ನಾಗರಿಕ ಸಮಾಜ ತಲೆತಗ್ಗಿಸುವಂತ ಕೃತ್ಯ: ಅನಿತಾ ಎನ್.ರಾವ್

| Published : Aug 18 2024, 01:48 AM IST

ನಾಗರಿಕ ಸಮಾಜ ತಲೆತಗ್ಗಿಸುವಂತ ಕೃತ್ಯ: ಅನಿತಾ ಎನ್.ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ, ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ನಾತಕೋತ್ತರ ಪದವಿ ವೈದ್ಯೆ ಅತ್ಯಾಚಾರ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತ ಕೃತ್ಯ ಎಂದು ಕೊಪ್ಪ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಅನಿತಾ ಎನ್.ರಾವ್ ಹೇಳಿದರು.

ವೈದ್ಯೆ ಹತ್ಯೆ ಖಂಡಿಸಿ ಕೊಪ್ಪ ಐಎಂಎ ನಿಂದ ಮುಷ್ಕರ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ, ಕೊಪ್ಪ

ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ನಾತಕೋತ್ತರ ಪದವಿ ವೈದ್ಯೆ ಅತ್ಯಾಚಾರ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತ ಕೃತ್ಯ ಎಂದು ಕೊಪ್ಪ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಅನಿತಾ ಎನ್.ರಾವ್ ಹೇಳಿದರು. ಶನಿವಾರ ಕೊಪ್ಪ ಭಾರತೀಯ ವೈದ್ಯಕೀಯ ಅಸೋಶಿಯೇಷನ್ (ಐಎಂಎ) ಆಯುಷ್ ವೈದ್ಯಕೀಯ ಅಸೋಶಿಯೇಷನ್ ಮತ್ತು ಮಹಿಳಾ ವೇದಿಕೆ, ಕೊಪ್ಪ ರೋಟರಿ , ಲಯನ್ಸ್ ಕ್ಲಬ್ ಕೊಪ್ಪ ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ವೈದ್ಯೆ ಹತ್ಯೆ ಖಂಡಿಸಿ ನಡೆದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರ, ಹತ್ಯೆಯಂತಹ ಭೀಕರ ದೌರ್ಜನ್ಯನಡೆಯುತ್ತಿದ್ದು ಮಹಿಳೆಯು ಸಮಾಜದಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುವುದು ಕಷ್ಟಕರವಾಗಿದೆ. ಅರ್ಧರಾತ್ರಿಯಲ್ಲಿ ಓರ್ವ ಹೆಣ್ಣು ಯಾವುದೇ ಆತಂಕವಿಲ್ಲದೆ ರಸ್ತೆಗೆ ಬರುವಂತಾದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ೭೮ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಅರ್ಥಪೂರ್ಣವಾಗಿದೆಯೇ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಕೋಲ್ಕತ್ತಾ ಪ್ರಕರಣ ಆ.೯ರಂದು ನಡೆದಿದ್ದು ಇಷ್ಟು ದಿನವಾದರೂ ಅತ್ಯಾಚಾರಿ ಮತ್ತು ಹತ್ಯೆ ಆರೋಪಿ ಗಳ ಬಂಧಿಸಿ ಕ್ರಮ ವಹಿಸುವಲ್ಲಿ ವಿಫಲವಾಗಿದೆ. ಶ್ರೀಘ್ರ ಆರೋಪಿಗಳ ಬಂಧನವಾಗಿ ಕಠಿಣ ಶಿಕ್ಷೆಯಾಗಬೇಕು ಎಂದರು.ಪ್ರಶಮನೀ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಚ್.ಜಿ. ಉದಯಶಂಕರ್ ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಭದ್ರತೆ ದೃಷ್ಠಿಯಿಂದ ಸೂಕ್ತ ಭದ್ರತೆ ಒದಗಿಸಲು ಆಡಳಿತ ಸರ್ಕಾರ ಮುಂದಾಗಬೇಕು. ಜೀವ ಉಳಿಸುವ ವೈದ್ಯರು ಜೀವ ಕಳೆದುಕೊಳ್ಳುವಂತಹ ಅಹಿತಕರ ಘಟನೆ ದೇಶದಲ್ಲಿ ಎಲ್ಲೂ ಮರುಕಳಿಸಬಾರದು. ರಾಷ್ಟ್ರೀಯ ವೈದ್ಯಕೀಯ ಸಂಘದ ಸೂಚನೆಯಂತೆ ಕೊಪ್ಪ ಶೃಂಗೇರಿ ನ.ರಾ. ಪುರ ಮೂರೂ ತಾಲೂಕುಗಳ ವೈದ್ಯರು ಶನಿವಾರ ಬೆಳಿಗ್ಗೆ ೬ರಿಂದ ಭಾನುವಾರ ಬೆಳಿಗ್ಗೆ ೬ರವರೆಗೂ ಒಪಿಡಿ ಸ್ಥಗಿತಗೊಳಿಸಿ ಸೂಕ್ತ ಚಿಕಿತ್ಸೆ ಮಾತ್ರ ನೀಡಿದ್ದೇವೆ ಎಂದರು.ಆದರ್ಶ ಆಸ್ಪತ್ರೆ ಡಾ. ನಟರಾಜ್ ರಾವ್, ಡಾ. ಅಮರ್ ಶೇಖರ್, ಡಾ.ರಾಮಚಂದ್ರ, ಡಾ.ಮೋಹನ್ ಶೆಟ್ಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವೈದ್ಯಕೀಯ ಸಂಘದ ಪ್ರತಿನಿಧಿ ಪ್ರತಿಭಟನೆಯಲ್ಲಿದ್ದರು.