ಸಾರಾಂಶ
ರಾಜ್ಯ ಮಟ್ಟದ ಪ್ರಶಸ್ತಿ ವಿಜೇತೆ ಡಿ.ಎಲ್. ಚಂದ್ರಕಲಾ ಮತ್ತು ಶಿಕ್ಷಕಿ ಕುಸುಮಾ ಎಸ್. ರಾಜ್ ಅವರಿಗೆ ಎಕ್ಸಲೆನ್ಸ್ ಇನ್ ಟೀಚಿಂಗ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ರೋಟರಿ ಸಭಾಂಗಣದಲ್ಲಿ ಕುಶಾಲನಗರದ ಜ್ಞಾನ ಭಾರತಿ ಶಾಲೆಯಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತೆ ಡಿ.ಎಲ್. ಚಂದ್ರಕಲಾ ಮತ್ತು ಗ್ರಾಂಡ್ ಮಾಸ್ಟರ್ ಇನ್ ಅಬ್ಕಾಸ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತೆ ಶಿಕ್ಷಕಿ ಕುಸುಮಾ.ಎಸ್.ರಾಜ್ ಅವರಿಗೆ ಇನ್ನರ್ ವೀಲ್ ಇಂಡಿಯಾ ಲಿಟ್ರಸಿ ಮಿಷನ್ ಅವಾರ್ಡ್ ಫಾರ್ ಎಕ್ಸೆಲೆನ್ಸ್ ಇನ್ ಟೀಚಿಂಗ್ ಅವಾರ್ಡ್ ಅನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸೀತಾಲಕ್ಷ್ಮಿ, ಪ್ರಮುಖರಾದ ಸುನೀತಾ, ಭಾರತಿ, ಆರತಿ ಶೆಟ್ಟಿ ಮತ್ತಿತರರು ಇದ್ದರು.
---------------------------------ಲೈನ್ ಮನೆಯಲ್ಲಿ ಗೋಮಾಂಸ ಪತ್ತೆ
ಮಡಿಕೇರಿ : ಮಾಜಿ ಸಚಿವ ಬಿ. ಎ. ಜೀವಿಜಯ ಅವರ ತೋಟದ ಲೈನ್ ಮನೆಯಲ್ಲಿ ಗೋಮಾಂಸ ಪತ್ತೆಯಾಗಿದೆ.ಸೋಮವಾರಪೇಟೆ ತಾಲೂಕಿನ ಬಿಳಿಗೇರಿಯಲ್ಲಿನ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಮಾರಾಟಕ್ಕೆ ಯತ್ನ ಮಾಡಲಾಗಿದೆ.
ಖಚಿತ ಮಾಹಿತಿ ಆಧರಿಸಿ ಸೋಮವಾರಪೇಟೆ ಪೊಲೀಸರಿಂದ ದಾಳಿ ನಡೆಸಲಾಗಿದೆ. ಈ ವೇಳೆ ಅಸ್ಸಾಂ ಕಾರ್ಮಿಕರು ಮಾಂಸ ಬಿಟ್ಟು ಪರಾರಿಯಾಗಿದ್ದಾರೆ. ಅಕ್ರಮ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.