ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯ; 2 ವರ್ಷದ ಮಗುವಿನ ಮೇಲೆ ಕಾಮುಕನ ದೌರ್ಜನ್ಯ

| Published : Feb 15 2024, 01:35 AM IST

ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯ; 2 ವರ್ಷದ ಮಗುವಿನ ಮೇಲೆ ಕಾಮುಕನ ದೌರ್ಜನ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತು ಅಂದರೆ ಏನು ಎಂದು ತಿಳಿಯದ ಪುಟಾಣಿ ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾನೆ.

ಮಡಿಕೇರಿ: ಕೊಡಗಿನಲ್ಲೊಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಇನ್ನೂ ಜಗತ್ತು ಅಂದರೆ ಏನು ಎಂದು ತಿಳಿಯದ ಪುಟಾಣಿ ಮಗುವಿನ ಮೇಲೆ ಕಾಮುಕನೊಬ್ಬ ದೌರ್ಜನ್ಯ ನಡೆಸಿದ್ದಾನೆ.ಕೇವಲ ಎರಡು ವರ್ಷದ ಮಗುವಿನ ಮೇಲೆ 45 ವರ್ಷದ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಾಪುರದಿಂದ ಸುಮಾರು 20 ಕಿ.ಮೀ ದೂರದ ಎಸ್ಟೇಟ್‌ನಲ್ಲಿ ಬುಧವಾರ ಸಂಜೆ ಕೃತ್ಯ ನಡೆದಿದೆ. ಮಣಿ ಎಂಬ ಕಾರ್ಮಿಕ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡು ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅದು ಜಾರ್ಖಂಡ್‌ ಮೂಲದ ಸಂಸಾರ. ಮನೆಯಲ್ಲಿ ಮಗು ಆಡುತ್ತಿತ್ತು. ಮಗುವಿನ ತಂದೆ ಬೇರೇನೋ ಕೆಲಸಕ್ಕೆ ಹೊರಗೆ ಹೋಗಿದ್ದರು. ಆಗ ಅಲ್ಲಿಗೆ ಬಂದ ಕಾಮುಕ ಮಗುವಿನ ಮೇಲೆ ರಕ್ಕಸನಂತೆ ಎರಗಿದ್ದಾನೆ. ಮಗು ಒಂದೇ ಸಮನೆ ಬೊಬ್ಬೆ ಹೊಡೆದಾಗ ತಂದೆ ಓಡಿ ಬಂದಿದ್ದು, ಮಣಿ ನಡೆಸುತ್ತಿದ್ದ ದುಷ್ಕೃತ್ಯ ಬಯಲಾಗಿದೆ. ಎಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿದ್ದಾನೆಂದರೆ ಮಗುವಿನ ಜನನಾಂಗದಲ್ಲಿ ರಕ್ತ ಬರುತ್ತಿತ್ತು. ಮಗುವಿನ ಮಗುವನ್ನು ಪರಚಿ, ಕಚ್ಚಿದ್ದ ಎಂದು ಹೇಳಲಾಗಿದೆ.

ಮಹಿಳಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದು, ಆರೋಪಿ ಮಣಿಯನ್ನು ಬಂಧಿಸಲಾಗಿದೆ.