ಸಾರಾಂಶ
-ಸಾರ್ವಜನಿಕರ ಸಹಕಾರದಿಂದ ಮಾನಸಿಕ ರೋಗಿಗಳು ರೋಗ ಮುಕ್ತ । ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ನ್ಯಾಯಾಧೀಶ ಪ್ರಕಾಶ ಬನಸೊಡೆ
------ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ಸಾರ್ವಜನಿಕರು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದಾಗ ಬೀದರ ಜಿಲ್ಲೆಯು ಮಾನಸಿಕ ರೋಗಿಗಳು ರೋಗದಿಂದ ಮುಕ್ತಮಾಡಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೊಡೆ ಹೇಳಿದರು.ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2024” ಘೋಷವಾಕ್ಯ “ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ”ಎಂಬ ಘೋಷಣೆ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ಮಾನಸಿಕ ರೋಗಿಗಳನ್ನು ಸಮಾಜದಲ್ಲಿ ಗೌರವ ಭಾವದಿಂದ ಕಾಣಬೇಕು, ಮಾನಸಿಕ ರೋಗಿಗಳನ್ನು ಕಂಡಲ್ಲಿ ಸಂಬಂಧಪಟ್ಟ ವಲಯದ ಪೊಲೀಸ್ ಅಧಿಕಾರಿಗಳು ನ್ಯಾಯಧೀಶರ ಮುಂದೆ ಹಾಜರುಪಡಿಸಿ ಮಾನಸಿಕ ವಿಭಾಗದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಎಮ್ ಪಾಟೀಲ್ ಮಾತನಾಡಿ, ಮಾನಸಿಕ ಆರೋಗ್ಯ ಕುರಿತು ಸಲಹೆಗೆ ಟೋಲ್ ಫ್ರೀ ನಂ 14416 ಗೆ ಕರೆ ಮಾಡಿ ಆಪ್ತ ಸಮಾಲೋಕರ ಮತ್ತು ಮನೋವೈದ್ಯರ ಸಲಹೆ ಪಡೆದುಕೊಳಬೇಕೆಂದರು.
ಪ್ರತಿ 55 ನಿಮಿಷಕ್ಕೆ ದೇಶದಲ್ಲಿ ಒಬ್ಬ ವಿದ್ಯಾರ್ಥಿಬಲಿಬೀದರ್ ಬ್ರೀಮ್ಸ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗ ಮನೋವೈದ್ಯ ಡಾ. ರಾಘವೆಂದ್ರ ವಾಗೋಲೆ ಮಾತನಾಡಿ, ಸಮೀಕ್ಷೆ ಪ್ರಕಾರ 14 ರಿಂದ 19 ವರ್ಷದ ಮಕ್ಕಳಲ್ಲಿ ಮಾನಸಿಕ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಪ್ರತಿ 55 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಮಾನಸಿಕ ಕಾಯಿಲೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರೋಟಿನ್ ಮತ್ತು ಕ್ಯಾಲ್ಸಿಯಮ್‌ಯುತ ಆಹಾರ ಸೇವಿಸಬೇಕು ವ್ಯಾಯಾಮ ಮತ್ತು ಧ್ಯಾನವನ್ನು ದಿನಚರಿಯಾಗಿ ಮಾಡಿಕೊಳ್ಳಬೇಕೆಂದರು.
ಆಧುನಿಕ ಯುಗದಲ್ಲಿ ಯುವಜನತೆ ಅತಿಯಾಗಿ ಮೊಬೈಲ್ ನಿಂದ ಅನೇಕ ವಿದ್ಯಾರ್ಥಿಗಳು ದುಶ್ಚಚಟಗಳಿಂದ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನೆ ನಾಶಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಬೀದರ್ ಭಿಮ್ಸ್ ಆಸ್ಪತ್ರೆಯ ಡಾ.ಅನಿಲಕುಮಾರ ಎಕಲಾರೆ, ಜಿಲ್ಲಾ ಮಾನಸಿಕ ವಿಭಾಗದ ಮನೋಶಾಸ್ತ್ರಜ್ಞರಾದ ಡಾ.ಮಲ್ಲಿಕಾರ್ಜುನ ಗುಡ್ಡೆ, ಜಿಲ್ಲಾ ಮಾನಸಿಕ ವಿಭಾಗದ ಆಪ್ತ ಸಮಾಲೋಚಕ ಸಿಮಪ್ಪಾ ಸರಕೂರೆ, ವಕೀಲರಾದ ಶಿವರಾಜ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಪರಶುರಾಮ, ಜ್ಯೋತಿ, ರೇಣುಕಾ, ರಾಠೋಡ್ ಪ್ರಮೋದ್, ಅಂಬಾದಾಸ, ಇಮಾನುವೇಲ್, ಶಾಮರಾವ್, ಸಂಜು ಮಲಿಗಿಕರ, ಸಂಗಮೇಶ, ಅಬ್ದುಲ್ ಹೈ, ಶರಣಬಸಪ್ಪಾ, ಜಿಲಾನಿ ಉಪಸ್ಥಿತರಿದ್ದರು.
ಕುಷ್ಠರೋಗ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ನಿರೂಪಿಸಿದರು.--
ಫೋಟೊ: 10ಬಿಡಿಆರ್54ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ನ್ಯಾಯಾಧೀಶರು ಮಾತನಾಡಿದರು.