ಶಾಲಾ ಬೀಳ್ಕೊಡುಗೆ ಕಾರ್ಯಕ್ರಮದಿಂದ ಹೊರಟು ಮಸಣ ಸೇರಿದ ವಿದ್ಯಾರ್ಥಿನಿ

| Published : Feb 11 2025, 12:47 AM IST

ಶಾಲಾ ಬೀಳ್ಕೊಡುಗೆ ಕಾರ್ಯಕ್ರಮದಿಂದ ಹೊರಟು ಮಸಣ ಸೇರಿದ ವಿದ್ಯಾರ್ಥಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಮೃತ ವಿದ್ಯಾರ್ಥಿನಿ ಕುಣಿಗಲ್ ತಾಲೂಕಿನ ಕೊತ್ತಕೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮದ ವಾಸಿಯಾಗಿದ್ದು ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಕನ್ನಡಪ್ರಭ ವಾರ್ತೆ ಕುಣಿಗಲ್ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ಬೀಳ್ಕೊಡುಗೆ ಮುಗಿಸಿ ಹೊರಟ 10ನೇ ತರಗತಿ ವಿದ್ಯಾರ್ಥಿನಿ ಇಂದುಶ್ರೀ (16) ರಸ್ತೆಯ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.ಮೃತ ವಿದ್ಯಾರ್ಥಿನಿ ಕುಣಿಗಲ್ ತಾಲೂಕಿನ ಕೊತ್ತಕೆರೆ ಹೋಬಳಿಯ ಬಾಗೇನಹಳ್ಳಿ ಗ್ರಾಮದ ವಾಸಿಯಾಗಿದ್ದು ಕುಣಿಗಲ್ ಪಟ್ಟಣದ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು,ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ತನ್ನ ಸ್ವಗ್ರಾಮಕ್ಕೆ ತೆರಳುವಾಗ ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಶನಿ ದೇವಾಲಯದ ಮುಂಭಾಗದಲ್ಲಿ ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.

ಕುಣಿಗಲ್ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಫೋಟೋ ಇದೆ : 10 ಕೆಜಿಎಲ್ 2 : ಅಪಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ :-