ರೈತರ ಉಳಿವಿಗಾಗಿ ಮಠಾಧೀಶರಿಂದ ಹೋರಾಟ

| Published : Nov 05 2024, 01:42 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದೇಶದಲ್ಲಿ ರೈತರು, ಸಾರ್ವಜನಿಕರ ಮೇಲೆ ಆಗುತ್ತಿರುವ ಅನ್ಯಾಯ ತಡೆಯಲು ಸಂಪೂರ್ಣ ವಕ್ಫ್ ಮಂಡಳಿಯನ್ನೇ ರದ್ದುಗೊಳಿಸಬೇಕು. ಇಲ್ಲಿಯವರೆಗೂ ಆಗಿರುವ ಗೆಜೆಟ್‌ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಮಠಾಧೀಶರು ಹಾಗೂ ರೈತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶದಲ್ಲಿ ರೈತರು, ಸಾರ್ವಜನಿಕರ ಮೇಲೆ ಆಗುತ್ತಿರುವ ಅನ್ಯಾಯ ತಡೆಯಲು ಸಂಪೂರ್ಣ ವಕ್ಫ್ ಮಂಡಳಿಯನ್ನೇ ರದ್ದುಗೊಳಿಸಬೇಕು. ಇಲ್ಲಿಯವರೆಗೂ ಆಗಿರುವ ಗೆಜೆಟ್‌ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಮಠಾಧೀಶರು ಹಾಗೂ ರೈತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ನಗರದ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.

ಸಿಂದಗಿಯ ಸಾರಂಗಮಠದ ಪ್ರಭು ಸಾರಂಗದೇವರು ಮಾತನಾಡಿ, ಮಠಾಧೀಶರು ಯಾವಾಗಲೂ ರೈತ ಪರ ಕಾಳಜಿ ಉಳ್ಳವರು. ರೈತರಿಗೆ ಅನ್ಯಾಯವಾದರೂ ನಾವು ಸಹಿಸುವುದಿಲ್ಲ. ಕೂಡಲೇ ವಕ್ಫ್‌ಗೆ ಸಂಬಂಧಿಸಿದಂತೆ ಎಲ್ಲ ಕೆಲಸಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ರೈತರ ದೊಡ್ಡ ಕ್ರಾಂತಿಯಲ್ಲಿ ನಾವೂ ಪಾಲ್ಗೊಳುತ್ತೇವೆ ಎಂದು ಎಚ್ಚರಿಸಿದರು.

ಮನಗೂಳಿ ಹಿರೇಮಠದ ಸಂಗನಬಸವ ಸ್ವಾಮಿಜಿಗಳು ಮಾತನಾಡಿ, ವಕ್ಫ್ ಮಂಡಳಿಯ ಏಕರೂಪದ ಕಾನೂನಿನಡಿ ಅನ್ಯಾಯಕೊಳಗಾದ ರೈತರು ನ್ಯಾಯ ಕೇಳುವಂತಿಲ್ಲ. ಕೃಷಿ ಸಾಲ ಪಡೆಯುವಂತಿಲ್ಲ, ಜಮೀನು ಮಾರಾಟ ಹಾಗೂ ವರ್ಗಾವಣೆ ಮಾಡುವಂತಿಲ್ಲ ಎನ್ನುವುದು ದುರದೃಷ್ಟಕರ. ಇದರಿಂದ ಇಡೀ ನಾಡಿನ ಅನ್ನದಾತರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಈ ಕರಾಳ ಕಾಯ್ದೆಯನ್ನು ಬೇರು ಸಮೇತವಾಗಿ ಕಿತ್ತೊಗೆಯಬೇಕು. ನಾವು ಇದಕ್ಕೆ ಬೆಂಬಲ ಸೂಚಿಸುತ್ತೆವೆ ಎಂದರು.

ಈ ವೇಳೆ ದೇವರಹಿಪ್ಪರಗಿ ಸದಯ್ಯನಮಠದ ಗಂಗಾಧರ ಸ್ವಾಮಿಜಿ, ಬಂಥನಾಳದ ಶ್ರೀಗಳು, ಹತ್ತಳ್ಳಿ ಶ್ರಿಗಳು, ಮಸಬಿನಾಳ ಶ್ರಿಗಳು, ತಡವಲಗಾ ಶ್ರೀಗಳು, ಹಿರೂರ ಶ್ರೀಗಳು, ಕಲಕೇರಿಯ ಶ್ರೀಗಳು, ಕೊರವಾರ ಚೌಕಿಮಠ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮುಖಂಡ ಉಮೇಶ ಕಾರಜೊಳ ಹಾಗೂ ರೈತ ಮುಖಂಡ ಅರವಿಂದ ಕುಲಕರ್ಣಿ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಸೋಮು ಬಿರಾದಾರ, ಸಂಗಪ್ಪ ಟಕ್ಕೆ, ನಜೀರ ನಂದರಗಿ, ಅರವಿಂದ ರಜಪೂತ, ಮನೋಜ ಮಹಾಂತಮಠ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.----------ಕೋಟ್

ನೇಗಿಲಯೋಗಿಯ ರಕ್ಷಣೆಗಾಗಿ ನಾಡಿನ ಎಲ್ಲ ಮಠಾಧೀಶರು ಒಟ್ಟಾಗಿ ರೈತರಿಗೆ ಬೆಂಬಲ ಸೂಚಿಸುತ್ತಿದ್ದಾರೆ. ರೈತರು ಹಾಗೂ ಮಠಮಾನ್ಯಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಈ ನಾಡು ಸುರಕ್ಷಿತವಾಗಿ ಉಳಿಯಬೇಕಾದರೆ ರೈತರು ಉಳಿಯಬೇಕು ಎಂಬ ದಿಟ್ಟ ಸಂದೇಶವನ್ನು ಕೊಡುತ್ತಿರುವುದು ಎಲ್ಲಾ ಸ್ವಾಮೀಜಿಗಳ ರೈತಪರ ಕಾಳಜಿ ಕಾಣುತ್ತಿದೆ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

- ಉಮೇಶ ಕಾರಜೋಳ, ಯುವ ಭಾರತ ಸಮಿತಿ ಅಧ್ಯಕ್ಷರು.