ಜನ್ಮದಿನ ದಿನವೇ ವಿದ್ಯಾರ್ಥಿ ಆತ್ಮಹತ್ಯೆ

| Published : Aug 17 2024, 12:45 AM IST

ಸಾರಾಂಶ

ಸಂಕೇಶ್ವರ: ಹುಟ್ಟುಹಬ್ಬದ ದಿನವೇ ವಿದ್ಯಾರ್ಥಿಯೋರ್ವ ಹಾಸ್ಟೆಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನೀಡಸೋಸಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸಂಕೇಶ್ವರ: ಹುಟ್ಟುಹಬ್ಬದ ದಿನವೇ ವಿದ್ಯಾರ್ಥಿಯೋರ್ವ ಹಾಸ್ಟೆಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನೀಡಸೋಸಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮಯೂರ ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ನಿವಾಸಿ, ನಿಡಸೋಸಿಯ ಎಸ್ ಜೆಪಿಎನ್ ಟ್ರಸ್ಟ್ ನ ವಿಜ್ಞಾನ ಪಿಯು ಕಾಲೇಜಿನ ಪ್ರಥಮ ಷರ್ಷದ ವಿದ್ಯಾರ್ಥಿ ಮಯೂರ ಕುಂಬಾರ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಿಡಸೋಸಿಯ ಹಾಸ್ಟೆಲ್ ಕೋಣೆಯಲ್ಲಿ ಶುಕ್ರವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.