ವಿದ್ಯಾರ್ಥಿಗಳ ಸುರಕ್ಷತೆಗಾಗಿ ಉಪಲಾಷಿತ ಯೋಜನೆ

| Published : Jul 18 2024, 01:43 AM IST / Updated: Jul 18 2024, 01:44 AM IST

ವಿದ್ಯಾರ್ಥಿಗಳ ಸುರಕ್ಷತೆಗಾಗಿ ಉಪಲಾಷಿತ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ನೆಡದ ಸುದ್ದಿಗೋಷ್ಠಿಯಲ್ಲಿ ವಿಟಿಲಿಟಿ ಡಿಜಿಟಲ್ ಟೆಕ್ ಸಂಸ್ಥೆಯ ಸಿಇಒ ಸಂತೋಷ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲು ನೆರವಾಗುವ ಉದ್ದೇಶದಿಂದ ವಿಟಿಲಿಟಿ ಡಿಜಿಟಲ್ ಟೆಕ್ ಸಂಸ್ಥೆಯು ನೂತನವಾಗಿ ಉಪಲಾಷಿತ ಎಂಬ ಯೋಜನೆ ಪ್ರಚುರ ಪಡಿಸುತ್ತಿದೆ ಎಂದು ಸಂಸ್ಥೆಯ ಸಿಇಒ ಸಂತೋಷ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟಿಲಿಟಿ ಡಿಜಿಟಲ್ ಎಂಬ ಸಂಸ್ಥೆಯೂ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಶಿವಮೊಗ್ಗದ ಓಟಿ ರಸ್ತೆಯಲ್ಲಿ ಶಾಖಾ ಕಚೇರಿಯನ್ನು ತೆರೆದಿದೆ. ಈ ಸಂಸ್ಥೆಯೂ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಗತಿ ಹೊಂದಲು ನೆರವಾಗುವಂತಹ ಉಪಲಾಷಿತ ಎಂಬ ಯೋಜನೆಯನ್ನು ಪ್ರಸ್ತುತ ಪಡಿಸುತ್ತಿದೆ. ಈ ಯೋಜನೆ ಅನ್ವಯ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಾಂಶವಿರುವ ಗುರುತಿನ ಕಾರ್ಡ್‍ನ್ನು ನೀಡಲಾಗುತ್ತದೆ. ಈ ಕಾರ್ಡ್‍ನಲ್ಲಿ ಕ್ಯೂಆರ್‌ ಕೋಡ್ ಅಳವಡಿಸಲಾಗಿದ್ದು, ಇದರ ಮೂಲಕ ಸೇವಾ ಸೌಲಭ್ಯ ನೀಡಲಾಗುತ್ತದೆ ಎಂದರು.

ಬೇಸಿಗೆ ರಜೆಯಲ್ಲಿ ಶಿಬಿರ ಆಯೋಜನೆ, ಗುರುತಿನ ಕಾರ್ಡ್ ಬಳಸಿ ರಿಯಾಯಿತು ದರದಲ್ಲಿ ಅಧ್ಯಯನ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಸಹ ಅನುಕೂಲವಾಗುತ್ತದೆ. ನವೋದಯ, ಸಿಇಟಿ, ನೀಟ್, ಮುಂತಾದ ಪರೀಕ್ಷೆಗಳಿಗೆ ಆನ್‍ಲೈನ್ ಮೂಲಕವೇ ತರಬೇತಿ ಕೊಡಬಹುದಾಗಿದೆ ಎಂದರು.

ಮುಖ್ಯವಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಲು ಅನುಕೂಲವಾಗುವಂತೆ ತಂತ್ರಾಂಶವನ್ನು ರೂಪಿಸಲಾಗಿದೆ. ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯದಂತಹ ಪ್ರಕರಣಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರಿಂದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಜೊತೆಗೆ ಸಮಸ್ಯೆಗಳಿದ್ದರೆ ಪೊಲೀಸ್ ಇಲಾಖೆಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಕಿರುಕುಳವಾಗದಂತೆ ಮಾಡಲಾಗುವುದು ಎಂದರು.

ಈ ತಂತ್ರಾಂಶ ಕುರಿತು ಈಗಾಗಲೇ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಯೋಜನೆಯ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆರಂಭಿಸಿದ್ದಾರೆ ಎಂದರು. ಈ ವೇಳೆ ಪ್ರೇಮಾ, ಪೂಜಾ, ಗೀತಾ, ಚೇತನ್‍ಕುಮಾರ್ ಇದ್ದರು.