ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಕ್ರಾಂತಿ: ಶಾಸಕ ಬಿ.ಆರ್. ಪಾಟೀಲ್‌

| Published : Feb 04 2024, 01:35 AM IST

ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಕ್ರಾಂತಿ: ಶಾಸಕ ಬಿ.ಆರ್. ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಸಮುದಾಯ ಮತ್ತು ವಿದ್ಯಾರ್ಥಿಗಳು ಸಂವಿಧಾನವನು ಓದಬೇಕು. ಅದರ ತತ್ವಗಳನ್ನು ಚಾಚೂತಪ್ಪದೆ ಆಚರಣೆಗೆ ತಂದರೆ ಸುಭದ್ರ ದೇಶವಾಗಿ ಭಾರತ ಹೊರಮ್ಮಲಿದೆ.

ಕನ್ನಡಪ್ರಭ ವಾರ್ತೆ ಆಳಂದ

ದೇಶದ ಎಲ್ಲ ಸಮುದಾಯಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ವಿಶ್ವಕ್ಕೆ ಮಾದರಿಯಾದ ಡಾ.ಬಿ.ಆರ್. ಅಂಬೇಡ್ಕರ್ ಅರು ನೀಡಿದ ದೇಶದ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ನಡೆದಿದೆ. ಒಂದು ವೇಳೆ ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಕ್ರಾಂತಿಯಾಗಲಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ರಾಜ್ಯದಾದ್ಯಂತ ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥಾ ಸಂಚಾರವನ್ನು ಆಗಮಿಸಿದ್ದು, ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಸಂಚರಿಸಲಿರುವ ಹಿನ್ನೆಲೆಯಲಿ ತಾಲೂಕಿನ ಗೋಳಾ ಗ್ರಾಮದಲ್ಲಿ ಜಾಥಾವನ್ನು ಉದ್ಘಾಟಿಸಿ ಸಂವಿಧಾನ ಪೀಠಿಕೆ ಬೋಧಿಸಿ ಶಾಸಕರು ಮಾತನಾಡಿದರು.

ಯುವ ಸಮುದಾಯ ಮತ್ತು ವಿದ್ಯಾರ್ಥಿಗಳು ಸಂವಿಧಾನವನು ಓದಬೇಕು. ಅದರ ತತ್ವಗಳನ್ನು ಚಾಚೂತಪ್ಪದೆ ಆಚರಣೆಗೆ ತಂದರೆ ಸುಭದ್ರ ದೇಶವಾಗಿ ಭಾರತ ಹೊರಮ್ಮಲಿದೆ ಎಂದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ಗೋಳಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಜಿಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ರಾಚಮ್ಮಾ ಆರ್. ಸಜ್ಜನ್, ಉಪಾಧ್ಯಕ್ಷ ಸೈಫಾನ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ, ಬಸವರಾಜ ಉಪ್ಪಿನ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಹಣಮಂತರಾವ್ ರಾಠೋಡ, ನರೋಣಾ ಪಿಎಸ್‌ಐ ಗಂಗಮ್ಮಾ, ಪಿಡಿಒ ಸಂಗೀತಾ ಬಂಡಾರಿ, ಗ್ರಾಮದ ಮುಖಂಡ ಶ್ರೀಮಂತರಾವ್ ಸೇರಿದಂತೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

ಸಂಪನ್ಮೂಲ ಶಿಕ್ಷಕ ಚಂದ್ರಶೇಖರ ಅವರು ಸಂವಿಧಾನದ ಹಕ್ಕು, ಕರ್ತವ್ಯ ಮತ್ತು ವಿಧಿಗಳ ಕುರಿತು ಉಪನ್ಯಾಸ ನೀಡಿದರು. ಈ ಪ್ರಯುಕ್ತ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ರಸ ಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೆತರಿಗೆ ಶಾಸಕರು ಪುಸ್ತಕ ನೀಡಿದರು.

ಕಡಗಂಚಿಯಲ್ಲಿ ಅದ್ಧೂರಿ ಜಾಥಾ: ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಕುಂಭ, ಕಳಸ ವಾದ್ಯಗಳೊಂದಿಗೆ ಅಭಿಮಾನಿಗಳು, ಶಾಲಾ ಮಕ್ಕಳು ಸೇರಿ ಅದ್ಧೂರಿಯಾಗಿ ಬರಮಾಡಿಕೊಂಡರು. ಬಳಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ ಗ್ರಾಪಂ ಅಧ್ಯಕ್ಷೆ ಇಂದುಬಾಯಿ ಮಾದಗೊಂಡ ಉದ್ಘಾಟಿಸಿದರು. ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ಗೋಳಾ, ಅಭಿವೃದ್ಧಿ ಅಧಿಕಾರಿ ಉಷಾ ಪಾಟೀಲ, ಸದಸ ಅಶೋಕ ಬುಗಶೆಟ್ಟಿ, ನಾಗಪ್ಪ ಬಾಳೆ, ರೇಖಾ ಡೋಣಿ, ಪ್ರಕಾಶ ಸೂರನ್, ಇತರ ಸದಸ್ಯರು ಸೇರಿ ಎಸ್‌ಡಿಎಂಸಿ ಅಧ್ಯಕ್ಷ ಶಂತಯ್ಯಾ ಇಕ್ಕಳಕಿಮಠ ಶಾಲಾ ಶಿಕ್ಷಕರು, ಮಕ್ಕಳು ಮತ್ತು ಗ್ರಾಮಸ್ಥರಿದ್ದರು. ಸಂಸ್ಕೃತಿ ಮತ್ತು ಸ್ಪರ್ಧಾ ವಿಜೇತ ಮಕ್ಕಳಿಗೆ ಪುಸ್ತಕ ಪೇನು ನೀಡಿ ಗೌರವಿಸಲಾಯಿತು. ಸುಂಟನೂರ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಸಂವಿಧಾನ ಜಾಗೃತಿ ಜಾಥಾಕ್ಕೆ ಕುಂಭ, ಕಳಸದೊಂದಿಗೆ ಸ್ವಾಗತಿಸಿ ಬೀಳ್ಕೊಡಲಾಯಿತು. ಗ್ರಾಪಂ ಅಧ್ಯಕ್ಷೆ ಅಂಬಿಕಾ ಗೋವಿಂದ ಹುಲಿಮನಿ, ಸಮಾಜಲ್ಯಾಣಾಧಿಕಾರಿ ರಾಮಚಂದ್ರ ಗೋಳಾ ಆಗಮಿಸಿದ್ದರು. ಪಿಡಿಒ ಉಷಾ ಪಾಟೀಲ, ಗ್ರಾಪಂ ಸದಸ್ಯರು, ಶಾಲಾ ಮಕ್ಕಳು ಅಭಿಮಾನಿಗಳು ಜಾಥಾವನ್ನು ಸ್ವಾಗತಿಸಿದರಲ್ಲದೆ, ಜಾಥಾ ವಾಹನದಲ್ಲಿರಿಸಿದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಆರತಿ ಬೆಳಗಿ ಪುಷ್ಪಾರ್ಚನೆ ಕೈಗೊಂಡರು. ಬಳಿಕ ಧುತ್ತರಗಾಂವ ಮತ್ತು ಕೊಡಲಹಂಗರಗಾ ಗ್ರಾಪಂಗಳಲ್ಲೂ ಸಂವಿಧಾನ ಜಾಗೃತಿ ಜಾಥಾಕ್ಕೆ ಗ್ರಾಪಂ, ಶಾಲೆ ಆಡಳಿತ ಮತ್ತು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು.