ವಾಸವಿ ಕ್ಲಬ್‌ಗೆ ಹಲವು ಪ್ರಶಸ್ತಿಗಳ ಸರಮಾಲೆ

| Published : Oct 22 2024, 12:16 AM IST

ಸಾರಾಂಶ

ಹೊಳೆನರಸೀಪುರ ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಅವರಿಗೆ ಅತ್ಯುತ್ತಮ ಅಧ್ಯಕ್ಷ, ಹೇಮಾ ನಾಗೇಂದ್ರ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ಹಾಗೂ ಎಚ್.ಎಸ್. ಮಂಜುನಾಥ್ ಗುಪ್ತ ಅವರಿಗೆ ಅತ್ಯುತ್ತಮ ಖಜಾಂಚಿ ಪ್ರಶಸ್ತಿ ಜತೆಗೆ ಅತ್ಯುತ್ತಮ ಕ್ಲಬ್, ಅತ್ಯುತ್ತಮ ಬ್ಯಾನರ್ ಪ್ರದರ್ಶನ ಪ್ರಶಸ್ತಿಗಳು ವಾಸವಿ ಕ್ಲಬ್ ವಿಭಾಗೀಯ ಸಮ್ಮೇಳನದಲ್ಲಿ ಲಭಿಸಿದೆ. ವಾಸವಿ ಕ್ಲಬ್ ನಿರ್ದೇಶಕರಾದ ಅಂಬಟಿ ಪ್ರಸಾದ್, ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಅವರಿಗೆ ಅತ್ಯುತ್ತಮ ಅಧ್ಯಕ್ಷ, ಹೇಮಾ ನಾಗೇಂದ್ರ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ಹಾಗೂ ಎಚ್.ಎಸ್. ಮಂಜುನಾಥ್ ಗುಪ್ತ ಅವರಿಗೆ ಅತ್ಯುತ್ತಮ ಖಜಾಂಚಿ ಪ್ರಶಸ್ತಿ ಜತೆಗೆ ಅತ್ಯುತ್ತಮ ಕ್ಲಬ್, ಅತ್ಯುತ್ತಮ ಬ್ಯಾನರ್ ಪ್ರದರ್ಶನ ಪ್ರಶಸ್ತಿಗಳು ವಾಸವಿ ಕ್ಲಬ್ ವಿಭಾಗೀಯ ಸಮ್ಮೇಳನದಲ್ಲಿ ಲಭಿಸಿದೆ.

ಅಕ್ಟೋಬರ್‌ ೨೦ರ ಭಾನುವಾರ ಬೆಂಗಳೂರಿನ ಯಶವಂತಪುರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ವಿಭಾಗೀಯ ಮುಖ್ಯಸ್ಥ ಭಾಸ್ಕರ್‌ ರಾವ್, ಅಂತರ ರಾಷ್ಟ್ರೀಯ ವಾಸವಿ ಕ್ಲಬ್ ನಿರ್ದೇಶಕರಾದ ಅಂಬಟಿ ಪ್ರಸಾದ್, ಪ್ರಶಸ್ತಿ ನೀಡಿ ಗೌರವಿಸಿದರು. ಪಟ್ಟಣದ ವಾಸವಿ ಕ್ಲಬ್ ೨೦೨೩ನೇ ಸಾಲಿನಲ್ಲಿ ೨೦ಕ್ಕೂ ಹೆಚ್ಚು ಸಮಾಜ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಕ್ಲಬ್ ಸದಸ್ಯರಾದ ರಾಮಕೃಷ್ಣ ಗುಪ್ತಾ, ನಾಗೇಶ್, ಸುಮಾ ಅಭಿಲಾಷ್‌. ಲಕ್ಷ್ಮೀ ಗುಪ್ತಾ, ಲಕ್ಷ್ಮೀ ನಾಗೇಶ್ ಭಾಗವಹಿಸಿದ್ದರು. ವಾಸವಿ ಕ್ಲಬ್ ಅಧ್ಯಕ್ಷ ರೋಹಿತ್ ಮಾತನಾಡಿ, ಕ್ಲಬ್‌ನ ಹಿರಿಯ ಸದಸ್ಯರಾದ ಎಸ್.ಗೋಕುಲ್, ಎ.ಆರ್.ರವಿಕುಮಾರ್‌, ಉದಯಭಾನು, ರವಿ ಕೀರ್ತಿ, ಅವಿನಾಶ್ ಹಾಗೂ ಹಿರಿಯ ಸದಸ್ಯರು ಕ್ಲಬ್ ನಡೆಸುವ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಸೂಕ್ತ ಸಲಹೆ, ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು ಎಂದು ಕೃತಜ್ಞತೆ ಸಲ್ಲಿಸಿದರು.