ಅಲೆಮಾರಿ ಜನಾಂಗಕ್ಕೆ ಸೌಲಭ್ಯ ಕಲ್ಪಿಸುವಂತೆ ಮನವಿ

| Published : Dec 31 2023, 01:30 AM IST

ಸಾರಾಂಶ

ಎಸ್‌ಸಿ ಮತ್ತು ಎಸ್‌ಟಿ ಅಲೆಮಾರಿ ಜನಾಂಗವನ್ನು ಆರ್ಥಿಕವಾಗಿ ಬೆಳೆಸಲು ಸರ್ಕಾರ ನೇರಸಾಲ ಯೋಜನೆ, ಉದ್ದಿಮೆಶೀಲತೆ, ಗೂಡ್ಸ್ ವಾಹನ ಸೌಲಭ್ಯ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವಸತಿ ರಹಿತರಿಗೆ ಮನೆ ಮಂಜೂರಾತಿ ಸೇರಿದಂತೆ ಅನೇಕ ಯೋಜನೆ ಜಾರಿಗೆ ತಂದು ಹೆಚ್ಚಿನ ಅನುದಾನ ನೀಡಿ ಅಲೆಮಾರಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಸರ್ಕಾರ ಮಾಡಬೇಕೆಂದು ಎಂದು ಮನ

ಹಾವೇರಿ: ನಗರದ ಪ್ರವಾಸ ಮಂದಿರಕ್ಕೆ ಆಗಮಿಸಿದ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಎಸ್‌ಸಿ ಮತ್ತು ಎಸ್‌ಟಿ ಅಲೆಮಾರಿ ಜನಾಂಗದಲ್ಲಿ ಬರುವ ಜನರಿಗೆ ಅನುಕೂಲವಾಗುವಂತೆ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

ಎಸ್‌ಸಿ ಮತ್ತು ಎಸ್‌ಟಿ ಅಲೆಮಾರಿ ಜನಾಂಗವನ್ನು ಆರ್ಥಿಕವಾಗಿ ಬೆಳೆಸಲು ಸರ್ಕಾರ ನೇರಸಾಲ ಯೋಜನೆ, ಉದ್ದಿಮೆಶೀಲತೆ, ಗೂಡ್ಸ್ ವಾಹನ ಸೌಲಭ್ಯ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವಸತಿ ರಹಿತರಿಗೆ ಮನೆ ಮಂಜೂರಾತಿ ಸೇರಿದಂತೆ ಅನೇಕ ಯೋಜನೆ ಜಾರಿಗೆ ತಂದು ಹೆಚ್ಚಿನ ಅನುದಾನ ನೀಡಿ ಅಲೆಮಾರಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸ ಸರ್ಕಾರ ಮಾಡಬೇಕೆಂದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ವಾಲ್ಮೀಕಿ ಸಮಾಜದ ಮುಖಂಡ ರಮೇಶ ಆನವಟ್ಟಿ, ನಾಗರಾಜ ಬಡೆಮ್ಮನವರ, ಸುನೀಲ ಬೇಟಿಗೇರಿ, ಜಗದೀಶ ಹರಿಜನ, ಹನಮಂತಪ್ಪ ಸಿ.ಡಿ, ಸೇರಿದಂತೆ ಇತರರು ಇದ್ದರು.