ಸಾರಾಂಶ
ಹೊಸದುರ್ಗ: ಆಡಂಬರವಿಲ್ಲದ ಸರಳ ಹಾಗೂ ಅರ್ಥಪೂರ್ಣ ವಿವಾಹವನ್ನು ಇತ್ತೀಚಿನ ದಿನಗಳಲ್ಲಿ ಕಾಣುವುದು ವಿರಳವಾಗಿದೆ ಎಂದು ಚಿತ್ರದುರ್ಗ ಎಂ.ಎಲ್.ಸಿ ನವೀನ್ ಅಭಿಪ್ರಾಯಪಟ್ಟರು.
ಹೊಸದುರ್ಗ: ಆಡಂಬರವಿಲ್ಲದ ಸರಳ ಹಾಗೂ ಅರ್ಥಪೂರ್ಣ ವಿವಾಹವನ್ನು ಇತ್ತೀಚಿನ ದಿನಗಳಲ್ಲಿ ಕಾಣುವುದು ವಿರಳವಾಗಿದೆ ಎಂದು ಚಿತ್ರದುರ್ಗ ಎಂ.ಎಲ್.ಸಿ ನವೀನ್ ಅಭಿಪ್ರಾಯಪಟ್ಟರು.
ಅವರು ಕುಪ್ಪಳ್ಳಿಯಲ್ಲಿ ನಡೆದ ಹೊಸದುರ್ಗ ತಾಲೂಕಿನ ನಾಗೇನಹಳ್ಳಿಯ ಉಷಾ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದ ವಕೀಲ ಪಂಪ ಎಚ್.ಎನ್ ಅವರ ಮಂತ್ರ ಮಾಂಗಲ್ಯ ಎಂಬ ಪರಿಕಲ್ಪನೆಯ ವಿವಾಹ ಸಮಾರಂಭದಲ್ಲಿ ನವದಂಪತಿಗಳಿಗೆ ಹರಸಿ ಮಾತನಾಡಿದರು.ಪಂಪ, ಉಷಾ ದಂಪತಿಗಳು ಕುವೆಂಪುರವರ ಆಶಯದಂತೆ ಸರಳ ವಿವಾಹ ಮಾಡಿಕೊಂಡು ಸಮಾಜದಲ್ಲಿ ಆದರ್ಶವಾಗಿ ಬಾಳಬೇಕು. ಜನ್ಮ ನೀಡಿದ ತಂದೆ ತಾಯಿಗಳ ಆಶೀರ್ವಾದ ಪಡೆದು ನವ ಜೀವನಕ್ಕೆ ಕಾಲಿಸಿದ ದಂಪತಿಗಳು ಸಮಾಜದಲ್ಲಿ ಮಾದರಿಯಾಗಿ ಬದುಕಲಿ ಎಂದರು.
ವಿಶ್ರಾಂತ ಪ್ರಾಚಾರ್ಯ ಡಾ. ಗಣಪತಿ ಮಾತನಾಡಿ, ಮದುವೆ ಎಂಬುದು ಎರಡು ಹೃದಯಗಳು ಮತ್ತು ಎರಡು ಕುಟುಂಬಗಳನ್ನ ಬೆಸೆಯುವ ಪವಿತ್ರ ಕಾರ್ಯ. ಸರಳ ವಿವಾಹಗಳು ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲವು. ಜಗತ್ತಿನಲ್ಲಿ ಎಂದೂ ಪರಸ್ಪರ ಒಬ್ಬರನ್ನ ಒಬ್ಬರು ನೋಡಿರದ ಮನಸ್ಸುಗಳು ಒಮ್ಮೆ ಬೆಸೆದಾಗ ನಾನು ನಿನ್ನವಳು, ನಾನು ನಿನ್ನವನು ಎಂದು ಹೇಳಿ ಪರಸ್ಪರ ಪ್ರೀತಿಸಿ ಬದುಕು ಕಟ್ಟಿಕೊಳ್ಳುವುದೇ ಒಂದು ಆಶ್ಚರ್ಯ ಎಂದರು.ಕಾರ್ಯಕ್ರಮದಲ್ಲಿ ಕುವೆಂಪುರವರ ವಿಶ್ವಮಾನವತೆಯ ಮಂತ್ರ ಮಾಂಗಲ್ಯದ ಮಹತ್ವವನ್ನು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ಬುರುಡೆಕಟ್ಟೆ ರಾಜೇಶ್, ಹನುಮಂತೇಗೌಡ, ತುಂಬಿನಕೆರೆ ಬಸವರಾಜ್, ಜಗದೀಶ್ ರಾಮಯ್ಯ, ಮನು ಮುತ್ತೋಡ್, ಪಾಂಡುರಂಗಪ್ಪ, ಮಲ್ಲಿಕಾರ್ಜುನ್, ಸಾಚ ಮಂಜಯ್ಯ ಮಲ್ಲಿಕಾರ್ಜುನ್, ರವಿಕಿರಣ್ ಪಾಟೀಲ್ ಅರುಣ್ರಾ ರಾಮಗಿರಿ, ಮಲ್ಲೇಶ್, ಸುಮಂತ್, ಅರುಣ್ ರವಿ ಪೀಲಾಪುರ ಇದ್ದರು.