ಸಾರಾಂಶ
ಪರಿಶಿಷ್ಟ ಜನಾಂಗಕ್ಕೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಸಮಸ್ಯೆಗಳನ್ನು 24 ಗಂಟೆಯಲ್ಲಿ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಿವೈಎಸ್ಪಿ ಎಂ.ಪಾಂಡುರಂಗಯ್ಯ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಪರಿಶಿಷ್ಟ ಜನಾಂಗಕ್ಕೆ ಸಂಬಂಧಿಸಿದ ಪೊಲೀಸ್ ಇಲಾಖೆಯ ಸಮಸ್ಯೆಗಳನ್ನು 24 ಗಂಟೆಯಲ್ಲಿ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಡಿವೈಎಸ್ಪಿ ಎಂ.ಪಾಂಡುರಂಗಯ್ಯ ಭರವಸೆ ನೀಡಿದರು. ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಜರುಗಿದ ರಾಮದುರ್ಗ ಉಪವಿಭಾಗ ಮಟ್ಟದ ಪರಿಶಿಷ್ಟ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಪ್ರಕರಣಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದವು ಇಲ್ಲ. ಉಳಿದ ಇಲಾಖೆಯ ಸಮಸ್ಯೆಗಳೇ ಹೆಚ್ಚಿವೆ. ಉಳಿದ ಇಲಾಖೆಗಳಿಗೆ ಪತ್ರ ಬರೆದು ಸಮಸ್ಯೆ ನಿವಾರಿಸಲು ಯತ್ನಿಸಲಾಗುವುದು ಎಂದು ತಿಳಿಸಿದರು.ರಾಮದುರ್ಗ ಉಪವಿಭಾಗದ ಪೊಲೀಸ್‌ಇಲಾಖೆಗೆ ಒಳಪಡುವ ರಾಮದುರ್ಗ, ಕಟಕೋಳ, ಸುರೇಬಾನ, ಸವದತ್ತಿ, ಯರಗಟ್ಟಿ, ಮುನವಳ್ಳಿ, ಮುರಗೋಡ ಗ್ರಾಮಗಳ ಜನರು ಏನೇ ತೊಂದರೆ ಎದುರಾದರೂ ನೇರವಾಗಿ ತಮ್ಮನ್ನು ಖುದ್ದು ಇಲ್ಲವೇ ಫೋನ್ ಮೂಲಕ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಕಳೆದ ಸಭೆಯಲ್ಲಿ ಚರ್ಚಿಸಿದಂತೆ ದಲಿತರಿಗೆ ಸ್ಮಶಾನ ಭೂಮಿ ಆಕ್ಷೇಪಣೆಗಳನ್ನು ನಿವಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಗೊಡಚಿ ಗ್ರಾಮದ ಸಮಸ್ಯೆ ಇತ್ಯರ್ಥವಾಗಿದೆ. ಇನ್ನು ಸಾಲಹಳ್ಳಿಯ ಸಮಸ್ಯೆ ಬಾಕಿ ಉಳಿದಿದ್ದು, ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಬಹಳಷ್ಟು ದಿನಗಳಿಂದ ರಂಕಲಕೊಪ್ಪ ಗ್ರಾಮ ವ್ಯಾಪ್ತಿಯ ಮೇಗುಂಡೇಶ್ವರ ಕೊಳ್ಳದ ದಾರಿಯಲ್ಲಿ ಪರಿಶಿಷ್ಟರು ಅರಣ್ಯ ಭೂಮಿಯನ್ನು ಉಳಿಮೆ ಮಾಡಿಕೊಂಡಿದ್ದರು. ಆದರೆ, ಈಗಿನ ಆರ್‌ಎಫ್‌ಒ ಪರಿಶಿಷ್ಟರಿಗೆ ಭೂಮಿ ಕೊಡಿಸುವುದಾಗಿ ಹೇಳಿ ಈಗ ಅಲ್ಲಿ ಗಿಡಗಳನ್ನು ನಡೆತ್ತಿದ್ದಾರೆ ಎಂದು ಮುಖಂಡರು ದೂರಿದರು. ಗ್ರಾಮೀಣ ಪರಿಶಿಷ್ಟರಿಗೆ ಶುದ್ಧ ಕುಡಿಯುವ ನೀರು, ಒಳಚರಂಡಿ ಮತ್ತು ಮಕ್ಕಳ ಹಾಸ್ಟೆಲ್‌ಗಳಲ್ಲಿ ಸೀಟ್ ದೊರಕಿಸಿಕೊಡಲು ಆಯಾ ಇಲಾಖೆಗಳಿಗೆ ಸೂಚಿಸಲಾಗುವುದು. ಪರಿಶಿಷ್ಟರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೊಲೀಸ್ ಇಲಾಖೆ ಸಿದ್ಧವಿದೆ ಎಂದರು.ಈ ಸಂದರ್ಭದಲ್ಲಿ ರಾಮದುರ್ಗದ ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ಮುರಗೋಡ ಪೊಲೀಸ್‌ಇನ್‌ಸ್ಪೆಕ್ಟರ್‌ಐ.ಎಂ.ಮಠಪತಿ, ಸವದತ್ತಿ ಪೊಲೀಸ್‌ಇನ್‌ಸ್ಪೆಕ್ಟರ್‌ಡಿ.ಎಸ್.ಧರ್ಮಟ್ಟಿ, ರಾಮದುರ್ಗ ಪಿಎಸೈ ಸುನೀಲಕುಮಾರ ನಾಯಕ, ಸುರೇಬಾನ ಪಿಎಸೈ ಎಸ್.ಎಚ್.ಪವಾರ ಸೇರಿದಂತೆ ಉಪವಿಭಾಗ ಮಟ್ಟದ ಪರಿಶಿಷ್ಟ ಜನಾಂಗ ಮುಖಂಡರು ಇದ್ದರು.