ಸಾರಾಂಶ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಗುಳೇದಗುಡ್ಡ ಕುಪ್ಪಸದ (ಖಣ) ಕುರಿತಾಗಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.
ಗುಳೇದಗುಡ್ಡ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಗುಳೇದಗುಡ್ಡ ಕುಪ್ಪಸದ (ಖಣ) ಕುರಿತಾಗಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಗುಳೇದಗುಡ್ಡ ಖಣದ ಪ್ರದರ್ಶಿಸಿದ್ದಕ್ಕೆ ಪಟ್ಟಣದ ಜನತೆ ಹರ್ಷಗೊಂಡರು. ಜಿಲ್ಲೆಯಿಂದ ಪ್ರದರ್ಶನಗೊಂಡ ಈ ಸ್ತಬ್ಧ ಚಿತ್ರದಲ್ಲಿ ಗುಳೇದಗುಡ್ಡದ ಕುಪ್ಪಸ (ಖಣ) ನೇಯುತ್ತಿರುವ ವ್ಯಕ್ತಿ, ಜೊತೆಗೆ ಕುಪ್ಪಸ ತಯಾರಿಕೆಗೆ ಬೇಕಾದ ಕಂಡಕಿ ಸುತ್ತುವ ಮಹಿಳೆ ಹಾಗೂ ಚಾಲುಕ್ಯರ ಐತಿಹಾಸಿಕ ದೇವಸ್ಥಾನವನ್ನು ಈ ಸ್ತಬ್ಧ ಚಿತ್ರದಲ್ಲಿ ಸಿದ್ಧಪಡಿಸಿ, ಪ್ರದರ್ಶಿಸಲಾಗಿದೆ. ಮೈಸೂರು ದಸರಾ ಪ್ರದರ್ಶನದಲ್ಲಿ ಗುಳೇದಗುಡ್ಡ ಕುಪ್ಪಸದ ಸ್ತಬ್ಧಚಿತ್ರ ಪ್ರದರ್ಶನಗೊಂಡಿದ್ದಕ್ಕೆ ಇಲ್ಲಿನ ಕೈಮಗ್ಗ ಉತ್ಪನ್ನಗಳ ನೇಕಾರ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಸೇರಿದಂತೆ ನೇಕಾರ ಮುಖಂಡರು, ನೇಕಾರರು, ಖಣಗಳ ವರ್ತಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.