ರಾಮನಗರ: ಜನಪರ ಆಡಳಿತದ ಜೊತೆಗೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ರಾಮನಗರ ನಗರಸಭೆ ವತಿಯಿಂದ ಇದೀಗ ರೇಷ್ಮೆನಾಡ ಕನ್ನಡ ಹಬ್ಬ ಹೆಸರಿನಲ್ಲಿ ಕನ್ನಡದ ಕಂಪನ್ನು ಹರಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾ ಕೇಂದ್ರ ರಾಮನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ರಾಮನಗರ: ಜನಪರ ಆಡಳಿತದ ಜೊತೆಗೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ರಾಮನಗರ ನಗರಸಭೆ ವತಿಯಿಂದ ಇದೀಗ ರೇಷ್ಮೆನಾಡ ಕನ್ನಡ ಹಬ್ಬ ಹೆಸರಿನಲ್ಲಿ ಕನ್ನಡದ ಕಂಪನ್ನು ಹರಡಲು ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಜಿಲ್ಲಾ ಕೇಂದ್ರ ರಾಮನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದ ಹಳೇ ಬೆಂಗಳೂರು-ಮೈಸೂರು ಹೆದ್ದಾರಿ, ಪ್ರತಿಯೊಂದು ವೃತ್ತಗಳು, ರಸ್ತೆ, ಬೀದಿಗಳು ಎರಡು ಬದಿಯಲ್ಲಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಎಲ್ಲೆಡೆ ಕೆಂಪು - ಹಳದಿ ಬಣ್ಣದ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಸಮಾರಂಭ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ.ದಸರಾ ಮಾದರಿಯಲ್ಲಿ ರಾಜ್ಯೋತ್ಸವ:
ರೇಷ್ಮೆ ನಾಡ ಕನ್ನಡ ಹಬ್ಬ ಹೆಸರಿನಲ್ಲಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿಯೇ ಮೆರವಣಿಗೆ, ಸ್ತಬ್ಧ ಚಿತ್ರ ಪ್ರದರ್ಶನ, ಮ್ಯೂಸಿಕಲ್ ನೈಟ್, ಪೌರ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮ ಜರುಗಲಿವೆ.ಮೆರವಣಿಗೆಗೆ ಸ್ತಬ್ಧ ಚಿತ್ರಗಳ ಮೆರಗು:
ನಗರದ ತಾಲೂಕು ಆಡಳಿತ ಸೌಧ ಬಳಿಯಿಂದ ರಾಜ್ಯೋತ್ಸವ ಸಮಾರಂಭ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಇದರಲ್ಲಿ ಮಡಿಕೇರಿ ಕನ್ನಡ ತಾಯಿ ಟ್ಯಾಬ್ಲೋ ಸಾಗಿ ಬರಲಿದೆ.ಪೌರ ಸನ್ಮಾನಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿವೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕರಾವಳಿ ಸೇರಿದಂತೆ ವಿವಿಧ ಬಗೆಯ ಜಾನಪದ ಕಲಾ ತಂಡಗಳು ರಂಗು ತುಂಬಲಿದೆ.
