ನಿಡ್ತ ನ್ಯಾಯಬೆಲೆ ಅಂಗಡಿ ರದ್ದುಗೊಳಿಸದಂತೆ ಗ್ರಾಮಸ್ಥರಿಂದ ಮನವಿ

| Published : Feb 09 2024, 01:46 AM IST / Updated: Feb 09 2024, 03:40 PM IST

ನಿಡ್ತ ನ್ಯಾಯಬೆಲೆ ಅಂಗಡಿ ರದ್ದುಗೊಳಿಸದಂತೆ ಗ್ರಾಮಸ್ಥರಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ಆಹಾರ ವಿತರಣೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸದರಿ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ಕೋರಿ ಗ್ರಾಮದ ಇಬ್ಬರು ಸೋಮವಾರಪೇಟೆ ತಹಸೀಲ್ದಾರರಿಗೆ ಗ್ರಾಮಸ್ಥರ ನಕಲಿ ಸಹಿ ಹಾಕಿ ಮನವಿ ಮಾಡಿದ್ದರು ಎಂಬ ಆರೋಪ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿಗೆ ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ನಿಡ್ತ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಬೆಲೆ ಅಂಗಡಿ ರದ್ದುಗೊಳಿಸುವಂತೆ ಕೋರಿದ ಗ್ರಾಮದ ಇಬ್ಬರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ಆಹಾರ ವಿತರಣೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸದರಿ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ಕೋರಿ ಗ್ರಾಮದ ಇಬ್ಬರು ಸೋಮವಾರಪೇಟೆ ತಹಸೀಲ್ದಾರರಿಗೆ ಗ್ರಾಮಸ್ಥರ ನಕಲಿ ಸಹಿ ಹಾಕಿ ಮನವಿ ಮಾಡಿದ್ದರು ಎಂಬ ಆರೋಪ ಇದೆ.

ಈ ಕುರಿತು ನಿಡ್ತ ಗ್ರಾಮಸ್ಥರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿಕೊಂಡು ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಸದರಿ ನ್ಯಾಯಬೆಲೆ ಅಂಗಡಿಯಲ್ಲಿ ಸಮರ್ಪಕವಾಗಿ ಪಡಿತರ ಆಹಾರ ವಿತರಣೆಯಾಗುತ್ತಿದ್ದರೂ, ಗ್ರಾಮದ ಒಂದಿಬ್ಬರು ವ್ಯಕ್ತಿಗಳು ಗ್ರಾಮಸ್ಥರ ನಕಲಿ ಸಹಿ ಸೃಷ್ಟಿಸಿ ಸದರಿ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸುವಂತೆ ತಹಸೀಲ್ದಾರರಿಗೆ ದೂರು ನೀಡಿದವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಸದರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಗಳಿಗೆ ಸರಿಯಾಗಿ ಪಡಿತರ ಆಹಾರ ವಿತರಣೆಯಾಗುತ್ತಿದೆ. ಹೀಗಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಆಹಾರ ವಿತರಣೆಯಾಗುತ್ತಿಲ್ಲ ಎಂದು ಆರೋಪ ಮಾಡಿರುವ ನಕಲಿ ದೂರುದಾರರ ವಿರುದ್ಧ ಕ್ರಮಕೈಗೊಳ್ಳಬೇಕು.

ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಸಬಾರದೆಂದು ಒತ್ತಾಯಿಸಿದ ಗ್ರಾಮಸ್ಥರು, ತಹಸೀಲ್ದಾರರಿಗೆ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಮೂಲಕ ಮನವಿ ಪತ್ರ ನೀಡಿದರು.

ನಂತರ ಸಂಘದ ಸಭಾಂಗಣದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಗ್ರಾಮದ ಅನಿಲ್, ಪುಟ್ಟಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.