ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ: ನಾಗರಾಜ ಸರ್ವದೆ

| Published : Apr 27 2024, 01:18 AM IST

ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ: ನಾಗರಾಜ ಸರ್ವದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪೂರ್ಣ ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಾಗರಾಜ ಸರ್ವದೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂಪೂರ್ಣ ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಾಗರಾಜ ಸರ್ವದೆ ಹೇಳಿದರು. ನಗರದ ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೆರೋಡೋಟಸ್ ಕ್ಲಬ್ ಮತ್ತು ಎನ್.ಎಸ್.ಎಸ್ ಘಟಕದ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಅಭಿಮಾನದಿಂದ ಒಟ್ಟುಗೂಡಿ ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಮತದಾನ ಜಾಗೃತಿ ಕುರಿತು ವಿವಿಧ ಹಾಡು ಮತ್ತು ಕಿರುನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಗಂಗಾಧರ ಮತ್ತು ಭಾಗ್ಯಾ ಅವರು ವಿದ್ಯಾರ್ಥಿಗಳ ಅನಿಸಿಕೆ ವ್ಯಕ್ತಪಡಿಸಿದರು.

ಸುಸ್ಥಿರ ಅಭಿವೃದ್ಧಿಗೆ ಮತದಾನ ಮುಖ್ಯ ಎಲ್ಲರೂ ಕೂಡಿ ಒಗ್ಗಟ್ಟಿನಿಂದ ಮತದಾನ ಮಾಡಬೇಕು, ಆಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗುವುದು, ಮತದಾನದ ಮಹತ್ವ ಮತ್ತು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎನ್.ಎಸ್.ಎಸ್ ಘಟಕದ ಕಾರ್ಯಾಧ್ಯಕ್ಷ ಡಾ.ಸಿದ್ದಪ್ಪ ಭೂಮಣ್ಣವರ ವಿವರಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ವೆಂಕಟೇಶ ರೊಡ್ಡನ್ನವರ, ಗಂಗಾಧರ, ಗೀತಾ ಮತ್ತು ಹೆರೋಡೋಟಸ್ ಕ್ಲಬ್ ಕಾರ್ಯದರ್ಶಿಗಳಾದ ಪೂಜಾ ಮತ್ತು ಯುವರಾಜ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಶಿವಲಿಂಗ ಮುತ್ತೂರ ಸ್ವಾಗತಿಸಿದರು, ಹನುಮಂತ ನಿರೂಪಿಸಿದರು. ನರಸನಗೌಡ ವಂದಿಸಿದರು. ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.