ಸಾರಾಂಶ
ಶಹಾಪುರದ ಹಳೆಪೇಟೆ ಜ್ಞಾನಗಂಗೋತ್ರಿ ಶಾಲಾವರಣದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹುಟ್ಟುಹಬ್ಬ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ಸಿಲ್ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಶಿಸ್ತು ಸಜ್ಜನಿಕೆ, ವಿನಮ್ರ ನಡವಳಿಕೆ, ವಸ್ತುನಿಷ್ಠವಾದ ಅನುಭವ ಹಾಗೂ ಅಧ್ಯಯನ ರೂಢಿಸಿಕೊಂಡಿರುವ ಜನನಾಯಕರನ್ನು ಕಾಣುವುದು ಅತ್ಯಂತ ವಿರಳ. ಸಚಿವ ಶರಣಬಸಪ್ಪಗೌಡ ದರ್ಶನಾಪೂರವರಲ್ಲಿ ಈ ಎಲ್ಲ ಗುಣಗಳನ್ನು ಕಾಣಬಹುದಾಗಿದೆ. ಅವರು ನಾಡಿನ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಹಿರಿಯ ಮುಖಂಡ ಸಯ್ಯದ್ ಮುಸ್ತಾಫಾ ದರ್ಬಾನ ತಿಳಿಸಿದರು.ನಗರದ ಹಳಪೇಟೆ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹುಟ್ಟುಹಬ್ಬವನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ಸಿಲ್ ವಿತರಿಸುವ ಮೂಲಕ ಆಚರಣೆ ಮಾಡಿದ ಸಂದರ್ಭದಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.
ವೈಯಕ್ತಿಕ ಬದುಕಿಗಿಂತ ಸಾರ್ವಜನಿಕ ಹಿತವೇ ಮುಖ್ಯ ಎಂದು ನಂಬಿದವರು ಸಚಿವರು. ಅವರ ಹುಟ್ಟುಹಬ್ಬದಂದು ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಣೆ, ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ಮೂಲಕ ಸರಳತೆಗೆ ಸಾಕ್ಷಿಯಾಗಿದೆ ಎಂದರು.ಯುವ ಮುಖಂಡ ಮಲ್ಲಯ್ಯಸ್ವಾಮಿ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಚಿವರ ಅಭಿವೃದ್ಧಿ ಕಾರ್ಯಗಳು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು. ಶಿಕ್ಷಕ ಮಡಿವಾಳಪ್ಪ ಪಾಟೀಲ್ ಮಾತನಾಡಿ, ಎಲೆಮರೆಕಾಯಿಯಂತಿರುವ ಮೊಹರಂ ಪದಗಳ ಕಲಾವಿದರಾದ ಶೇಖರಹೀಮ್ ಹಾಗೂ ಖಲೀಲ ಜಮಾದಾರರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು.
ವಿಜಯಕುಮಾರ ಎದುರುಮನಿ, ಬಸವರಾಜ ಕಡಗಂಚಿ, ಅಲ್ಲಾ ಪಟೇಲ ಮಕ್ತಾಪುರ, ಸಿದ್ದಪ್ಪ ಕನ್ಯಾಕೋಳೂರು, ಮಾನಪ್ಪ ವಠಾರ ಸಗರ, ಲಕ್ಷ್ಮಣ ಶೆಟ್ಟಿಕೇರಾ, ಭೀಮರಾಯ ಜುನ್ನ, ಅನೀಲ ಅಲಬನೂರ, ಸದಾಶಿವ ಮುಧೋಳ, ನಿಂಗರಾಜ ದೇಶಮುಖ, ಅಜೀಮ ಜಮಾದಾರ, ಶಿವಶರಣ, ಅನಿಲಕುಮಾರ, ಬಸವರಾಜ ರೆಡ್ಡಿ, ನಾಗರಾಜ, ಧರ್ಮರಾಜ, ಹೊಸನಪ್ಪ ಹಳಿಸಗರ, ಮಂಜುನಾಥ, ಅಬ್ಬಾಸ ಅಲಿ, ಮಲ್ಲನಗೌಡ, ಸುರೇಶ, ಭಾಗಪ್ಪ ಸೇರಿ ಇತರರಿದ್ದರು.