ಕನ್ನಡ ಹಬ್ಬದಂದು ನಗರಸಭೆಯ ಕಂದಾಯ, ಎಂಜಿನಿಯರಿಂಗ್, ಆರೋಗ್ಯ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಫ್) ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಡಿಎಸ್‌ಬಿ) ಕಾರ್ಯವೈಖರಿ, ಮಹತ್ವ ಹಾಗೂ ಸಾಧನೆ ಒಳಗೊಂಡ ಸ್ತಬ್ಧಚಿತ್ರಗಳು ಮೆರವಣಿಗೆಯ ಮೆರಗು ಹೆಚ್ಚಿಸಲಿದೆ.ನಗರಸಭೆಯ ವಿವಿಧ ವಿಭಾಗಗಳ ಕಾರ್ಯವೈಖರಿ, ಅವುಗಳ ಮಹತ್ವ, ಉತ್ತಮ ಆಡಳಿತದ ದಿಸೆಯಲ್ಲಿ ಇ-ಸ್ವತ್ತು, ಇ-ಖಾತೆ ಅಭಿಯಾನದ ಸಾಧನೆ, ನಾಗರಿಕರ ಪಾಲ್ಗೊಳ್ಳುವಿಕೆ, ಸ್ವಚ್ಛ ನಗರಕ್ಕಾಗಿ ಕೈಗೊಂಡ ಕ್ರಮಗಳು, ಸ್ವಚ್ಛತೆಯ ರಿಯಲ್ ಹೀರೊಗಳಾದ ಪೌರ ಕಾರ್ಮಿಕರು, ಕೆಯುಡಬ್ಲ್ಯುಡಿಎಸ್‌ಬಿಯಿಂದ ನಗರಕ್ಕೆ 24X7 ನೀರು ಪೂರೈಕೆಯಿಂದಾದ ಬದಲಾವಣೆ, ರಾಮನಗರದ ಹಿರಿಮೆಯಾದ ರಾಮದೇವರ ಬೆಟ್ಟದ ಪ್ರತಿಕೃತಿ ಸೇರಿದಂತೆ ಮತ್ತಷ್ಟು ವಿಶೇಷಗಳು ಸ್ತಬ್ದಚಿತ್ರಗಳ ಆಕರ್ಷಣೆಯಾಗಿರಲಿದೆ.
ಸಂಗೀತದ ರಸದೌತಣ:ಸಂಜೆ 6 ಗಂಟೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡ ಸಂಗೀತ ಸಂಜೆ ನಡೆಯಲಿದೆ. ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲ ರಾಜೇಶ್ ಕೃಷ್ಣನ್, ಮಂಗ್ಲಿ, ಅನುರಾಧ ಭಟ್ ಸೇರಿದಂತೆ ಹಲ ಗಾಯಕರು ಸಂಗೀತದ ರಸದೌತಣ ಬಡಿಸಲಿದ್ದಾರೆ. ಆವರಣದಲ್ಲಿಯೇ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ಈಗಾಗಲೇ ಹತ್ತಾರು ಮಳಿಗೆಗಳು ತಲೆ ಎತ್ತಿದ್ದು, ಓದುಗರಿಗೆ ಅಗತ್ಯ ಕನ್ನಡ ಪುಸ್ತಕಗಳು ಲಭ್ಯವಾಗಲಿವೆ.
ಬಾಕ್ಸ್.........ಡಿಕೆಶಿಯಿಂದ ರೇಷ್ಮೆನಾಡ ಕನ್ನಡ ಹಬ್ಬ ಉದ್ಘಾಟನೆ
ರಾಮನಗರ: ನಗರಸಭೆ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.22ರಂದು ಹಮ್ಮಿಕೊಂಡಿರುವ ''''''''ರೇಷ್ಮೆನಾಡ ಕನ್ನಡ ಹಬ್ಬ''''''''ವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತಿ ವಹಿಸಲಿದ್ದು, ಶಾಸಕ ಇಕ್ಸಾಲ್ ಹುಸೇನ್ ಅಧ್ಯಕ್ಷತೆ ವಹಿಸುವರು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸದ ಡಾ. ಸಿ.ಎನ್. ಮಂಜುನಾಥ್ ಕನ್ನಡ ಪುಸ್ತಕಗಳ ಮಳಿಗೆ ಉದ್ಘಾಟಿಸಲಿದ್ದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಭುವನೇಶ್ವರಿ ಚಿತ್ರ ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡುವರು. ಮಾಗಡಿ ಶಾಸಕ ಬಾಲಕೃಷ್ಣ, ಚನ್ನಪಟ್ಟಣ ಶಾಸಕ ಯೋಗೇಶ್ವರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಗೌರವ ಉಪಸ್ಥಿತಿ ವಹಿಸುವರು.ವಿವಿಧ ಕ್ಷೇತ್ರಗಳಿಗೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರು ''''''''ಕೆಂಗಲ್ ಹನುಮಂತಯ್ಯ ಪ್ರಶಸ್ತಿ'''''''' ಪ್ರದಾನ ಮಾಡುವರು. ಮಾಜಿ ಶಾಸಕರೂ ಆಗಿರುವ ಹಿರಿಯ ರಾಜಕಾರಣಿ ಸಿ.ಎಂ.ಲಿಂಗಪ್ಪ ಅವರಿಗೆ ''''''''ಪೌರ ಸನ್ಮಾನ'''''''' ನಡೆಯಲಿ. ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಗರದ ಮಿನಿ ವಿಧಾನಸೌಧದಿಂದ ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಶುರುವಾಗಲಿದೆ.
