ಕೆರೆ ತುಂಬಿಸುವಂತೆ ಮನವಿ

| Published : Feb 15 2024, 01:32 AM IST

ಸಾರಾಂಶ

ಕೇರೂರನ ಜೆ.ಎಲ್.ಬಿ.ಸಿ ಮತ್ತು ಜಿ.ಆರ್.ಬಿ.ಸಿ. ಕಾಲುವೆಗೆ ನೀರು ಹರಿಸಿ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೇರೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಕಟ್ಟಿಮನಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕೇರೂರನ ಜೆ.ಎಲ್.ಬಿ.ಸಿ ಮತ್ತು ಜಿ.ಆರ್.ಬಿ.ಸಿ. ಕಾಲುವೆಗೆ ನೀರು ಹರಿಸಿ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೇರೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಕಟ್ಟಿಮನಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಆಗ್ರಹಿಸಿದರು.

ರಾಯಬಾಗದಿಂದ ನನದಿವಾಡಿಗೆ ಕೇರೂರನ ಮೂಲಕ ಹಾದು ಹೋಗಿರುವ ಜೆ.ಎಲ್.ಬಿ.ಸಿ. ಕಾಲುವೆಯು ಸುಮಾರು ವರ್ಗಗಳಿಂದ ದುರಸ್ತಿಯಲ್ಲಿದ್ದು, ನೀರು ಹರಿಸಿರುವುದಿಲ್ಲ. ಹೀಗಾಗಿ ರೈತಾಪಿ ಜನರ ಭೂಮಿಗೆ ನೀರಿನ ಅನಾನೂಕೂಲ ಇರುವುದರಿಂದ ಹಾಗೂ ಮಳೆ ಈ ಸಲ ಕೈಕೊಟ್ಟಿದ್ದರಿಂದ ಬಾವಿ ಬೋರ್‌ವೆಲ್‌ಗಳ ನೀರು ಬತ್ತಿ ಹೋಗಿರುವುದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಮತ್ತು ದನಕರುಗಳಿಗಾಗಿ ಕೇರೂರ ಗ್ರಾಮದಲ್ಲಿ ಇರುವ ಜೆ.ಎಲ್.ಬಿ.ಸಿ. ಮತ್ತು ಜಿ.ಆರ್. ಬಿ.ಸಿ. ಕಾಲುವೆಗೆ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಯೋಜನೆ ಮಾಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ಗ್ರಾಪಂ ಮೇಲಧಿಕಾರಿಗಳ ಗಮನಕ್ಕೆ ತಂದು ಸಭೆ ನಡೆಸಿ, ಗ್ರಾಮದಲ್ಲಿ ನೀರಿನ ಯೋಜನೆಯ ಅನುಕೂಲ ಮಾಡಬೇಕು. ಈ ಜವಾಬ್ದಾರಿಯನ್ನು 2-3 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೇರೂರಿನ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಂಜುನಾಥ ಬಾಳುಪರಗೌಡ, ಬಾಪು ಕುತ್ತೆ, ಜ್ಯೋತಿಬಾ ಮಗದುಮ, ಶಂಕರ ಹೆಗಡೆ, ಮಯಪ್ಪಾ ಹೆಗಡೆ, ರೋಹಿತ ಕುಂಬಾರ, ಖಾನಪ್ಪ ಬಾಡ, ಮಾದೇವ ಬಾಡಕಾರ, ಸದಾಶಿವ ಪಾಟೀಲ, ಅಮ್ಮನ್ನ ಬಿಳಗೆ, ಇಟಪ್ಪ ಬಿಳಗೆ ಸೇರಿದಂತೆ ರೈತರು ಉಪಸ್ಥಿತರಿದ್ದರು.