ಸೀರೆಯು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಸಂಕೇತವಾಗಿದೆ. ಅದರ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು.
ಶಿಗ್ಗಾಂವಿ: ಗೌರಿ ಹಣ್ಣಿಮೆ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ ಹೇಳಿದರು.
ಪಟ್ಟಣದ ನವನಗರದ ಖ್ಯಾತ ಜ್ಯೋತಿಷಿ ಶಂಕರ ಅಯ್ಯಣ್ಣವರ ಅವರ ನಿವಾಸದಲ್ಲಿ ಗೌರಿ ಹುಣ್ಣಿಮೆ ಸಮಿತಿ ವತಿಯಿಂದ ಹಮ್ಮಿಕೊಂಡ ಗೌರಿ ಹುಣ್ಣಿಮೆ ಪ್ರಯುಕ್ತ ಸಕ್ಕರೆ ಗೊಂಬೆಗಳ ಆರತಿ ಹಾಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಆಚರಣೆಗಳ ಮೂಲಕ ಮಹಿಳೆಯರು ಒಗ್ಗೂಡುವುದರ ಜತೆಗೆ ನಮ್ಮ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.ಗೀತಾ ಪೂಜಾರ ಮಾತನಾಡಿ, ಸೀರೆಯು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಸಂಕೇತವಾಗಿದೆ. ಅದರ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು. ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳ ಕುರಿತು ತಿಳಿಸಿಕೊಡುವ ಅನಿವಾರ್ಯತೆ ಇದೆ. ಶ್ರದ್ಧಾಭಕ್ತಿಯಿಂದ ಗೌರಿಯನ್ನು ಪ್ರಾರ್ಥಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಆ ನಂಬಿಕೆ ನಮ್ಮಲ್ಲಿರಬೇಕು ಎಂದರು.
ಅಲಂಕೃತ ಮಂಟಪದಲ್ಲಿ ವಿಶೇಷ ಪೂಜೆ ಹಾಗೂ ಶ್ರೀಗೌರಿ ಆರಾಧನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಂದ ಸಕ್ಕರೆ ಗೊಂಬೆಗಳ ಆರತಿ, ವಿಶೇಷ ಕೋಲಾಟ ಹಾಗೂ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಮುತ್ತೈದೆಯರನ್ನು ಸನ್ಮಾನಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಪಾಲ್ಗೊಂಡು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಭ್ರಮಕ್ಕೆ ಮೆರುಗು ನೀಡಿದರು.
ಖ್ಯಾತ ಜ್ಯೋತಿಷಿ ಶಂಕರ ಅಯ್ಯಣ್ಣವರ, ಗೌರಿ ಹುಣ್ಣಿಮೆ ಸಮಿತಿಯ ಕವಿತಾ ಎಸ್. ನೆಲ್ಲಿಕೊಪ್ಪ, ಅನಸೂಯಾ ಬಳಿಗಾರ, ವರ್ಷಾ ಅಜೂರ, ವಿಜಯಲಕ್ಷ್ಮೀ ಹೆಸರೂರ, ಸಂಜನಾ ರಾಯ್ಕರ್, ನಾಗವೇಣಿ ಕಾಳೆ, ರೂಪಾ ಬಗಾಡೆ, ನಂದಿನಿ ಅಕ್ಕಿ, ವಿಜಯಲಕ್ಷ್ಮೀ ಬ್ಯಾಹಟ್ಟಿ, ಸ್ವಪ್ನಾ ಸೂರ್ಯವಂಶಿ, ಸಿದ್ದಮ್ಮ ಬರದ್ವಾಡ, ಕವಿತಾ ಕಣೋಜಿ, ರೇಣುಕಾ ಪಾಟೀಲ, ನಿಂಗಮ್ಮ ಮಾಡಗೇರ, ಲತಾ ರವಿ, ಮಲ್ಲಮ್ಮ ಸೋಮನಕಟ್ಟಿ ಸೇರಿದಂತೆ ನವನಗರ ಸೇರಿದಂತೆ ಪಟ್ಟಣದ ಮಹಳಾ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.