ಬಿಸಿಲ ತಾಪ ಲೆಕ್ಕಿಸದೇ ಶೃಂಗೇರಿಗೆ ಹರಿದು ಬಂದ ಜನಸಾಗರ

| Published : Apr 30 2024, 02:04 AM IST

ಬಿಸಿಲ ತಾಪ ಲೆಕ್ಕಿಸದೇ ಶೃಂಗೇರಿಗೆ ಹರಿದು ಬಂದ ಜನಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲ ದಿನಗಳಿಂದ ಶೃಂಗೇರಿಯಲ್ಲಿ ಸುಡು ಬಿಸಿಲ ವಾತಾವರಣವಿರುವ ನಡುವೆಯೂ ಜನಸಾಗರವೇ ಹರಿದು ಬರುತ್ತಿದೆ.

ಶೃಂಗೇರಿ: ಕಳೆದ ಕೆಲ ದಿನಗಳಿಂದ ಶೃಂಗೇರಿಯಲ್ಲಿ ಸುಡು ಬಿಸಿಲ ವಾತಾವರಣವಿರುವ ನಡುವೆಯೂ ಜನಸಾಗರವೇ ಹರಿದು ಬರುತ್ತಿದೆ.

ಶಕ್ತಿ ಯೋಜನೆಯಡಿ ಮಕ್ಕಳು, ನಾರಿಮಣಿಯರ ದಂಡೆ ಶೃಂಗೇರಿಯತ್ತ ಬರುತ್ತಿದೆ. ಬಸ್‌ ನಿಲ್ದಾಣ, ಶೃಂಗೇರಿ ಪಟ್ಟಣ, ಶ್ರೀಮಠದ ಆವರಣ, ಗಾಂಧಿ ಮೈದಾನ ಎಲ್ಲೆಡೆ ಜನಸಾಗರ ಕಂಡುಬರುತ್ತಿದೆ. ಶಾಲೆಗಳಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯು ಹೆಚ್ಚಿದೆ. ಗಾಂಧಿ ಮೈದಾನ, ಶೃಂಗೇರಿ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಕಂಡು ಬರುತ್ತಿದ್ದು ಶ್ರೀ ಮಠ, ಸಿರಿಮನೆ ಜಲಪಾತ ಸೇರಿದಂತೆ ತಾಲೂಕಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ಕಾಣುತ್ತಿದೆ. ವಸತಿ ಗೃಹಗಳು ಭರ್ತಿಯಾಗುತ್ತಿವೆ. ಶ್ರೀಮಠದಲ್ಲಿನ ಶ್ರೀ ಶಾರದಾಂಬಾ ದೇವಾಲಯ, ಬೋಜನಾ ಶಾಲೆ, ನರಸಿಂಹವನ ಸೇರಿದಂತೆ ಎಲ್ಲೆಡೆ ಕಳೆದರೆಡು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ.

29 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿ ಬಿಸಿಲ ತಾಪದ ನಡುವೆ ಪ್ರವಾಸಿಗರ ದಂಡು ಕಂಡುಬಂದಿರುವುದು.