ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಈ 18ನೇ ಲೋಕಸಭಾ ಚುನಾವಣೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಚುನಾವಣಾ ಬಾಂಡ್ ಮೂಲಕ ಕಂಪನಿಗಳಿಂದ ವ್ಯವಸ್ಥಿತ ದರೋಡೆ, ಸೈಬರ್ ಕ್ರೈಂ, ಮಹಿಳೆಯರ ಮೇಲೆ ದೌರ್ಜನ್ಯ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಾಗಿತ್ತು ಎಂದು ಎಸ್‌ಯುಸಿಐ(ಸಿ) ರಾಜ್ಯ ಸೆಕ್ರೆಟ್ರೇಟ್ ಸದಸ್ಯ ಟಿ.ಎಸ್.ಸುನೀತಕುಮಾರ್ ಹೇಳಿದರು. ನಗರದಲ್ಲಿರುವ ಎಸ್‌ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಮತ ಹಾಕುವ ಮುನ್ನ ನಿರ್ಧರಿಸು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಈ 18ನೇ ಲೋಕಸಭಾ ಚುನಾವಣೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ಚುನಾವಣಾ ಬಾಂಡ್ ಮೂಲಕ ಕಂಪನಿಗಳಿಂದ ವ್ಯವಸ್ಥಿತ ದರೋಡೆ, ಸೈಬರ್ ಕ್ರೈಂ, ಮಹಿಳೆಯರ ಮೇಲೆ ದೌರ್ಜನ್ಯ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಾಗಿತ್ತು ಎಂದು ಎಸ್‌ಯುಸಿಐ(ಸಿ) ರಾಜ್ಯ ಸೆಕ್ರೆಟ್ರೇಟ್ ಸದಸ್ಯ ಟಿ.ಎಸ್.ಸುನೀತಕುಮಾರ್ ಹೇಳಿದರು. ನಗರದಲ್ಲಿರುವ ಎಸ್‌ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಕುರಿತು ಮತ ಹಾಕುವ ಮುನ್ನ ನಿರ್ಧರಿಸು ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಎನ್.ಡಿ.ಎ ಮತ್ತು ಇಂಡಿಯಾ ಕೂಟ ಎರಡೂ ಅತ್ಯಂತ ಕೀಳುಮಟ್ಟದ ಚರ್ಚೆ, ವ್ಯಕ್ತಿಗತ ವಿಷಯಗಳ ಮೇಲೆ ಟೀಕೆ ಮಾಡುವುದು, ಇನ್ನೂಂದು ಹೆಜ್ಜೆ ಮುಂದೆ ಹೋಗಿ ಪೆನ್‌ಡ್ರೈವ್ ಕೇಸ್ ಹಾಗೂ ನೇಹಾ ಸಾವು ಇಂತಹ ಅನೇಕ ವಿಷಯಗಳನ್ನು ಖಂಡಿಸುವುಕ್ಕಿಂತ ಹೆಚ್ಚಾಗಿ ತಮ್ಮ ಸ್ವಾರ್ಥ ರಾಜಕೀಯ ಮತ ಗಳಿಕೆಗೋಸ್ಕರ ಸ್ಪರ್ಧೆಗೆ ಇಳಿದಿರುವುದು ಅತ್ಯಂತ ನಾಚಿಕೆಗೇಡಿತನ ಸಂಗತಿ ಎಂದರು.
ಪ್ರಧಾನ ಕಾರ್ಯದರ್ಶಿ ಕಾ.ಪ್ರವಾಸ್ ಘೋಷ ರವರು ಮಾತನಾಡಿ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಮತ ಚಲಾಯಿಸುವ ಮುನ್ನ ಎಲ್ಲರೂ ಆಲೋಚಿಸಬೇಕು ಎಂದರು.ಈ ವೇಳೆ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ, ಅಭ್ಯರ್ಥಿ ನಾಗಜ್ಯೋತಿ ಬಿ.ಎನ್., ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ಸುನಿಲ್, ಜಯಣ್ಣ, ಪುಷ್ಪಾ ಮುಂತಾದವರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))