ಪುನಾರಂಭಗೊಂಡ ಶುದ್ಧ ಕುಡಿಯುವ ನೀರಿನ ಘಟಕ

| Published : Apr 02 2024, 01:02 AM IST

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮೂಲಜೀರ್ಣೋದ್ಧಾರಕ ಲಿಂ.ಮಲ್ಲಪ್ಪ ಸಿಂಹಾಸನ ಪ್ರತಿಮೆ ಸಮೀಪವಿರುವ ಶುದ್ಧ ನೀರಿನ ಘಟಕ ಸೋಮವಾರ ಪುನಾರಂಭಗೊಂಡಿದೆ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದ ಬಸವೇಶ್ವರ ದೇವಸ್ಥಾನದ ಮೂಲಜೀರ್ಣೋದ್ಧಾರಕ ಲಿಂ.ಮಲ್ಲಪ್ಪ ಸಿಂಹಾಸನ ಪ್ರತಿಮೆ ಸಮೀಪವಿರುವ ಶುದ್ಧ ನೀರಿನ ಘಟಕ ಸೋಮವಾರ ಪುನಾರಂಭಗೊಂಡಿದೆ.

ಪುನಾರಂಭಗೊಂಡ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ 2019ರಲ್ಲಿ ನಿರ್ಮಾಣಗೊಂಡಿರುವ ಈ ಶುದ್ಧ ನೀರಿನ ಘಟಕ ಬಹುದಿನಗಳಿಂದ ದುರಸ್ತಿಯಾಗದೆ ಹಾಗೆಯೇ ಇತ್ತು. ಸಮಿತಿಯಿಂದ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡುವಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಈ ಶುದ್ಧ ನೀರಿನ ಘಟಕ ದುರಸ್ತಿಗೊಳಿಸಿ ಪುನಾರಂಭ ಮಾಡಿರುವುದು ಉತ್ತಮ ಕಾರ್ಯ. ಬಿರುಬಿಸಿಲಿನಿಂದಾಗಿ ಶುದ್ಧ ನೀರು ತುಂಬಾ ಅಗತ್ಯವಿದೆ. ಪಟ್ಟಣಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸುತ್ತಾರೆ. ಪಟ್ಟಣ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಜನರಿಗೆ ಶುದ್ಧ ನೀರು ತುಂಬಾ ಅಗತ್ಯವಿದೆ. ಮಾರುಕಟ್ಟೆ ಪ್ರದೇಶದಲ್ಲಿರುವ ಈ ಶುದ್ಧ ನೀರಿನ ಘಟಕದಿಂದ ಅನೇಕ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಒದಗಿಸಲು ಮುಂದಾಗಿರುವದು ಶ್ಲಾಘನೀಯ ಎಂದು ಹೇಳಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಬೇಸಿಗೆ ಬಿಸಿಲು ಪ್ರಖರವಾಗಿದೆ. ಇಂತಹ ಸಂದರ್ಭದಲ್ಲಿ ಶುದ್ಧ ನೀರು ತುಂಬಾ ಅಗತ್ಯವಿದೆ. ಜನರು ನೀರನ್ನು ಪೋಲಾಗದಂತೆ ಬಳಕೆ ಮಾಡುವುದು ತುಂಬಾ ಅಗತ್ಯವಿದೆ. ಜನತೆ ಶುದ್ಧ ನೀರಿನ ಘಟಕದ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಬಸವೇಶ್ವರ ಸೇವಾ ಸಮಿತಿಯ ಕೋಶಾಧ್ಯಕ್ಷ ಎಂ.ಜಿ. ಆದಿಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ, ತಾಪಂ ಮಾಜಿ ಸದಸ್ಯ ನಾಗನಗೌಡ ಬಿರಾದಾರ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಸಂಕನಗೌಡ ಪಾಟೀಲ, ಚನ್ನು ಇಂಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಭಿಯಂತರ ಡಿ.ಎಸ್.ಹಿರೇಮಠ, ವಿಠ್ಠಲ ಸುಲಾಖೆ ಇತರರು ಇದ್ದರು.