ಲಕ್ಷಾಂತರ ಸಂಬಳಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಜನ ಸಿದ್ಧರಿರುವ ದಿನಗಳಲ್ಲಿ, ಬೆಂಗಳೂರಿನ ಸುರಕ್ಷತೆ ಮತ್ತು ಜೀವನ ಗುಣಮಟ್ಟಕ್ಕೆ ಮನಸೋತ ಐಐಟಿ ರೂರ್ಕಿ ಪದವೀಧರರೊಬ್ಬರು, ಹರ್ಯಾಣದ ಗುರುಗ್ರಾಮದಲ್ಲಿ ಸಿಕ್ಕಿದ್ದ ವಾರ್ಷಿಕ 32 ಲಕ್ಷ ರು. ಸಂಬಳದ ನೌಕರಿಯನ್ನೇ ತಿರಸ್ಕರಿಸಿ ಗಮನ ಸೆಳೆದಿದ್ದಾರೆ. ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಗುರುಗ್ರಾಮ (ಹರ್ಯಾಣ): ಲಕ್ಷಾಂತರ ಸಂಬಳಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಜನ ಸಿದ್ಧರಿರುವ ದಿನಗಳಲ್ಲಿ, ಬೆಂಗಳೂರಿನ ಸುರಕ್ಷತೆ ಮತ್ತು ಜೀವನ ಗುಣಮಟ್ಟಕ್ಕೆ ಮನಸೋತ ಐಐಟಿ ರೂರ್ಕಿ ಪದವೀಧರರೊಬ್ಬರು, ಹರ್ಯಾಣದ ಗುರುಗ್ರಾಮದಲ್ಲಿ ಸಿಕ್ಕಿದ್ದ ವಾರ್ಷಿಕ 32 ಲಕ್ಷ ರು. ಸಂಬಳದ ನೌಕರಿಯನ್ನೇ ತಿರಸ್ಕರಿಸಿ ಗಮನ ಸೆಳೆದಿದ್ದಾರೆ. ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸ್ನೇಹಪ್ರಿಯಾ ಐಐಟಿ ರೂರ್ಕಿಯಲ್ಲಿ ಪದವಿ ಪಡೆದಿದ್ದು, ಡೇಟಾ ಸೈಂಟಿಸ್ಟ್ ಆಗಿದ್ದಾರೆ. ಅವರಿಗೆ ಗುರುಗ್ರಾಮದಲ್ಲಿ ವಾರ್ಷಿಕ 32 ಲಕ್ಷ ರು. ಸಂಬಳದ ಕೆಲಸ ಸಿಕ್ಕಿತ್ತು. ಆದರೆ ಬೆಂಗಳೂರಿನಲ್ಲೇ ಇರುವ ಉದ್ದೇಶದಿಂದ ಆ ಕೆಲಸವನ್ನು ತ್ಯಜಿಸಿದ್ದಾರೆ.ಈ ಬಗ್ಗೆ ಇನ್‌ಸ್ಟಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನಾನು ಬೆಂಗಳೂರನ್ನು ಬಿಟ್ಟು ಗುರುಗ್ರಾಮದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕಿತ್ತು. ಆದರೆ ಇಲ್ಲೇ ಉಳಿಯಲು ನಿರ್ಧರಿಸಿದೆ. ಬೆಂಗಳೂರು ಅವಳಿ ಮಳೆಬಿಲ್ಲುಗಳ ಮೂಲಕ ನನ್ನ ಸಂಶಯಗಳಿಗೆ ವಿದಾಯ ಹೇಳಿತು. ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಹಲವಾರು ಸಲ ಭೇಟಿ ನೀಡಿದ್ದೇನೆ. ಆಗೆಲ್ಲ ಅಹಿತಕರ ಅನುಭವಗಳಾಗಿವೆ. ಆದರೆ ಬೆಂಗಳೂರಿನ ಬೆಚ್ಚನೆಯ ಅನುಭವ, ಸುರಕ್ಷತೆ ಮತ್ತು ಮನೆಯ ಭಾವನೆ ಹಣಕ್ಕಿಂತ ಹೆಚ್ಚು. ಕೆಲವೊಮ್ಮೆ ಅತ್ಯುತ್ತಮ ವೃತ್ತಿಜೀವನದ ನಿರ್ಧಾರವು ಅತ್ಯುನ್ನತ ಕೊಡುಗೆಯಾಗಿರುವುದಿಲ್ಲ. ನೆಮ್ಮದಿಯನ್ನು ಆಯ್ದುಕೊಳ್ಳಿ’ ಎಂದಿದ್ದಾರೆ.