ಕನ್ನಡ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ

| Published : Mar 16 2025, 01:48 AM IST

ಸಾರಾಂಶ

ಬಾಗೇಪಲ್ಲಿ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದ್ದರೂ ಸಹ ಇಲ್ಲಿನ ಬಹುತೇಕರ ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಮಹನೀಯರ, ಸಂತರ, ಕವಿಗಳ, ಸಾಹಿತಿಗಳ ಪರಿಚಯಕ್ಕಾಗಿ ಪ್ರತಿ ತಿಂಗಳು ಶಾಲಾ, ಕಾಲೇಜುಗಳಲ್ಲಿ ವಿವಿಧ ಕನ್ನಡ ಸಾಹಿತ್ಯ ಇತ್ಯಾಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತೆಲುಗು ಪ್ರಭಾವವಿರುವ ಈ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ ಸೇರಿದಂತೆ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳುವ ಮೂಲಕ ಕನ್ನಡ ಕಂಪು ಮೂಡಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ನೂತನ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ತಿಳಿಸಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ನೂತನ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಅವರಿಗೆ ಅಧಿಕಾರ ಹಸ್ತಾಂತಾರಿಸಿದ ಬಳಿಕ ಮಾತನಾಡಿದರು.

ವ್ಯವಹಾರಿಕ ಭಾಷೆ ಕನ್ನಡ

ಕಸಾಪ ನೂತನ ತಾಲೂಕು ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದ್ದರೂ ಸಹ ಇಲ್ಲಿನ ಬಹುತೇಕರ ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆ, ಸಾಹಿತ್ಯ, ಮಹನೀಯರ, ಸಂತರ, ಕವಿಗಳ, ಸಾಹಿತಿಗಳ ಪರಿಚಯಕ್ಕಾಗಿ ಪ್ರತಿ ತಿಂಗಳು ಶಾಲಾ, ಕಾಲೇಜುಗಳಲ್ಲಿ ವಿವಿಧ ಕನ್ನಡ ಸಾಹಿತ್ಯ ಇತ್ಯಾಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎ.ಜಿ.ಸುಧಾಕರ್, ಎಂ.ಪಿ.ಮುನಿವೆಂಕಟಪ್ಪ, ಮಹಮದ್ ಎಸ್. ನೂರುಲ್ಲಾ, ಬಾಣಾಲಪಲ್ಲಿ ಶ್ರೀನಿವಾಸ್, ಎನ್.ಶಿವಪ್ಪ, ಎ.ವಿ. ಪೂಜಪ್ಪ, ಆರ್.ಹನುಮಂತರೆಡ್ಡಿ, ವೆಂಕಟಶಿವಾರೆಡ್ಡಿ, ಎಚ್.ಎಸ್.ಸುಬ್ರಮಣ್ಯಂ, ಎಂ.ಎನ್.ರಘುರಾಮರೆಡ್ಡಿ, ಬಿಳ್ಳೂರು ನಾಗರಾಜು, ಕೆ.ಎನ್.ಹರೀಶ್, ಪಿ.ಜಿ.ಶಿವಶಂಕರಾಚಾರಿ, ಸುಜಾತಮ್ಮ, ಪದ್ಮಾವತಿ, ವಿ.ಸುಕನ್ಯಾ, ರಾಧಾಮಣಿ, ಜ್ಯೋತಿ, ಕೋಟಪ್ಪ, ಜೀವಿಕ ನಾರಾಯಣಸ್ವಾಮಿ, ಕಸಾಪ ಪದಾಧಿಕಾರಿಗಳು ಹಾಜರಿದ್ದರು.