋವಿಂದ್ ಮೂರ್ತಿ ಇತರರು ಇದ್ದರು.