ಸಾರಾಂಶ
ತರೀಕೆರೆಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಹೇಳಿದ್ದಾರೆ.
- ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮ ದಿನದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಕನ್ನಡಪ್ರಭ ವಾರ್ತೆ, ತರೀಕೆರೆಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಹೇಳಿದ್ದಾರೆ.
ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮ ದಿನದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಶಿಕ್ಷಣ ವ್ಯವಸ್ಥೆ ಅಡಿಪಾಯದ ಮೇಲೆ ಮಾತ್ರ ಸದೃಢ ಸಶಕ್ತ ರಾಷ್ಟ್ರದ ನಿರ್ಮಾಣ ಸಾಧ್ಯ, ಶಿಕ್ಷಣ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೀಲಿ ಕೈಯಾಗಿದ್ದು ವಿದ್ಯೆ ಯನ್ನುಯಾರೂ ಕದಿಯಲಾರದ ಆಸ್ತಿಯಾಗಿದೆ. ಅಂತಹ ಆಸ್ತಿ ಶ್ರದ್ಧೆ, ಪ್ರಾಮಾಣಿಕತೆ, ಏಕಾಗ್ರತೆ, ಶಿಸ್ತಿನಿಂದ ಪಡೆದಿದ್ದೇ ಯಾದಲ್ಲಿ ಜೀವನದಲ್ಲಿ ಯಶಸ್ಸು ಶತಃಸಿದ್ಧ ಎಂದ ಅವರು ಮೌಲನಾ ಅಬುಲ್ ಕಲಾಂ ಆಜಾದ್ ವ್ಯಕ್ತಿತ್ವ ಪ್ರತಿ ಯೊಬ್ಬರಿಗೂ ಅನುಕರಣೀಯ. ಅವರ ಆದರ್ಶಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು. ವಿದ್ಯಾರ್ಥಿ ಒಕ್ಕೂಟ ಚೇರಮನ್ .ಶಿವರಾಜಕುಮಾರ ಕೆ. ಮಾತನಾಡಿ ದೇಶದ ಮೊದಲ ಶಿಕ್ಷಣ ಮಂತ್ರಿಯಾಗಿದ್ದ ಭಾರತರತ್ನ ಪ್ರಶಸ್ತಿ ಪಡೆದ ಮೌಲಾನಾ ಅಬುಲ್ ಕಲಾಂ ಅವರ ದೇಶ ಸೇವೆ ಮತ್ತು ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ಮೌಲಾನಾ ಅಬುಲ್ ಕಲಾಂ ಪಾತ್ರ ಬಹಳ ಮುಖ್ಯ ಎಂಬುದನ್ನು ಸ್ಪಷ್ಟಪಡಿಸಿದರು.ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಎನ್.ಎಸ್.ಎಸ್. ಅಧಿಕಾರಿ ಜೆ.ರಘು ಮಾತನಾಡಿ ಮೌಲಾನಾ ಅಬುಲ್ ಕಲಾಂ ಆಜಾದ್ ವ್ಯಕ್ತಿತ್ವ ಮತ್ತು ದೇಶಕ್ಕೆ ಕೊಟ್ಟ ವಿವಿಧ ಕೊಡುಗೆಗಳನ್ನು ಸ್ಮರಿಸಿದರು. ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ.ಸದಾಶಿವನಾಯ್ಕ ಎ. ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಬದುಕು ಆದರ್ಶವಾಗಬೇಕು ಇಂತಹ ಮಹನೀಯರು ದೇಶಕ್ಕೆ ಸಿಕ್ಕಿರುವುದು ಭಾರತೀಯರ ಸೌಭಾಗ್ಯ. ಉತ್ತಮ ಮೌಲ್ಯಗಳನ್ನು ಒಳಗೊಂಡ ಶಿಕ್ಷಣ ಇಂದಿನ ಸಮಾಜಕ್ಕೆಅವಶ್ಯಕ ಎಂದರು.ಅರ್ಥಶಾಸ್ತ್ರ ಉಪನ್ಯಾಸಕಿ ನೇತ್ರಾವತಿ ಬಿ. ಪ್ರತಿಯೊಬ್ಬ ಪ್ರಜೆ ವ್ಯಕ್ತಿತ್ವ ನಿರ್ಮಾಣದ ಮೂಲಕ ವಿವಿಧ ರಂಗಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲು ಸಂವಿಧಾನದ ಆಶಯಗಳನ್ವಯ ಸುಖೀ ರಾಜ್ಯ ನಿರ್ಮಾಣವಾಗಬೇಕಾದರೆ ಶಿಕ್ಷಣ ಎಂಬುದು ಅತೀ ಮೂಲಭೂತ ಅವಶ್ಯಕ ಎಂಬ ಮೌಲಾನಾ ಅಬುಲ್ ಕಲಾಂ ಆಜಾದ್ ಬುದುಕಿನ ಆಶಯ ವ್ಯಕ್ತಪಡಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ಎನ್.ಎಸ್.ಸುಬ್ರ ಮಣ್ಯ, ವಿದ್ಯಾರ್ಥಿ ಸೈಫ್ ಅಲಿ ಮಾತನಾಡಿದರು. ಅಮೃತ್ ಎಚ್.ಆರ್, ಅರುಣ .ಪಿ, ಅರ್ಪಿತ .ಎ, ಸಂಧ್ಯಾ.ಎಸ್. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.-
12ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಕೆ.ಜಿ.ಚವಾಣ ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))