ಸಾರಾಂಶ
ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಆಯಾ ತರಗತಿಯ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 10ನೇ ತರಗತಿಯ ಅನಘಾ ನಡಿಗೇರ ಸಂಸ್ಕಾರ ರತ್ನ ಪ್ರಶಸ್ತಿಗೆ ಭಾಜನಳಾದಳು.
ಹುಬ್ಬಳ್ಳಿ:
ಶಾಲೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ. ಮಕ್ಕಳು ದೊರೆತ ಸಮಯದ ಸದ್ವಿನಿಯೋಗ ಮಾಡಿಕೊಳ್ಳುವಂತೆ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಹೇಳಿದರು.ಇಲ್ಲಿನ ಸಂಸ್ಕಾರ ಆಂಗ್ಲಮಾಧ್ಯಮ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿಭಾಗದ 16ನೇ ಸಂಸ್ಕಾರ ಸಂಧ್ಯಾ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಫ್ರೀ ಸ್ಟೈಲ್, ತಾನಾಜಿ ಬೀದಿ ನಾಟಕ, ಕಾಶ್ಮೀರಿ, ನಾಗಿಣಿ, ಸಂಗೊಳ್ಳಿ ರಾಯಣ್ಣ, ಪೊಲೀಸ್, ರಾವಣ, ಕಾಳಿ, ಹಿಪ್ ಹಾಪ್ ಜತೆಗೆ ಶಿಕ್ಷಕರ ನೃತ್ಯ ಗಮನ ಸೆಳೆಯಿತು.ಈ ವೇಳೆ ಶಾಲೆಯ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಆಯಾ ತರಗತಿಯ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 10ನೇ ತರಗತಿಯ ಅನಘಾ ನಡಿಗೇರ ಸಂಸ್ಕಾರ ರತ್ನ ಪ್ರಶಸ್ತಿಗೆ ಭಾಜನಳಾದಳು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಿದ್ದರಾಮಯ್ಯ ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯ, ಪ್ರವೀಣ ಅಂಗಡಿ, ವೀರೇಶ ಮೊಟಗಿ, ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಅಧ್ಯಕ್ಷ ಮಹಾವೀರ ಕುಂದೂರ, ಉಪಾಧ್ಯಕ್ಷ ಕಾಂತಿಲಾಲ ಬೋಹ್ರಾ, ಕಾರ್ಯದರ್ಶಿ ಸುಧೀರ ವೋರಾ, ಕೋಶಾಧ್ಯಕ್ಷ ಉಜ್ವಲ್ ಸಿಂಘಿ, ನಿರ್ದೇಶಕಿ ಸಪ್ನಾ ವೋರಾ, ನಿರ್ದೇಶಕ ಜಯಂತಿಲಾಲ್ ಚಹಾಣ್, ಪ್ರಾಂಶುಪಾಲರಾದ ನಯನಾ ಪಿ.ಸಿ, ಉಪ ಪ್ರಾಂಶುಪಾಲೆ ಅನು ಮಸ್ಕರಾ, ಕಾರ್ಯಕ್ರಮದ ಸಂಯೋಜಕಿ ಸಾಯಿರಾಬಾನು, ಸಹ ಸಂಯೋಜಕಿ ಗೀತಾಂಜಲಿ ಎಲ್, ಶಾಲಾ ಮಂತ್ರಿ ಮಯಾಂಕ ಡಂಕ್ ಸೇರಿದಂತೆ ಹಲವರಿದ್ದರು.