ಬಾಕ್ಸ್...............ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪುರಸ್ಕೃತರು
ರಾಮನಗರ ನಗರಸಭೆ ಕೊಡ ಮಾಡುವ ಕೆಂಗಲ್ ಹನುಮಂತಯ್ಯ ಪ್ರಶಸ್ತಿಗೆ 17 ಮಂದಿ ಭಾಜನರಾಗಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರೇಷ್ಮೆನಾಡ ಕನ್ನಡ ಹಬ್ಬದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಲು ಮರದ ನಿಂಗಣ್ಣ (ಪರಿಸರ ಸೇವೆ), ಸೈಯದ್ ಜಿಯಾವುಲ್ಲಾ ( ಆಡಳಿತ ಮತ್ತು ಸಮಾಜ ಸೇವೆ), ವಿ.ಆಶಾ (ಸಮಾಜ ಸೇವೆ), ಕೃಷ್ಣರಾಜು (ರಂಗುಭೂಮಿ), ಲಕ್ಷ್ಮಣ್ (ಸಮಾಜ ಸೇವೆ), ಪಿ.ನಾಗರಾಜು (ಹೈನುಗಾರಿಕೆ), ಶ್ರೀನಿವಾಸ (ಕಲಾ ಸೇವೆ), ಡಾ.ಶೇಖರ್ ಸುಬ್ಬಯ್ಯ (ವೈದ್ಯಕೀಯ), ವಿಷಕಂಠ (ಕ್ರೀಡೆ), ಎಚ್.ಶ್ರೀನಿವಾಸ್ (ಸಂಶೋಧನೆ), ಅಂಕನಹಳ್ಳಿ ಶಿವಣ್ಣ (ಕಲಾ ಸೇವೆ), ಚನ್ನಕೇಶವ (ಸಮಾಜ ಸೇವೆ), ಕವಿತಾ ರಾವ್ (ಸಾಂಸ್ಕೃತಿಕ ಸೇವೆ), ಡಾ.ಬೈರಮಂಗಲ ರಾಮೇಗೌಡ (ಸಾಹಿತ್ಯ), ಆಸೀಫ್ ಷರೀಫ್ (ಶಿಕ್ಷಣ ಸೇವೆ), ಎಂ.ಜಿ.ಶಿವಲಿಂಗಯ್ಯ (ಉತ್ತಮ ಆಡಳಿತ), ಡಾ.ಎಂ.ಬೈರೇಗೌಡ (ಜಾನಪದ).ಕೋಟ್ .............
ರಾಮನಗರ ನಗರಸಭೆ ವತಿಯಿಂದ ರೇಷ್ಮೆನಾಡ ಕನ್ನಡ ಹಬ್ಬ ಹೆಸರಿನಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಪೌರಸನ್ಮಾನ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡ ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ. ಕನ್ನಡ ಹಬ್ಬದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು.- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
21ಕೆಆರ್ ಎಂಎನ್ 1,2,3.ಜೆಪಿಜಿ1,2.ನಗರಸಭೆ ಸಿದ್ಧಪಡಿಸಿರುವ ಸ್ತಬ್ಧಚಿತ್ರ
3.ನಗರದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿರುವುದು.4.ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ.