ಜೀವನ ನಿರ್ವಹಣೆಗೆ ಅನುಕೂಲ ಕೋರಿ ಏಕಾಂಗಿ ಪ್ರತಿಭಟನೆ

| Published : Feb 25 2025, 12:49 AM IST

ಸಾರಾಂಶ

ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದ್ದು, ಸರ್ಕಾರದಿಂದ ನೀಡಲಾಗುವ ಯೋಜನೆಗಳ ಪೈಕಿ ಯಾವುದಾದರೊಂದು ಯೋಜನೆಯನ್ನು ನೀಡಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮದ್ದೂರು ತಾಲೂಕು ತರೀಕೆರೆ ಕಾಲೋನಿ ಪರಿಶಿಷ್ಟ ಸಮುದಾಯದ ವ್ಯಕ್ತಿಯೋರ್ವ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದ್ದು, ಸರ್ಕಾರದಿಂದ ನೀಡಲಾಗುವ ಯೋಜನೆಗಳ ಪೈಕಿ ಯಾವುದಾದರೊಂದು ಯೋಜನೆಯನ್ನು ನೀಡಿ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮದ್ದೂರು ತಾಲೂಕು ತರೀಕೆರೆ ಕಾಲೋನಿ ಪರಿಶಿಷ್ಟ ಸಮುದಾಯದ ವ್ಯಕ್ತಿಯೋರ್ವ ಪ್ರತಿಭಟನೆ ನಡೆಸಿದರು.

ಜಿಲ್ಲಾಕಾರಿ ಕಚೇರಿ ಬಳಿ ಧರಣಿ ನಡೆಸಿದ ತರೀಕೆರೆ ಗ್ರಾಮದ ಟಿ.ದಿನೇಶ್ ಎಂಬಾತ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ತನಗೆ ಸೇರಿದ ಯಾವುದೇ ಜಮೀನು ಇಲ್ಲ, ಉದ್ಯೋಗವೂ ಇಲ್ಲ. ಪರಿಷ್ಟ ಜಾತಿಗೆ ಸೇರಿಸಿರುವ ನನಗೆ ಯಾವುದೇ ಆದಾಯ ಮೂಲ ಇಲ್ಲದಿರುವ ಕಾರಣ ಮಾನವೀಯತೆ ದೃಷ್ಟಿಯಿಂದ ಯಾವುದಾದರೂ ಉದ್ಯೋಗ ಅಥವಾ ಹಸು ಸಾಕಾಣಿಕೆ, ಕುರಿ ಅಥವಾ ಬೇರೆ ರೀತಿಯ ಸಾಮಾಜಿಕ ಯೋಜನೆಗಳನ್ನು ಕೊಡಿಸುವ ಮೂಲಕ ಜೀವನ ನಿರ್ವಹಣೆಗೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಆಪ್ತ ಸಹಾಯಕನಿಗೆ ಮನವಿ ಸಲ್ಲಿಸಿದರು.

ಮನ್ಮುಲ್ ನಿರ್ದೇಶಕ ಶಿವಕುಮಾರ್ ರಿಂದ ಅರಳಿಕಟ್ಟೆ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ

ಪಾಂಡವಪುರ:

ತಾಲೂಕಿನ ಡಿಂಕಾ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ 5 ಲಕ್ಷ ರು. ಅಂದಾಜು ವೆಚ್ಚದಲ್ಲಿ ಗ್ರಾಮದ ಅರಳಿಕಟ್ಟೆ ಜೀರ್ಣೋದ್ಧಾರ ಕಾಮಗಾರಿಗೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮದ ಡೇರಿ ಜಿಲ್ಲೆಗೆ ಮಾದರಿಯಾಗಿದೆ. ತಾಲೂಕಿನಲ್ಲೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ಸಂಘವಾಗಿದೆ ಎಂದರು.

ಸಂಘವು ಇದೀಗ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅರಳಿಕಟ್ಟೆ ಜೀರ್ಣೋದ್ಧಾರ ಮಾಡಲು ಮುಂದಾಗಿರುವುದು ಶ್ಲಾಘನೀಯ. ಸಹಕಾರ ಸಂಘಗಳ ಉತ್ಪಾದಕ ರೈತರ ಅಭಿವೃದ್ಧಿ ಜತೆಗೆ ಸಮಾಜಕ್ಕೆ ಮಾದರಿಯಾಗುವ ಹಲವು ಸಮಾಜಮುಖಿ ಕಾರ್‍ಯಗಳನ್ನು ನಡೆಸಿ ಮಾದರಿಯಾಗಬೇಕು ಎಂದರು.

ಈ ವೇಳೆ ಡೇರಿ ಅಧ್ಯಕ್ಷ ಗಿರೀಶ್, ಗ್ರಾಪಂ ಅಧ್ಯಕ್ಷ ನಂಜೇಗೌಡ, ಡೇರಿ ಕಾರ್‍ಯದರ್ಶಿ ಶಿವಪ್ಪ ಸೇರಿದಂತೆ ಡೇರಿ ಉಪಾಧ್ಯಕ್ಷರು, ನಿರ್ದೇಶಕರು, ಗ್ರಾಪಂ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು, ಯಜಮಾನರು ಭಾಗವಹಿಸಿದ್ದರು.